ETV Bharat / state

ವಿಧಾನಪರಿಷತ್​ ಕಲಾಪ : ಆಡಳಿತ - ಪ್ರತಿಪಕ್ಷ ಸದಸ್ಯರ ನಡುವೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ

ಇಂದಿನ ವಿಧಾನಪರಿಷತ್​ ಕಲಾಪದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆದವು. ಆಹಾರ ಇಲಾಖೆಯ ಅಕ್ರಮ, ರೈತರ ಸಾಲ ಮನ್ನಾ ಸೇರಿದಂತೆ ಪ್ರಮುಖ ವಿಷಯಗಳ ಸದಸ್ಯರು ಬೆಳಕು ಚೆಲ್ಲಿದರು.

Vidhana Parishat session-2020
ವಿಧಾನಪರಿಷತ್​ ಕಲಾಪ
author img

By

Published : Mar 17, 2020, 6:46 PM IST

ಬೆಂಗಳೂರು: ಇಂದಿನ ವಿಧಾನಪರಿಷತ್​ ಕಲಾಪದಲ್ಲಿ ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಆರೋಗ್ಯಕರ ಪ್ರಶ್ನೋತ್ತರಗಳು ನಡೆದವು.

ಕಲಾಪದಲ್ಲಿ ಆರೋಗ್ಯ ಇಲಾಖೆಯ ಅಕ್ರಮಗಳ ಬಗ್ಗೆ ಕಾಂಗ್ರೆಸ್ ಸದಸ್ಯ ಎನ್.ಎಸ್. ಭೋಸರಾಜು ಕೇಳಿದ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಆಹಾರ ಸಚಿವ ಕೆ.ಗೋಪಾಲಯ್ಯ, ಪ್ರತಿ ವಾರಾಂತ್ಯದಲ್ಲಿ ಒಂದೊಂದು ಜಿಲ್ಲೆಗೆ ಭೇಟಿಕೊಟ್ಟು ತಪಾಸಣೆ ನಡೆಸುತ್ತಿದ್ದೇನೆ. ಕೊರೊನಾ ಹಿನ್ನೆಲೆ ಈ ವಾರ ಭೇಟಿ ನೀಡಲು ಸಾಧ್ಯವಾಗಿಲ್ಲ. ಅಕ್ರಮ ಪತ್ತೆ ಆದಲ್ಲಿ ಕ್ರಮಕೈಗೊಳ್ಳುತ್ತೇನೆ. ಇನ್ನು ಆರೇಳು ತಿಂಗಳು ಕಾಲಾವಕಾಶ ಕೊಡಿ. ಎಲ್ಲಾ ಸಮಸ್ಯೆ ನಿವಾರಿಸಲು ಯತ್ನಿಸುತ್ತೇನೆ. ಒಬ್ಬರಿಗೆ ನಾಲ್ಕೈದು ಪಡಿತರ ಚೀಟಿ ನೀಡಿದ ಆರೋಪ‌ ಇದೆ. ಸಾಕಷ್ಟು ಕಡೆ ಈ ಸಮಸ್ಯೆ ಪತ್ತೆ ಮಾಡಿ‌ ಕ್ರಮಕೈಗೊಂಡಿದ್ದೇವೆ. ಯಾವುದೇ ಸದಸ್ಯರು ಅವರ ಭಾಗದಲ್ಲಿ ಅಕ್ರಮ ಆಗಿದ್ದರೆ ಅದನ್ನು ತಮ್ಮ ಗಮನಕ್ಕೆ ತನ್ನಿ, ಕ್ರಮಕ್ಕೆ ಸೂಚಿಸುತ್ತೇನೆ. ಕೊರೊನಾ ಭೀತಿ ಹಿನ್ನೆಲೆ ಬಯೊಮೆಟ್ರಿಕ್ ವ್ಯವಸ್ಥೆ ತೆಗೆದು ಹಾಕುತ್ತಿದ್ದೇವೆ. ಕಾರ್ಡ್ ಆಧಾರದ ಮೇಲೆ ಪಡಿತರ ವಿತರಿಸುವ ಕಾರ್ಯ ಮಾಡುತ್ತೇವೆ. ಜನ ಆತಂಕ ಪಡುವುದು ಬೇಡ ಎಂದು ತಿಳಿಸಿದರು.

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡರ ಪ್ರಶ್ನೆಗೆ ಉತ್ತರಿಸಿದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, 466 ಕೋಟಿ ಸಾಲದ ಬಡ್ಡಿ ಮನ್ನಾಗೆ ಸರ್ಕಾರ ಒಪ್ಪಿದೆ. 60 ಕೋಟಿ ಅಸಲನ್ನು ಸುಸ್ಥಿದಾರರು ಕಟ್ಟಿದ್ದಾರೆ. ಅಸಲು ಮನ್ನಾ ಮಾಡುವ ಪ್ರಸ್ತಾಪ ಇಲ್ಲ. ಅದಕ್ಕೆ ಅವಕಾಶ ಇಲ್ಲ. ಸದಸ್ಯರು ಸಾಲದ ಅಸಲು ಕಟ್ಟಿದರೆ, ಬಡ್ಡಿ ಮನ್ನಾ ಮಾಡುವ ಅವಕಾಶ ಮಾರ್ಚ್ 31 ರ ವರೆಗೆ ಇದೆ. ಅವಧಿ ಮುಕ್ತಾಯಕ್ಕೆ ಮುನ್ನವೇ ಮುಂದುವರಿಸುತ್ತೇವೆ ಎಂದು ಹೇಳಲಾಗದು. ಎರಡು, ಮೂರು ದಿನ ಮುನ್ನ ಸಂಗ್ರಹವಾಗಿರುವ ಸಾಲದ ಅಸಲು ವಾಪಸಾತಿ ಗಮನಿಸಿ ಸಿಎಂ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ದಿನಾಂಕ ವಿಸ್ತರಣೆಗೆ ಈಗಲೇ ಭರವಸೆ ನೀಡಲಾಗದು ಎಂದರು.

ಆಗ ಮರಿತಿಬ್ಬೇಗೌಡ ಸೇರಿದಂತೆ ಹಲವು ಸದಸ್ಯರು ದಿನಾಂಕ‌ ಮುಂದುವರಿಸಿ. ಜನರ ಬಳಿ ದುಡ್ಡಿಲ್ಲ. ಇನ್ನೊಂದು ಬೆಳೆ ಬರಲಿ. ಹೀಗಾಗಿ ಸೆಪ್ಟೆಂಬರ್​​ವರೆಗೆ ಅವಕಾಶ ನೀಡಿ. ಆರು ತಿಂಗಳು ಕಾಲಾವಕಾಶ ನೀಡಿದರೆ ಶೇ.99 ರಷ್ಟು ಮಂದಿ ರೈತರು ಹಣ ಕಟ್ಟುತ್ತಾರೆ ಎಂದರು. ಇದಕ್ಕೆ ಸಚಿವರು ಪ್ರತಿಕ್ರಿಯೆ ನೀಡಿ, ಹಣಕಾಸು ಇಲಾಖೆ ಕಂತು ನೀಡುವುದಕ್ಕೆ ಒಪ್ಪಿಲ್ಲ. ಮುಂದುವರಿಕೆಗೆ ಒಪ್ಪುವ ಸಾಧ್ಯತೆ ಕಡಿಮೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.