ETV Bharat / state

ಕನ್ನಡದ ಕೋಟ್ಯಧಿಪತಿ ವಾಟಾಳ್... ಹೋರಾಟಗಾರನ ಪತ್ನಿ ಸಾಲಗಾರ್ತಿ - ವಾಟಾಳ್ ನಾಗರಾಜ್

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಕೆ- ಕನ್ನಡದಲ್ಲೇ ಆಸ್ತಿ ವಿವರ ಸಲ್ಲಿಕೆ- ವಾಟಾಳ್ ನಾಗರಾಜ್ ಯಾವುದೇ ಬ್ಯಾಂಕ್, ಇತರೇ ಸಾಲ ಮಾಡಿಲ್ಲ. ಪತ್ನಿ ಹೆಸರಿನಲ್ಲಿ 13.12 ಲಕ್ಷ ರೂ. ಸಾಲ ತೋರಿಸಿದ್ದಾರೆ.

ಮಾಜಿ ಶಾಸಕ ವಾಟಾಳ್ ನಾಗರಾಜ್
author img

By

Published : Mar 27, 2019, 9:54 AM IST

ಬೆಂಗಳೂರು: ಕನ್ನಡ ಪರ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಕೋಟ್ಯಂತರ ಆಸ್ತಿ ಹೊಂದಿದ್ದರೆ, ಅವರ ಪತ್ನಿ ಮಾತ್ರ ಸಾಲಗಾರ್ತಿ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಾಗರಾಜ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದಲ್ಲಿ ಈ ಮಾಹಿತಿ ಲಭಿಸಿದೆ.

ಕನ್ನಡದಲ್ಲೇ ಆಸ್ತಿ ವಿವರ

ಕನ್ನಡದಲ್ಲೇ ಆಸ್ತಿ ವಿವರ ಸಲ್ಲಿಸಿರುವ ವಾಟಾಳ್ ನಾಗರಾಜ್, ಒಟ್ಟು 6.40 ಲಕ್ಷ ಚರಾಸ್ತಿ ಹೊಂದಿದ್ದಾರೆ. ಪತ್ನಿ ಜ್ಞಾನಾಂಬಿಕ ಬಳಿ 6.20 ಲಕ್ಷ ಮೌಲ್ಯದ ಚರಾಸ್ತಿ ಇದೆ. ಒಟ್ಟು‌ 3.76 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ತಮ್ಮ ಹೆಸರಲ್ಲಿ ವಾಟಾಳ್ ನಾಗರಾಜ್ ವಿವಿಧ ಬ್ಯಾಂಕ್​ಗಳಲ್ಲಿ‌ ಇಟ್ಟಿರುವ ಠೇವಣಿ ಹಣ 19 ಸಾವಿರ ರೂ. ಪತ್ನಿ ಜ್ಞಾನಾಂಬಿಕ ನಾಗರಾಜ್ ವಿವಿಧ ಬ್ಯಾಂಕ್​ಗಳ ಠೇವಣಿಯಾಗಿ 10 ಸಾವಿರ ರೂ. ಹೊಂದಿದ್ದಾರೆ.

ಮಾಜಿ ಶಾಸಕ ವಾಟಾಳ್ ನಾಗರಾಜ್

ವಾಟಾಳ್ ಬಳಿ 4 ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ಕಾರು ಇದ್ದು, ಜೊತೆಗೆ ಇವರ ಬಳಿ 1.35 ಲಕ್ಷ ಮೌಲ್ಯದ 48 ಗ್ರಾಂ ಚಿನ್ನ, 26 ಸಾವಿರ ಮೌಲ್ಯದ 600 ಗ್ರಾಂ ಬೆಳ್ಳಿ ಆಭರಣಗಳಿವೆ.

ಪತ್ನಿ ಜ್ಞಾನಾಂಬಿಕ ಬಳಿ 5.60 ಲಕ್ಷ ಮೌಲ್ಯದ 200 ಗ್ರಾಂ ಚಿನ್ನ, 21 ಸಾವಿರ ರೂ. ಮೌಲ್ಯದ 500 ಗ್ರಾಂ ಬೆಳ್ಳಿ ಆಭರಣಗಳಿವೆ. ವಾಟಾಳ್ ನಾಗರಾಜ್ ಬಳಿ 1.5 ಕೋಟಿ ಮೌಲ್ಯದ ಕೃಷಿ ಭೂಮಿ, ನಿವೇಶನ, ಮನೆಗಳಿವೆ. ಪತ್ನಿ‌ ಜ್ಞಾನಾಂಬಿಕ ಬಳಿ‌ 2 ಕೋಟಿ ರೂ. ಮೌಲ್ಯದ ಕೃಷಿ ಭೂಮಿ, ನಿವೇಶನ, ಮನೆಗಳಿವೆ.

ಪತ್ನಿ ಹೆಸರಿನಲ್ಲಿ ಸಾಲ

ವಾಟಾಳ್ ನಾಗರಾಜ್ ಯಾವುದೇ ಬ್ಯಾಂಕ್, ಇತರೇ ಸಾಲ ಮಾಡಿಲ್ಲ. ಪತ್ನಿ ಹೆಸರಿನಲ್ಲಿ 13.12 ಲಕ್ಷ ರೂ. ಸಾಲ ತೋರಿಸಿದ್ದಾರೆ.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.