ETV Bharat / state

ಸದ್ಯ ಉಸಿರಾಡುವುದಕ್ಕೆ ಎಷ್ಟು ಬೇಕೋ, ಅಷ್ಟು ನೆರೆ ಪರಿಹಾರ ಕೊಟ್ಟಿದ್ದಾರೆ.. ಎಸ್ ಆರ್ ವಿಶ್ವನಾಥ್ - ಎಸ್.ಆರ್.ವಿಶ್ವನಾಥ್

ನೆರೆ ಪೀಡಿತ ಪ್ರದೇಶಕ್ಕೆ ವಿಜಯ ದಶಮಿ ಉಡುಗೊರೆಯಾಗಿ ಮೊದಲ ಕಂತಿನ ₹1200 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಕಾರ್ಯದರ್ಶಿ ಎಸ್​ ಆರ್‌ ವಿಶ್ವನಾಥ್ ಹೇಳಿದರು.

ಸಿಎಂ ಕಾರ್ಯದರ್ಶಿ ಎಸ್​.ಆರ್​.ವಿಶ್ವನಾಥ್
author img

By

Published : Oct 5, 2019, 4:06 PM IST

ಬೆಂಗಳೂರು:ಕೇಂದ್ರ ಸರ್ಕಾರ ನೆರೆ ಪೀಡಿತ ಪ್ರದೇಶಕ್ಕೆ ವಿಜಯದಶಮಿ ಉಡುಗೊರೆಯಾಗಿ ಮೊದಲ ಕಂತಿನಲ್ಲಿ 1,200 ಕೋಟಿ ರೂ. ಬಿಡುಗಡೆ ಮಾಡಿದೆ. ಸದ್ಯ ಉಸಿರಾಡುವುದಕ್ಕೆ ಎಷ್ಟು ಬೇಕೋ‌ ಅಷ್ಟು ಕೊಟ್ಟಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್ ತಿಳಿಸಿದರು.

Vijay Dashami gift neighbors relief money
ಸಿಎಂ ಸಂಸದೀಯ ಕಾರ್ಯದರ್ಶಿ ಎಸ್ ಆರ್ ವಿಶ್ವನಾಥ್..

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೇಂದ್ರ ನೆರೆ ಪರಿಹಾರ ಬಿಡುಗಡೆಯಾಗಿರುವುದು ಒಂದು ಆಶಾಕಿರಣ. ಈ ಹಿಂದೆ ಪ್ರಧಾನಿ ಮೋದಿಯವರು ಒಡಿಶಾ, ಬಿಹಾರ ಪ್ರವಾಹ ವಿಚಾರವಾಗಿ ಟ್ವೀಟ್ ಮಾಡಿರುವುದಕ್ಕೆ ಟೀಕೆ ವ್ಯಕ್ತವಾಗಿತ್ತು. ಆದರೆ, ಇದೀಗ ನಮ್ಮ ರಾಜ್ಯಕ್ಕೆ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯದ ಜನತೆ ಹಾಗೂ ಸಿಎಂ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿಯವರು ಯಾವುದೇ ರಾಜ್ಯಕ್ಕೆ ತಾರತಮ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನೆರೆ ಭಾಗದಲ್ಲಿ ವಾಸ್ತವ್ಯ ಹೂಡಲಿ: ನೆರೆ ಭಾಗದಲ್ಲಿ ಸಚಿವರು, ಶಾಸಕರು ವಾಸ್ತವ್ಯ ಮಾಡಲಿ ಎಂದು ಎಸ್ ಆರ್ ವಿಶ್ವನಾಥ್ ಮನವಿ ಮಾಡಿದರು. ನೆರೆ ಭಾಗದಲ್ಲಿ ಈವರೆಗೂ ಜನರು ಶಾಲೆ, ಕಲ್ಯಾಣ ಮಂಟಪದಲ್ಲಿ ಹಾಗೂ ಇತರೆ ಕಡೆ ಉಳಿದುಕೊಂಡಿದ್ದಾರೋ? ಎಂದು ತಿಳಿದುಕೊಳ್ಳಲು ಸಚಿವರು, ಶಾಸಕರು ವಾಸ್ತವ್ಯ ಹೂಡಬೇಕಿದೆ ಎಂದರು.

ಇದರಿಂದ ಅಲ್ಲಿನ‌ ಸಮಸ್ಯೆ ಏನಿದೆ‌ ಎಂದು‌ ಅರಿತು ಬಂದಿರುವ ಪರಿಹಾರ ಸದ್ಬಳಕೆ ಮಾಡಬಹುದಾಗಿದೆ. ಅದರಿಂದ ಸಂತ್ರಸ್ತರ ಸಂಕಷ್ಟ ಏನಿದೆ‌ ಎಂದು ಗೊತ್ತಾಗುತ್ತದೆ. ಈ‌ ಮನವಿಯನ್ನು ಸಿಎಂ ಕಡೆಯಿಂದ ಮಾಡಿಸುತ್ತೇನೆ. ಆ ಭಾಗದ ಶಾಸಕರು, ಸಂತ್ರಸ್ತರ ಜತೆ ವಾಸ್ತವ್ಯ ಮಾಡುವುದು ಒಳ್ಳೆಯದು ಎಂದು ತಿಳಿಸಿದರು. ಇದೇ ವೇಳೆ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಮಾಡುವುದು ಉತ್ತಮವಾಗಿದ್ದು, ಅದನ್ನು ಸ್ವಾಗತಿಸುತ್ತೇನೆ ಎಂದರು. ಬೆಳೆಯುವ ಪೈರು ಮೊಳಕೆಯಲ್ಲಿ ಎಂಬಂತೆ ಮಕ್ಕಳಿಗೆ ಪಾಠದ ಮಹತ್ವ, ಏಕೆ ಪಾಸಾಗಬೇಕು ಎಂಬ ಬಗ್ಗೆ ಭಯ ಬಂದರೆ ಚೆನ್ನಾಗಿ ಓದುತ್ತಾರೆ. ವೈಯಕ್ತಿವಾಗಿ ನಾನು ಅದನ್ನು ಸ್ವಾಗತಿಸುತ್ತೇನೆ ಎಂದರು.

Intro:hhhh

Body:hhhh

Conclusion:hhhh
ETV Bharat Logo

Copyright © 2025 Ushodaya Enterprises Pvt. Ltd., All Rights Reserved.