ETV Bharat / state

ವಿಧಾನಸೌಧದಲ್ಲಿ ಹೈ ಅಲರ್ಟ್: ಮಾಸ್ಕ್ ಧರಿಸದ  ಪ್ರತಾಪ್ ಸಿಂಹ ಪ್ರವೇಶಕ್ಕೆ ನಿರ್ಬಂಧ! - ಸಂಸದ ಪ್ರತಾಪ್​ ಸಿಂಹ ಲೇಟೆಸ್ಟ್​ ನ್ಯೂಸ್​

ಮಾಸ್ಕ್ ಧರಿಸದೇ ವಿಧಾನಸೌಧಕ್ಕೆ ಆಗಮಿಸಿದ ಸಂಸದ ಪ್ರತಾಪ್‌ ಸಿಂಹಗೆ ಆರೋಗ್ಯ ಸಿಬ್ಬಂದಿ ನಿರ್ಬಂಧ ಹೇರಿದ ಘಟನೆ ಇಂದು ವಿಧಾನಸೌಧದಲ್ಲಿ ನಡೆದಿದೆ. ಮಾಸ್ಕ್​ ಇಲ್ಲದ ಕಾರಣ ಪ್ರತಾಪ್​ ಸಿಂಹ ವಾಪಸ್​​ ತೆರಳಿದ್ದಾರೆ.

shaktisoudha
ವಿಧಾನಸೌಧ ಸುತ್ತಮುತ್ತ ಸ್ಯಾನಿಟೈಸ್
author img

By

Published : Jun 19, 2020, 1:32 PM IST

ಬೆಂಗಳೂರು: ಮಾಸ್ಕ್ ಧರಿಸದೇ ವಿಧಾನಸೌಧಕ್ಕೆ ಆಗಮಿಸಿದ್ದ ಸಂಸದ ಪ್ರತಾಪ್‌ ಸಿಂಹ ಅವರಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ನಿರ್ಬಂಧ ಹೇರಿದ ಘಟನೆ ನಡೆದಿದೆ.

ವಿಧಾನಸೌಧ ಸುತ್ತಮುತ್ತ ಸ್ಯಾನಿಟೈಸ್
ಇಂದು ಬೆಳಗ್ಗೆ ಸಂಸದ ಪ್ರತಾಪ ಸಿಂಹ ಮಾಸ್ಕ್ ಧರಿಸದೇ ವಿಧಾನಸೌಧಕ್ಕೆ ಎಂಟ್ರಿ ಕೊಟ್ಟರು. ವಿಧಾನಸೌಧದ ಪಶ್ಚಿಮ ಗೇಟ್ ಬಳಿ ಇದ್ದ ಆರೋಗ್ಯ ಸಿಬ್ಬಂದಿ ಪ್ರತಾಪ್ ಸಿಂಹ ಅವರ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ಥರ್ಮಲ್‌ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸ್ ಮಾಡುವ ಸಿಬ್ಬಂದಿ ಸಂಸದರಿಗೆ ಮಾಸ್ಕ್ ಧರಿಸುವಂತೆ ಒತ್ತಾಯಿಸಿದರು.
ವಿಧಾನಸೌಧ ಪ್ರವೇಶಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಹೀಗಾಗಿ ಮಾಸ್ಕ್ ಧರಿಸದೇ ವಿಧಾನಸೌಧ ಒಳಪ್ರವೇಶಕ್ಕೆ ತಪಾಸಣಾ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದರು. ಮಾಸ್ಕ್ ಧರಿಸಿಕೊಂಡು ಬರುವಂತೆ‌ ಸಿಬ್ಬಂದಿ ಮನವಿ ಕೂಡ ಮಾಡಿದ್ದಾರೆ. ಆದರೆ ಮಾಸ್ಕ್ ಇಲ್ಲದ ಕಾರಣ ಸಂಸದ ಪ್ರತಾಪ್ ಸಿಂಹ ಬಳಿಕ ವಾಪಸ್ ತೆರಳಿದರು.
ಈಗಾಗಲೇ ಕೊರನಾ ಶಕ್ತಿಸೌಧಕ್ಕೆ ಕಾಲಿಟ್ಟಿದೆ. ಹೀಗಾಗಿ ವಿಧಾನಸೌಧದಲ್ಲಿ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಗೃಹ ಕಚೇರಿ ಕೃಷ್ಣಾಕ್ಕೂ ಕೊರೊನಾ ಕಾಲಿಟ್ಟ ಕಾರಣ, ಇಂದು ಸಿಎಂ ತಮ್ಮ ಎಲ್ಲ ಸಭೆಗಳನ್ನು ವಿಧಾನಸೌಧಕ್ಕೆ ಶಿಫ್ಟ್ ಮಾಡಿದ್ದಾರೆ. ಹೀಗಾಗಿ ತಪಾಸಣಾ‌ ಸಿಬ್ಬಂದಿ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಹೀಗಾಗಿ‌ ಮಾಸ್ಕ್ ಧರಿಸದೇ ಬಂದ ಸಂಸದ ಪ್ರತಾಪ್ ಸಿಂಹ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು.
ವಿಧಾನಸೌಧ ಸುತ್ತಮುತ್ತ ಸ್ಯಾನಿಟೈಸ್: ಇತ್ತ ಕೊರೊನಾ ಭೀತಿ ಹಿನ್ನೆಲೆ ವಿಧಾನಸೌಧ ಸುತ್ತಮುತ್ತ ಸ್ಯಾನಿಟೈಸ್ ಕಾರ್ಯ ನಡೆಸಲಾಯಿತು. ನಿನ್ನೆ ಸಂಜೆ ವಿಕಾಸಸೌಧವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿತ್ತು.‌ ಇದೀಗ ವಿಧಾನಸೌಧದ ಸುತ್ತಮುತ್ತ, ಪ್ರವೇಶ ದ್ವಾರಗಳಲ್ಲಿ ಸ್ಯಾನಿಟೈಸ್ ಮಾಡಿ ಶುಚಿಗೊಳಿಸಲಾಗುತ್ತಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.