ETV Bharat / state

ಟಿಪ್ಪು ಪ್ರತಿಮೆ ದೆಹಲಿಯ ಸಂಸತ್ ಭವನದ ಮುಂದೆ ಸ್ಥಾಪಿಸಬೇಕು: ವಾಟಾಳ್ ನಾಗರಾಜ್

ಟಿಪ್ಪು ಸುಲ್ತಾನ್ (Tippu Sulthan) ವಿಶ್ವ ಕಂಡಂತಹ ಮಹಾನ್ ಹೋರಾಟಗಾರರು. ಅವರಿಗೆ ಗೌರವವನ್ನು ಸೂಚಿಸುವುದು ದೇಶಕ್ಕೆ ಗೌರವ ಕೊಟ್ಟಂತೆ ಎಂದು ಕನ್ನಡ ಚಳವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಹೇಳಿದರು.

vatal-nagaraj
ಕನ್ನಡ ಚಳುವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್
author img

By

Published : Nov 10, 2021, 8:26 PM IST

ಬೆಂಗಳೂರು: ದೇಶಕ್ಕಾಗಿ ತನ್ನ ಮಕ್ಕಳನ್ನು ಒತ್ತೆ ಇಟ್ಟ ಟಿಪ್ಪು ಸುಲ್ತಾನ್ ಪ್ರತಿಮೆ ದೆಹಲಿಯ ಸಂಸತ್ ಭವನದ ಮುಂದೆ ಸ್ಥಾಪಿಸಬೇಕು. ಹಾಗಾದರೆ ಮಾತ್ರ ದೇಶಕ್ಕೆ ಗೌರವ ಮತ್ತು ಶಕ್ತಿ ಎಂದು ಕನ್ನಡ ಚಳುವಳಿ ಪಕ್ಷದ ಮುಖಂಡ ವಾಟಾಳ್ ನಾಗರಾಜ್ (Vatal Nagaraj) ಹೇಳಿದ್ದಾರೆ.

ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಇರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ ಮುಂಭಾಗ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸೂಚಿಸಿದರು. ಈ ಸಂದರ್ಭದಲ್ಲಿ ಬೆಳ್ಳಿ ರಥದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರವನ್ನಿಟ್ಟು ಅರಮನೆಯಿಂದ ಕೋಟೆಯವರೆಗೆ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದ ನಂತರ ಮಾಧ್ಯಮಗಳ ಜೊತೆ ಮಾತನಾಡಿ, ಟಿಪ್ಪು ಸುಲ್ತಾನ್ ವಿಶ್ವ ಕಂಡಂತಹ ಮಹಾನ್ ಹೋರಾಟಗಾರ. ಅವರಿಗೆ ಗೌರವವನ್ನು ಸೂಚಿಸುವುದು ದೇಶಕ್ಕೆ ಗೌರವ ಕೊಟ್ಟಂತೆ. ಅದರಲ್ಲೂ ಟಿಪ್ಪು ಸುಲ್ತಾನ್ ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿ ಬಂದವರು ಎಂದು ನೆನೆದರು.

ಟಿಪ್ಪು ಸುಲ್ತಾನ್ ಹುಟ್ಟಿದ ಸ್ಥಳವಾದ ದೇವನಹಳ್ಳಿಯನ್ನು ಅಭಿವೃದ್ಧಿಪಡಿಸಬೇಕು ಎಂದು ಸರ್ಕಾರವನ್ನು ವರ್ಷದಿಂದ ಒತ್ತಾಯ ಮಾಡುತ್ತಿದ್ದೇನೆ. ಸರ್ಕಾರ ಇದುವರೆಗೂ ಯಾವುದೇ ಗಮನವನ್ನು ನೀಡಿಲ್ಲ. ಸುಮಾರು 1000 ಕೋಟಿ ರೂ. ಖರ್ಚು ಮಾಡಿ ಟಿಪ್ಪು ಸುಲ್ತಾನ್ ಸ್ಮಾರಕವನ್ನು ಅದ್ಭುತವಾಗಿ ಮಾಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಇನ್ಮುಂದೆ ಬಸ್ ಪ್ರಯಾಣದ ವೇಳೆ ಮೊಬೈಲ್‌ನಿಂದ ಜೋರಾದ ಶಬ್ದ ಬರುವಂತಿಲ್ಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.