ದೊಡ್ಡಬಳ್ಳಾಪುರ: ಮೈಸೂರು ಭಾಗದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದ್ದ ಎಸ್ಪಿ ರವಿ ಡಿ. ಚನ್ನಣ್ಣನವರ್ ಅವರು ಬೆಂಗಳೂರು ಗ್ರಾಮಾಂತರ ಭಾಗದಲ್ಲೂ ಅದನ್ನೇ ಮುಂದುವರಿಸಿದ್ದಾರೆ.
ಚನ್ನಣ್ಣನವರ್ ಅವರು ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡೋ ಮೂಲಕ ಜನರ ಜೊತೆ ಬೆರೆತು ಅವರ ಸಮಸ್ಯೆಗಳನ್ನ ಅಲಿಸಿದ್ರು. ಅವರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.
ಜಿಂಕೆ ಬಚ್ಚಹಳ್ಳಿ ಯುವಕರ ತಂಡ ಮತ್ತು ಪೊಲೀಸ್ ತಂಡದೊದಿಗೆ ಕಬಡ್ಡಿ ಪಂದ್ಯಾವಳಿ ನಡೆಸಲಾಯಿತು. ಜಿದ್ದಾಜಿದ್ದನಿಂದ ಕೂಡಿದ ಪಂದ್ಯಾವಳಿಯಲ್ಲಿ 39-41 ಅಂತರದಲ್ಲಿ ಜಿಂಕೆಬಚ್ಚಹಳ್ಳಿ ಯುವಕರ ತಂಡ ಪಂದ್ಯವನ್ನು ಗೆದ್ದು ಬೀಗಿತು. ನಂತರ ಗ್ರಾಮಸ್ಥರ ಜೊತೆ ಊಟ ಸವಿದರು.