ETV Bharat / state

ರಾಜ್ಯಕ್ಕೆ ಬರಲಿದೆ ವಂದೇ ಭಾರತ್ ಮಾದರಿಯಲ್ಲಿ ವಂದೇ ಮೆಟ್ರೋ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ - ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್

ಕೇಂದ್ರ ಬಜೆಟ್​ನಲ್ಲಿ ಕರ್ನಾಟಕ ರೈಲ್ವೇ ಅಭಿವೃದ್ಧಿಗೆ 7,561 ಕೋಟಿ ಅನುದಾನ- ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿವೆ ಹೈಟೆಕ್​ ರೈಲ್ವೇ ನಿಲ್ದಾಣ-ಬೆಂಗಳೂರಿನಲ್ಲಿ ಲೋಕಾರ್ಪಣೆಯಾಗಲಿದೆಯಾ ಪ್ರಧಾನಿ ಮೋದಿ ಕನಸಿನ ವಂದೇ ಭಾರತ್ ಮೆಟ್ರೋ?.

vande bharat train
ವಂದೇ ಭಾರತ್​ ರೈಲು
author img

By

Published : Feb 4, 2023, 7:09 AM IST

Updated : Feb 4, 2023, 8:11 AM IST

ಬೆಂಗಳೂರು: ವಂದೇ ಭಾರತ್ ಮಾದರಿಯಲ್ಲಿ ವಂದೇ ಮೆಟ್ರೋ ಕೂಡ ರಾಜ್ಯಕ್ಕೆ ಬರಲಿದೆ. ಈ ಸಾಲಿನಲ್ಲಿ ರಾಜ್ಯದ ಕೆಲವು ಡಿವಿಜನ್​ಗಳು ಮೂರು‌ ಹಳಿಗಳ ಸೌಕರ್ಯ ಪಡೆಯಲಿದೆ. ದೇಶದ ಇತರೆ ರಾಜ್ಯಕ್ಕೆ ಹೋಲಿಸಿಕೊಂಡರೆ ರೈಲ್ವೇ ಕ್ಷೇತ್ರದಲ್ಲಿ ಕರ್ನಾಟಕ ಅತ್ಯುನ್ನತ ಪ್ರಗತಿ ಸಾಧಿಸಿದೆ, ಸಾಧಿಸುತ್ತಿದೆ, ಸಾಧಿಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​ ಆಶ್ವಾಸನೆ ನೀಡಿದರು. ಕೇಂದ್ರ ಬಜೆಟ್ ಸಂಬಂಧ ಕರ್ನಾಟಕದ ವಿವಿಧ ಡಿವಿಜನ್ ರೈಲ್ವೇ ಅಧಿಕಾರಿಗಳ ಜೊತೆ ವಿಡಿಯೋ ಸಂವಾದ ಶುಕ್ರವಾರ ಮಂಡಳಿಯ ಬೆಂಗಳೂರು ಕಚೇರಿಯಲ್ಲಿ ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಮಯದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್​ ಜೊತೆಗೆ ವಿಡಿಯೋ ಸಂವಾದ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಬಜೆಟ್​ನಲ್ಲಿ ಕರ್ನಾಟಕಕ್ಕೆ ರೈಲ್ವೇ ಸಂಬಂಧ ನೀಡಲಾದ ಅನುದಾನದ ಬಗ್ಗೆ ಮಾಹಿತಿ ನೀಡಿದರು. ಮೋದಿ ಬಜೆಟ್​ನಲ್ಲಿ ಕರ್ನಾಟಕಕ್ಕೆ ರೈಲ್ವೇ ಅಭಿವೃದ್ಧಿಗೆ 7,561 ಕೋಟಿ ಕೊಟ್ಟಿದ್ದಾರೆ. 2009 ರಿಂದ 2014ರ ಅವಧಿಯಲ್ಲಿ ನೀಡಿದ್ದಕ್ಕೆ ಹೋಲಿಸಿಕೊಂಡರೆ ಇದು 9% ದಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ನಿಲ್ದಾಣದ ಮಾದರಿಯಲ್ಲಿ ಯಶವಂತಪುರ, ಬೆಂಗಳೂರು ದಂಡು ರೈಲ್ವೇ ನಿಲ್ದಾಣ ಸೇರಿದಂತೆ ಹಲವು ನಿಲ್ದಾಣಗಳನ್ನು ಹೈಟೆಕ್ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಪ್ರಮುಖ ರೈಲ್ವೇ ನಿಲ್ದಾಣಗಳು ಮಾರ್ಪಾಡಾಗಲಿದೆ ಎಂದು ಹೇಳಿದರು.

