ಬೆಂಗಳೂರು: ರಾಜ್ಯದಲ್ಲಿ ತರಕಾರಿ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಟೊಮೇಟೊ, ಅವರೆಕಾಯಿ ದರವು ದುಬಾರಿಯಾಗಿದ್ದು, ಆದರೆ, ಇದೀಗ ಬಹುತೇಕ ಕಾಯಿಪಲ್ಲೆಗಳ ಬೆಲೆಯು ಇಳಿಮುಖವಾಗಿದೆ.
ಬೆಂಗಳೂರು ತರಕಾರಿ ದರ: ಹುರಳೀಕಾಯಿ 98 ರೂ., ಬದನೆಕಾಯಿ(ಬಿಳಿ) 64 ರೂ., ಬದನಕಾಯಿ (ಗುಂಡು) 45 ರೂ., ಬೀಟ್‍ರೂಟ್ 35 ರೂ., ಹಾಗಲಕಾಯಿ 55 ರೂ., ಸೌತೆಕಾಯಿ 40 ರೂ., ದಪ್ಪಮೆಣಸಿನಕಾಯಿ 74 ರೂ., ಹಸಿಮೆಣಸಿನಕಾಯಿ 60 ರೂ., ತೆಂಗಿನಕಾಯಿ ದಪ್ಪ 35 ರೂ., ನುಗ್ಗೇಕಾಯಿ 115 ರೂ., ಈರುಳ್ಳಿ ಮಧ್ಯಮ 20 ರೂ., ಸಾಂಬಾರ್ ಈರುಳ್ಳಿ 47 ರೂ., ಆಲೂಗಡ್ಡೆ 40 ರೂ., ಮೂಲಂಗಿ 36 ರೂ., ಟೊಮೇಟೊ 96 ರೂ., ಕೊತ್ತಂಬರಿ ಸೊಪ್ಪು 125 ರೂ., ಕರಿಬೇವು 63 ರೂ., ಬೆಳ್ಳುಳ್ಳಿ 96 ರೂ., ನಿಂಬೆಹಣ್ಣು 170 ರೂ., ಪುದೀನ 50 ರೂ., ಪಾಲಕ್ ಸೊಪ್ಪು 78 ರೂ., ಮೆಂತೆ ಸೊಪ್ಪು 135 ರೂ., ಸಬ್ಬಕ್ಕಿ ಸೊಪ್ಪು 200 ರೂ., ಬಸಳೆಸೊಪ್ಪು 38 ರೂ., ನವಿಲುಕೋಸು 60 ರೂ.ಗೆ ಮಾರಾಟವಾಗುತ್ತಿವೆ.
ಶಿವಮೊಗ್ಗ ತರಕಾರಿ ದರ(ಇಳಿಕೆ): ಮೆಣಸಿನಕಾಯಿ 30 ರೂ., M.Z ಬಿನ್ಸ್ 60 ರೂ., ರಿಂಗ್ ಬಿನ್ಸ್ 80 ರೂ., ಎಲೆಕೋಸು ಚೀಲಕ್ಕೆ 20 ರೂ., ಬಿಟ್ ರೂಟ್ 16 ರೂ., ಹೀರೆಕಾಯಿ 30 ರೂ., ಬೆಂಡೆಕಾಯಿ 40 ರೂ., ಹಾಗಲಕಾಯಿ 40 ರೂ., ಎಳೆ ಸೌತೆ 26 ರೂ., ಬಣ್ಣದ ಸೌತೆ 20 ರೂ., ಚವಳಿಕಾಯಿ 50 ರೂ., ತೊಂಡೆಕಾಯಿ 40 ರೂ., ನವಿಲುಕೋಸು 50 ರೂ., ಮೂಲಂಗಿ 30 ರೂ., ದಪ್ಪಮೆಣಸು 70 ರೂ., ಕ್ಯಾರೆಟ್ 40 ರೂ., ನುಗ್ಗೆಕಾಯಿ 60 ರೂ., ಹೂ ಕೋಸು 400 ರೂ ಚೀಲಕ್ಕೆ., ಟೊಮೇಟೊ 52 ರೂ., ನಿಂಬೆಹಣ್ಣು 100ಕ್ಕೆ 500 ರೂ., ಈರುಳ್ಳಿ 12ರಿಂದ 16 ರೂ., ಆಲೂಗೆಡ್ಡೆ 24 ರೂ., ಬೆಳ್ಳುಳ್ಳಿ 30ರಿಂದ 60 ರೂ., ಸೀಮೆ ಬದನೆಕಾಯಿ 24 ರೂ., ಬದನೆಕಾಯಿ 20 ರೂ., ಪಡವಲಕಾಯಿ 24 ರೂ., ಕುಂಬಳಕಾಯಿ 16 ರೂ., ಹಸಿ ಶುಂಠಿ 25 ರೂ., ಮಾವಿನಕಾಯಿ 26 ರೂ., ಕೊತ್ತಂಬರಿಸೊಪ್ಪು 100ಕ್ಕೆ 320 ರೂ., ಸಬ್ಬಸಿಕೆ ಸೊಪ್ಪು 100ಕ್ಕೆ 400 ರೂ., ಮೆಂತೆ ಸೊಪ್ಪು 100ಕ್ಕೆ 400 ರೂ., ಪಾಲಕ್ ಸೊಪ್ಪು 100ಕ್ಕೆ 320 ರೂ., ಪುದೀನ ಸೊಪ್ಪು100ಕ್ಕೆ 300 ರೂ. ಇದೆ.
ಮೈಸೂರಲ್ಲಿ ಇಂದಿನ ತರಕಾರಿ ದರ: ಬೀನ್ಸ್ 50 ರೂ., ಟೊಮೆಟೋ 45 ರೂ., ಬೆಂಡೆಕಾಯಿ 10 ರೂ., ಸೌತೆಕಾಯಿ 7 ರೂ., ಗುಂಡು ಬದನೆ 15 ರೂ., ಕುಂಬಳಕಾಯಿ 8 ರೂ., ಹೀರೆಕಾಯಿ 17 ರೂ., ಪಡವಲಕಾಯಿ 17 ರೂ., ತೊಂಡೆಕಾಯಿ 30 ರೂ., ಹಾಗಲಕಾಯಿ 25 ರೂ., ದಪ್ಪ ಮೆಣಸು 65 ರೂ., ಸೋರೆಕಾಯಿ 20 ರೂ., ಬದನೆಕಾಯಿ (ವೈಟ್) 18 ರೂ., ಕೋಸು 25 ರೂ., ಸೀಮೆಬದನೆ 22 ರೂ., ಬಜ್ಜಿ 35 ರೂ., ಮೆಣಸಿನಕಾಯಿ 13 ರೂ., ಹೂಕೋಸು 17 ರೂ.ಗೆ ಲಭ್ಯವಾಗುತ್ತಿದೆ.
ಇದನ್ನೂ ಓದಿ: ಅಗಾಥಾ ಚಂಡಮಾರುತಕ್ಕೆ 10 ಮಂದಿ ಬಲಿ, 20 ಜನ ನಾಪತ್ತೆ