ETV Bharat / state

ಬೆಂಗಳೂರಲ್ಲಿ ವಾಹನ ವಿಮೆ ಬದಲಾಯಿಸುವ ಬೃಹತ್ ಜಾಲ ಪತ್ತೆ: ಆರೋಪಿ ಅಂದರ್ - ಈಟಿವಿ ಭಾರತ ಕನ್ನಡ ನ್ಯೂಸ್​

ಬೆಂಗಳೂರಿನಲ್ಲಿ ನಾಲ್ಕು ಚಕ್ರದ ವಾಹನಗಳಿಗೆ ವಿಮೆ ಮಾಡಿಸಿ ದ್ವಿಚಕ್ರ ವಾಹನಗಳಿಗೆ ವಿಮೆ ಪಾವತಿ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಭಾರತದಾದ್ಯಂತ ಈ ಮೋಸದ ಜಾಲ ಹರಡಿರುವ ಶಂಕೆ ವ್ಯಕ್ತವಾಗಿದೆ.

vehicle-insurance-scam-in-bengaluru
ಬೆಂಗಳೂರಲ್ಲಿ ವಾಹನ ವಿಮೆ ಬದಲಾಯಿಸುವ ಬೃಹತ್ ಜಾಲ ಪತ್ತೆ: ಆರೋಪಿ ಅಂದರ್ಬೆಂಗಳೂರಲ್ಲಿ ವಾಹನ ವಿಮೆ ಬದಲಾಯಿಸುವ ಬೃಹತ್ ಜಾಲ ಪತ್ತೆ: ಆರೋಪಿ ಅಂದರ್
author img

By

Published : Sep 20, 2022, 6:16 PM IST

ಬೆಂಗಳೂರು : ಖಾಸಗಿ ಕಂಪನಿಗಳಲ್ಲಿ ವಾಹನ ವಿಮೆ ಮಾಡಿಸುವ ಗ್ರಾಹಕರೇ ಎಚ್ಚರ. ನಾಲ್ಕುಚಕ್ರದ ವಾಹನಗಳಿಗೆ ವಿಮೆ ಮಾಡಿಸಿದರೆ ನಿಮ್ಮ ವಾಹನಕ್ಕೆ ದ್ವಿಚಕ್ರ ವಾಹನದ ವಿಮೆ ಕಟ್ಟುತ್ತಾರೆ. ಬೆಂಗಳೂರಿನಲ್ಲಿ ಇಂತಹ ಅಕ್ರಮ ವಿಮೆ ಬದಲಾಯಿಸುವ ಬೃಹತ್ ಜಾಲವಿರುವುದು ಪತ್ತೆಯಾಗಿದೆ.

ವಾಹನ ವಿಮೆ ಪಾವತಿಯಾದ ತಕ್ಷಣ ಆರ್ ಟಿಓ ಆನ್ಲೈನ್ ದಾಖಲೆಯಲ್ಲಿ ವಿಮೆಯ ಅವಧಿ ನಮೂದಾಗುತ್ತದೆ. ಆದರೆ, ಯಾವ ಮೊತ್ತದ ವಿಮೆ ಎಂಬುದು ಗೊತ್ತಾಗುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ವಾಣಿಜ್ಯ ಕಾರುಗಳಿಗೆ ಬೈಕ್ ಇನ್ಸ್ಯೂರೆನ್ಸ್ ಪಾವತಿ ಮಾಡುತ್ತಿದ್ದ ಆರೋಪಿ ಇರ್ಫಾನ್ ಶೇಖ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತವಾಗಿ ವಿಮಾ ಹಕ್ಕು ಪಡೆಯಲು ಹೋದಾಗ ಈತನ ಮೋಸ ಬೆಳಕಿಗೆ ಬಂದಿದೆ.

ಅಕೋ ಜನರಲ್​ ಇನ್ಸ್ಯೂರೆನ್ಸ್​ ಎಂಬ ಖಾಸಗಿ ವಿಮಾ ಕಂಪನಿಗೆ ಇದುವರೆಗೂ ಎರಡು ಕೋಟಿ ಮೌಲ್ಯದ ನಕಲಿ ವಿಮೆ ಮಾಡಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಅಕೋ ಜನರಲ್​ ಇನ್ಸ್ಯೂರೆನ್ಸ್ ಕಂಪನಿಯು ಸಿಎನ್​ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿತ್ತು. ದೂರಿನನ್ವಯ ಆರೋಪಿ ಇರ್ಫಾನ್ ಶೇಖ್ ಎಂಬಾತನನ್ನು ಬಂಧಿಸಲಾಗಿದೆ.

2020ರ ಕೋವಿಡ್ ಸಮಯದಲ್ಲಿ ಎರಡೂವರೆ ಲಕ್ಷ ಕಾರುಗಳನ್ನು ಓಲಾ ಕಂಪನಿ ಚಾಲಕರು ಇಲ್ಲದೇ ಮಾರಾಟ ಮಾಡಿತ್ತು. ಒಂದು ವರ್ಷಕ್ಕೂ ಹೆಚ್ಚು ಕಾಲ ವಾಹನಗಳು ನಿಂತಿದ್ದು, ಇನ್ಸ್ಯೂರೆನ್ಸ್ ಮುಗಿದಿದ್ದ ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಅದರಲ್ಲಿ ಆರೋಪಿ ಇರ್ಫಾನ್ ಸಂಪರ್ಕದಲ್ಲಿದ್ದ ಹಲವರು ಓಲಾ ಕಂಪನಿಯಿಂದ 200ಕ್ಕೂ ಅಧಿಕ ಕಾರುಗಳನ್ನು ಖರೀದಿಸಿದ್ದರು. ಇದೇ ಕಾರುಗಳಿಗೆ ಇರ್ಫಾನ್ ಮೋಸದಿಂದ ವಿಮೆ ಮಾಡಿಸಿರುವುದು ಪತ್ತೆಯಾಗಿದೆ.

ಸದ್ಯ ರಾಜಸ್ಥಾನ, ದೆಹಲಿ, ಮುಂಬೈ, ಜಾರ್ಖಂಡ್, ಉತ್ತರಪ್ರದೇಶ ಸೇರಿ ಹಲವು ರಾಜ್ಯದಲ್ಲಿ ಇದೇ ರೀತಿ ಕೃತ್ಯ ಎಸಗಲಾಗಿದೆ. ಸದ್ಯ ಈ ವಂಚನೆಯ ಜಾಲ ಭಾರತದಾದ್ಯಂತ ಹಬ್ಬಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದ್ದಾರೆ.

ಇದನ್ನೂ ಓದಿ : ಶಿವಮೊಗ್ಗಕ್ಕೂ ಉಗ್ರರ ನಂಟು: ಶಂಕಿತ ಯುವಕರ ಬಂಧನ - ಎಸ್​ಪಿ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.