55 ಪ್ರಮುಖ ರೈಲ್ವೇ ಸ್ಟೇಷನ್ ಗಳು ಮೇಲ್ದರ್ಜೆಗೆ: ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಮಾತನಾಡಿ ಈ ಬಜೆಟ್​ನಲ್ಲಿ ನೀಡಲಾದ ಅನುದಾನದಿಂದ ಹಲವು ಅಭಿವೃದ್ಧಿ ಕಾರ್ಯಗಳು ನಡೆಯಲಿದೆ, ರಾಜ್ಯದ 55 ಪ್ರಮುಖ ರೈಲ್ವೇ ಸ್ಟೇಷನ್​ಗಳು ಮೇಲ್ದರ್ಜೆಗೆ ಏರಿಸಲಾಗುವುದು. ರೈಲ್ವೇ ಇಲಾಖೆಯಿಂದಲೇ ಸ್ಥಳೀಯ ಆಹಾರಗಳನ್ನು ಆದ್ಯತೆ ಮೇರೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸ್ಥಳೀಯವಾಗಿ ಫೇಮಸ್ ಆಗಿರುವ ತಿಂಡಿ ತಿನಿಸುಗಳು ರೈಲ್ವೇ ಅಂಗಡಿಗಳಲ್ಲೇ ಅಧಿಕೃತವಾಗಿ ಲಭ್ಯವಾಗಲಿದೆ. ರಾಜ್ಯದ ಹಲವು ಕಡೆಗಳಿಗೆ ಹೊಸ ಮಾರ್ಗಗಳು ಸ್ಥಾಪಿಸಲಾಗುವುದು. ಈ ಸಂಬಂಧ ರಾಜ್ಯ ಸರ್ಕಾರದ ಜೊತೆ ಚರ್ಚೆ ಮಾಡಿ ಭೂ ಸ್ವಾಧೀನ ಪ್ರಕ್ರಿಯೆ ನೆಡೆಸಲಾಗುವುದು ಎಂದು ಹೇಳಿದರು.

