ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೊನಾ ಆರ್ಭಟ ಶುರುವಾಗಿದ್ದು, ಮೊದಲ ಅಲೆಯಂತೆಯೇ ಎರಡನೇ ಅಲೆಯ ಅಟ್ಟಹಾಸ ಜೋರಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕೊರೊನಾಗೆ ಮತ್ತೆ ಆಸ್ಪತ್ರೆಗಳು ಟಾರ್ಗೆಟ್ ಆಗ್ತಿವೆ. ನಗರದ ವಾಣಿವಿಲಾಸ್ ಆಸ್ಪತ್ರೆ ಐದು ಸಿಬ್ಬಂದಿ ಕೊರೊನಾ ಪಾಸಿಟಿವ್ ದೃಢವಾಗಿದೆ.
ಒಬ್ಬರು ನರ್ಸಿಂಗ್ ಸೂಪರಿಡೆಂಟ್, ಒಬ್ಬರು ಸೀನಿಯರ್ ರೆಸಿಡೆಂಟ್ ಡಾಕ್ಟರ್, ಇಬ್ಬರು ಸ್ಟಾಫ್ ನರ್ಸ್, ಒಬ್ಬರು ಸೆಕ್ಯುರಿಟಿ ಗಾರ್ಡ್ಗೆ ಸೋಂಕು ದೃಢವಾಗಿದ್ದು, ಸದ್ಯ ಚಿಕಿತ್ಸೆ ಮುಂದುವರೆದಿದೆ.