ETV Bharat / state

ಹುಟ್ಟು ಸಾವಿನ ಮಧ್ಯೆ ನಮ್ಮ ಸಾಧನೆ ಮುಖ್ಯ.. ಸಚಿವ ಡಿ ಕೆ ಶಿವಕುಮಾರ - undefined

ಮಾಜಿ ಸಚಿವ ರೆಹಮಾನ್ ಖಾನ್​ ಅವರ ಕಾಫಿ ಟೇಬಲ್ ಪುಸ್ತಕ ಹಾಗೂ ಮೈ ಮೆಮೊರೀಜ್​ ಕೃತಿಯನ್ನು ಶನಿವಾರ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್, ಸಚಿವ ಡಿ ಕೆ ಶಿವಕುಮಾರ ಬಿಡುಗಡೆ ಮಾಡಿದರು. ಇತರೆ ಸಚಿವರು, ಮಾಜಿ ಸಂಸದರು ಪಾಲ್ಗೊಂಡಿದ್ದರು.

ಮಾಜಿ ಸಚಿವ ರೆಹಮಾನ್ ಖಾನ್​ ಅವರ ಪುಸ್ತಕ, ಕೃತಿ ಬಿಡುಗಡೆಗೊಳಿಸಿ ಸಚಿವ ಡಿ.ಕೆ.ಶಿವಕುಮಾರ, ದಿನೇಶ್ ಗುಂಡೂರಾವ್
author img

By

Published : Jun 29, 2019, 11:10 PM IST

ಬೆಂಗಳೂರು: ಮನುಷ್ಯ ಹುಟ್ಟು-ಸಾವಿನ ಮಧ್ಯೆ ಏನು ಸಾಧನೆ ಮಾಡಿದ್ದಾನೆ ಎಂಬುದು ಆತನ ಜೀವನ ಹಾದಿಯನ್ನು ತೋರಿಸುತ್ತದೆ ಎಂದು ಸಚಿವ ಡಿ ಕೆ ಶಿವಕುಮಾರ್ ಅಭಿಪ್ರಾಯ ಪಟ್ಟರು.

ಮಾಜಿ ಸಚಿವ ರೆಹಮಾನ್ ಖಾನ್​ ಜೀವನ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ..

ಮಾಜಿ ಸಚಿವ ರೆಹಮಾನ್ ಖಾನ್ ಅವರ ಕಾಫಿ ಟೇಬಲ್ ಪುಸ್ತಕ ಹಾಗೂ ಮೈ ಮೆಮೊರೀಸ್ ಹೆಸರಿನ ಕೃತಿಗಳ ಬಿಡುಗಡೆ ಸಮಾರಂಭ, ಸೇವಾ ಸಮ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕೀಯದಲ್ಲಿ ಉನ್ನತ ಸ್ಥಾನ ಅಲಂಕರಿಸಿದ ಗೌರವ ಖಾನ್​ ಅವರು ಹೊಂದಿದ್ದಾರೆ ಎಂದರು.

ಖಾನ್ ಎಂದೂ ಚೌಕಟ್ಟು ಮೀರಿ ಹೋದವರಲ್ಲ. ದೇಶದ ಐಕ್ಯತೆ, ಸಮಗ್ರತೆಯ ಬಗ್ಗೆ ಬದ್ಧತೆ ಉಳ್ಳವರಾಗಿದ್ದರು. ಅವರ ಬದುಕು ಸಾರ್ಥಕ ಎಂದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸೇವಾ ಸಮ್ಮಾನ ಹೆಸರಿನಲ್ಲಿ ಅರ್ಹರಿಗೆ ಗೌರವ ಸಲ್ಲಿಸಲಾಗಿದೆ. ಖಾನ್ ಅವರು ರಾಜ್ಯದಲ್ಲಿ ಮೊದಲ ಮುಸ್ಲಿಂ ಚಾರ್ಟ್​ಟೆಡ್​​ ಅಕೌಂಟೆಂಟ್ ಅನ್ನುವುದು ಗೊತ್ತಿರಲಿಲ್ಲ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ರೆಹಮಾನ್ ಖಾನ್ ಅವರು ರಾಜ್ಯಸಭೆಯಿಂದ ನಿವೃತ್ತಿ ಆಗಿದ್ದಾರೆ. ಒಂದು ಸಮುದಾಯದ ನಾಯಕರಲ್ಲ, ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿ ರಾಜ್ಯದ ಮಾದರಿ ವ್ಯಕ್ತಿ ಎಂದರು.