ರಾಜ್ಯದ ರೈಲ್ವೇ ಮಾರ್ಗಗಳ ವಿದ್ಯುದೀಕರಣಕ್ಕೆ 793 ಕೋಟಿ: ಕೇಂದ್ರದ ಬಜೆಟ್​ನಲ್ಲಿ ರಾಜ್ಯದ 7 ರೈಲ್ವೇ ಮಾರ್ಗಗಳ ವಿದ್ಯುದೀಕರಣ ಅಭಿವೃದ್ಧಿ ಹಾಗೂ ಮಾರ್ಪಾಡು ಮಾಡಲು ಹಣ ಮೀಸಲಿಡಲಾಗಿದೆ, ಇದಕ್ಕೆ ಕೇಂದ್ರದಿಂದ 793 ಕೋಟಿ ಅನುದಾನದ ನೀಡಲಾಗುತ್ತಿದೆ. ಆದ್ಯತೆಯ ಮೇರೆಗೆ ರಾಜ್ಯದಲ್ಲಿ 10 ಹೊಸ ಮಾರ್ಗಗಳ ಸೇವೆಗಳನ್ನು ಘೋಷಿಸಲಾಗಿದೆ. ರೈಲುಗಳ ಹಳೆಯ ಕೋಚ್​ಗಳನ್ನು ಬದಲಾವಣೆ ಮಾಡಿ ಹೈಟೆಕ್ ಕ್ಯಾಬಿನ್​ಗಳ ಅಳವಡಿಕೆ ಮಾಡಲಾಗಿದೆ. ಹೈಡ್ರೋಜನ್ ರೈಲು ಕೂಡ ರಾಜ್ಯಕ್ಕೆ ಬರಲಿದೆ ಮೋದಿ ಭರವಸೆ ಕೊಟ್ಟಿದ್ದಾರೆ. ಕೇಂದ್ರ ಬಜೆಟ್​ನಲ್ಲಿ ರಾಜ್ಯದ ರೈಲ್ವೇ ಇಲೆಕ್ಟ್ರಿಫಿಕೇಷ್​ನ್​ಗೆ 790 ಕೋಟಿ ಅನುದಾನ ನೀಡಲಾಗಿದೆ. ರಾಜ್ಯಕ್ಕೆ ಹೊಸ 44 ರೈಲ್ವೇ ಮಾರ್ಗದ ಸರ್ವೇಗೆ 10 ಕೋಟಿ ಮೀಸಲಿಡಲಾಗಿದೆ. ಹೊಸ ಮಾರ್ಗಗಳನ್ನು ಸರ್ವೇ ಮಾಡಿ ಹೊಸ ಮಾರ್ಗ ಸ್ಥಾಪನೆಗೆ ಉತ್ತೇಜೆನ ನೀಡಲಾಗಿದೆ. ಕೇಂದ್ರ ಬಜೆಟ್ ನಲ್ಲಿ ಇದಕ್ಕೆ 10 ಕೋಟಿ ಕೊಡಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನೈರುತ್ಯ ರೈಲ್ವೇ ದೇಶದಲ್ಲೇ ನಂಬರ್ 1: 2022ರಲ್ಲಿ ಇಡೀ ದೇಶದಲ್ಲಿ ನೈರುತ್ಯ ರೈಲ್ವೇ ದೇಶದಲ್ಲೇ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಸುರಕ್ಷಿತೆ, ಸೇವೆ, ಸಮಯ ಪಾಲನೆ ಹಾಗೂ ಸ್ವಚ್ಛತೆ ಮಾನದಂಡದಲ್ಲಿ ನಾವು ಮುಂಚೂಣಿಯಲ್ಲಿ ಇದ್ದೇವೆ. ಕಳೆದ ವರ್ಷ ನಾವು ಸಾರ್ವಕಾಲಿಕ ಆದಾಯದ ದಾಖಲೆ ಮಾಡಿದ್ದೇವೆ. 5,680 ಕೋಟಿ ಆದಾಯ ಬಂದಿದೆ. 2021ರ ಅವಧಿಯಲ್ಲಿ 4,410 ಕೋಟಿ ರೂಪಾಯಿ ಆದಾಯ ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಶೇಕಡಾ 29 ರಷ್ಟು ಆದಾಯ ಗಳಿಕೆ ಹೆಚ್ಚಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯಿಂದ ವಂದೇ ಭಾರತ್ ಮೆಟ್ರೋ ಲೋಕಾರ್ಪಣೆ: ಪ್ರಧಾನಿ ಮೋದಿ ಕನಸಿನ ವಂದೇ ಭಾರತ್ ಮೆಟ್ರೋ ಬೆಂಗಳೂರಲ್ಲೇ ಲೋಕಾರ್ಪಣೆ ಆಗುವ ಸಾಧ್ಯತೆ ಇದೆ. ಕೇಂದ್ರದ ಸೂಚನೆ ಮೇರೆಗೆ ವಂದೇ ಭಾರತ್ ಮೆಟ್ರೋ ನಿರ್ವಹಣೆ ಹಾಗೂ ಬ್ಯಾಕ್ ಅಪ್​ಗೆ ಬೇಕಿರುವ ಸಿದ್ಧತೆ ಆರಂಭಿಸಲಾಗಿದೆ. ನಮ್ಮಲ್ಲಿ ಈಗ ವಂದೇ ಭಾರತ್ ನಿರ್ವಹಣೆ ಮಾಡಲು ಬೇಕಾಗಿರುವ ಸವಲತ್ತುಗಳನ್ನು ತಯಾರು ಮಾಡುತ್ತಿದ್ದೇವೆ. ಕೇಂದ್ರದ ಸೂಚನೆ ಮೇರೆಗೆ ಈ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ನೈರುತ್ಯ ರೈಲ್ವೇ ಜನರಲ್ ಮ್ಯಾನೇಜರ್ ಸಂಜೀವ್ ಕಿಶೋರ್ ಹೇಳಿದರು.

