ETV Bharat / state

ಪೌರಕಾರ್ಮಿಕನಿಗೆ ಕಪಾಳಮೋಕ್ಷ ‌ಮಾಡಿದ ಟ್ರಾಫಿಕ್‌ ಇನ್​ಸ್ಪೆಕ್ಟರ್​ - ವಿಡಿಯೋ ವೈರಲ್​​

ಜೆ.ಜೆ.ನಗರದ ರಾಯಪುರ ವಾರ್ಡ್ ನ ರಸ್ತೆಯೊಂದರಲ್ಲಿ ಕಸದ ವಾಹನವನ್ನು ನಡು ರಸ್ತೆಯಲ್ಲೇ ಪಾರ್ಕ್ ಮಾಡಲಾಗಿತ್ತು. ಈ ಸಂಬಂಧ ಪೌರಕಾರ್ಮಿಕ ಹಾಗೂ ಇನ್​ಸ್ಪೆಕ್ಟರ್ ನಡುವೆ ಮಾತಿನ ಚಕುಮಕಿ ನಡೆದಿದೆ. ನಂತರ ಇನ್​ಸ್ಪೆಕ್ಟರ್, ಪೌರಕಾರ್ಮಿಕನಿಗೆ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್​​ ಆಗಿದೆ.

author img

By

Published : Dec 20, 2020, 10:50 AM IST

Updated : Dec 20, 2020, 11:03 AM IST

Video Viral of a traffic inspector who has slapped a Civil Labor
ಪೌರಕಾರ್ಮಿಕನಿಗೆ ಕಪಾಳಮೋಕ್ಷ ‌ಮಾಡಿದ ಟ್ರಾಫಿಕ್‌ ಇನ್‌ ಸ್ಪೆಕ್ಟರ್

ಬೆಂಗಳೂರು: ಪಾರ್ಕಿಂಗ್‌ ವಿಚಾರವಾಗಿ‌ ಪೌರಕಾರ್ಮಿಕನ ಮೇಲೆ ಮಾಗಡಿ ರೋಡ್ ಟ್ರಾಫಿಕ್‌ ಇನ್​ಸ್ಪೆಕ್ಟರ್ ಅವಾಚ್ಯ ಪದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಆನಂದ್ ಕಪಾಳಮೋಕ್ಷ ಮಾಡಿರುವ ಆರೋಪಿ ಇನ್​ಸ್ಪೆಕ್ಟರ್. ಜೆ.ಜೆ. ನಗರದ ರಾಯಪುರ ವಾರ್ಡ್ ನ ರಸ್ತೆಯೊಂದರಲ್ಲಿ ಕಸದ ವಾಹನ ನಡು ರಸ್ತೆಯಲ್ಲೇ ಪಾರ್ಕ್ ಮಾಡಲಾಗಿತ್ತು. ಸ್ಥಳಕ್ಕೆ ಬಂದ್ ಇನ್‌ಸ್ಪೆಕ್ಟರ್ ತಂಡ ವಾಹನದ ಮಾಲೀಕನೊಂದಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗ್ತಿದೆ.

ಪೌರಕಾರ್ಮಿಕನಿಗೆ ಕಪಾಳಮೋಕ್ಷ ‌ಮಾಡಿದ ಟ್ರಾಫಿಕ್‌ ಇನ್​ಸ್ಪೆಕ್ಟರ್​ ವಿಡಿಯೋ ವೈರಲ್

ಈ ವೇಳೆ ಇಬ್ಬರ ನಡುವೆ ಮಾತಿನ ಚಕುಮಕಿ ತೀವ್ರಗೊಳ್ಳುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ಇನ್‌ಸ್ಪೆಕ್ಟರ್ ಆನಂದ್ ನಡುರಸ್ತೆಯಲ್ಲೇ ಪೌರಕಾರ್ಮಿಕನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಜೊತೆಯಲ್ಲಿದ್ದ ಪಿಎಸ್ಐ ದುಂಡಾವರ್ತನೆ ಮೆರೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸ್ಥಳೀಯರು ಈ ಕೃತ್ಯವನ್ನು ಸೆರೆಹಿಡಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಲೀಸರ ವರ್ತನೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನು ಓದಿ : ಎರಡೇ ಗಂಟೆಯಲ್ಲಿ 23 ಲಕ್ಷ ರೂ. ದಂಡ ವಸೂಲಿ : ವಾಹನ ಸವಾರರಿಗೆ ಶಾಕ್​ ನೀಡಿದ ಟ್ರಾಫಿಕ್​​ ಪೊಲೀಸ್

Last Updated : Dec 20, 2020, 11:03 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.