ರಾಜ್ಯದ ಏಳು ಪ್ರಮುಖ ರೈಲ್ವೇ ಮಾರ್ಗಗಳಿಗೆ ಅನುದಾನ: ಗದಗ-ಹೊಟಗಿ:- 110 ಕೋಟಿ, ಚಿಕ್ಕಬಾಣಾವರ-ಹುಬ್ಬಳ್ಳಿ:- 128 ಕೋಟಿ, ಬಿರೂರು ತಾಳಗುಪ್ಪ:- 56 ಕೋಟಿ, ಹಾಸನ-ಮಂಗಳೂರು:- 134 ಕೋಟಿ, ಮಿರಾಜ್-ಲೋಂಡಾ:- 182 ಕೋಟಿ, ಹೊಸಪೇಟೆ-ಹುಬ್ಬಳ್ಳಿ-ವಾಸ್ಕೋಡಗಾಮ :- 20 ಕೋಟಿ, ಚಿಕ್ಕಬಾಣಾವರ-ಹಾಸನ:- 77 ಕೋಟಿ.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಹೊಸ ರೈಲ್ವೇ ಮಾರ್ಗಗಳ ಘೋಷಣೆ: ಗದಗ-ವಾಡಿ:- 350 ಕೋಟಿ (150 ಕೋಟಿ ರಾಜ್ಯ ಸರ್ಕಾರ), ಗಿನಿಗೆರ-ರಾಯಚೂರು:- 300 ಕೋಟಿ, ತುಮಕೂರು-ದಾವಣಗೆರೆ (ವಾಯ ಚಿತ್ರದುರ್ಗ) :- 420 ಕೋಟಿ (200 ಕೋಟಿ ರಾಜ್ಯ ಸರ್ಕಾರ), ತುಮಕೂರು- ರಾಯದುರ್ಗ (ವಾಯ ಕಲ್ಯಾಣದುರ್ಗ) :- 350 ಕೋಟಿ, ಬಾಗಲಕೋಟೆ - ಕುಡಚಿ :- 360 ಕೋಟಿ (150 ಕೋಟಿ ರಾಜ್ಯ ಸರ್ಕಾರ), ಶಿವಮೊಗ್ಗ- ಶಿಕಾರಿಪುರ-ರಾಣೆಬೆನ್ನೂರು :- 150 ಕೋಟಿ, ಬೆಳಗಾವಿ-ಧಾರವಾಡ (ವಾಯ ಕಿತ್ತೂರು) :- 10 ಕೋಟಿ, ಮರಿಕುಪ್ಪಂ-ಕುಪ್ಪಂ :- 200 ಕೋಟಿ, ಕಡೂರು-ಚಿಕ್ಕಮಗಳೂರು-ಹಾಸನ :- 145 ಕೋಟಿ, ಮಲಗೂರು-ಪಾಲಸಮುದ್ರಂ :- 20 ಕೋಟಿ.

ಘೋಷಣೆಯಾದ ರಾಜ್ಯದ ರೈಲ್ವೇ ಡಬಲಿಂಗ್ ಮಾರ್ಗಗಳು: ಗದಗ-ಹೂಟಗಿ :- 170 ಕೋಟಿ, ಪೆನುಗುಂಡ-ಧರ್ಮಾವರಂ :- 120 ಕೋಟಿ, ಬಯ್ಯಪ್ಪನಹಳ್ಳಿ-ಹೊಸೂರು :- 100 ಕೋಟಿ, ಯಶವಂತಪುರ-ಚನ್ನಸಂದ್ರ :- 85 ಕೋಟಿ, ಲೋಂಡಾ-ಮಿರಾಜ್ : 200 ಕೋಟಿ, ಹುಬ್ಬಳ್ಳಿ- ಚಿಕ್ಕಜಾಜೂರು :- 150 ಕೋಟಿ, ಬೆಂಗಳೂರು ಕಂಟೋನ್ಮೆಂಟ್-ವೈಟ್ ಫೀಲ್ಡ್ ಹಾಲ್ಟ್ :- 250 ಕೋಟಿ, ಹೊಸಪೇಟೆ-ತಿನೈಘಾಟ್- ವಾಸ್ಕೋಡಗಾಮ :- 400 ಕೋಟಿ.

ಇದನ್ನೂ ಓದಿ:ನಾಳೆ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿ: ಚುನಾವಣಾ ಪ್ರಚಾರತಂತ್ರದ ಚರ್ಚೆ ಸಾಧ್ಯತೆ

Last Updated : Feb 4, 2023, 8:11 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.