ಸಮಾರಂಭದಲ್ಲಿ ಸಚಿವ ಯು ಟಿ ಖಾದರ್, ಜಮೀರ್ ಅಹ್ಮದ್, ಸಂಸದ ರಾಜೀವ್‌ಗೌಡ, ಮಾಜಿ ಸಿಎಂ ಡಾ. ಎಂ ವೀರಪ್ಪ ಮೊಯ್ಲಿ, ಮಾಜಿ ಸಚಿವ ಹೆಚ್ ಕೆ ಪಾಟೀಲ್, ಶಾಸಕ ಎನ್.ಎ. ಹ್ಯಾರಿಸ್, ರೋಷನ್ ಬೇಗ್, ತನ್ವೀರ್ ಸೇಠ್ ಮುಖಂಡರಾದ ನಜೀರ್ ಅಹ್ಮದ್, ನಾರಾಯಣ ಗೌಡ ಮತ್ತಿತರರು ಇದ್ದರು.

Intro:newsBody:ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡಿದ್ದೇವೆ ಎನ್ನುವುದು ಮುಖ್ಯ: ಡಿಕೆಶಿ

ಬೆಂಗಳೂರು: ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡಿದ್ದೇವೆ ಎನ್ನುವುದು ಮುಖ್ಯ ಎಂದು ಸಚಿವ ಡಿ.ಕೆ. ಶಿವಕುಮಾರ್ ಅಭಿಪ್ರಾಯ ಪಟ್ಟರು.
ಮಾಜಿ ಸಚಿವ ರೆಹಮಾನ್ ಖಾನ್ ಅವರ ಕಾಫಿ ಟೇಬಲ್ ಉಸ್ತಕ ಹಾಗೂ ಮೈ ಮೆಮೊರೀಸ್ ಹೆಸರಿನ ಕೃತಿಗಳ ಬಿಡುಗಡೆ ಸಮಾರಂಭ, ಸೇವಾ ಸಮ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಇದೊಂದು ಪವಿತ್ರ ಸಮಾರಂಭ. ಉತ್ತಮ ಹಿನ್ನೆಲೆ, ಗೌರವವುಳ್ಳ ಕುಟುಂಬದಿಂದ ಬಂದವರು. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದವರು. ಕೇಂದ್ರದ ಎರಡೂ ಮನೆಗಳಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಿದ ಗೌರವ ಹೊಂದಿದ್ದಾರೆ.
ರೆಹಮಾನ್ ಖಾನ್ ಎಂದೂ ಚೌಕಟ್ಟು ಮೀರಿ ಹೋಗಿರಲಿಲ್ಲ. ಸಹಕಾರ ರತ್ನ ನೀಡುವ ಅಬಕಾಶ ನೋಡುವ ಅವಕಾಶ ಸಿಕ್ಕಿತ್ತು, ಅವರ ಶೆಡ್ಯೂಲ್ ಬ್ಯಾಂಕ್ ಗೆ ಪ್ರಶಸ್ತಿ ನೀಡಿದ್ದೆವು. ಸರಳ ವ್ಯಕ್ತಿ. ತನ್ನ ಸ್ವಾಭಿಮಾನ ಬಿಟ್ಟವರಲ್ಲ, ಧನಾತ್ಮಕ ಚಿಂತನೆ ಮಾಡುತ್ತಿದ್ದರು. ಅವರ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ದೇಶದ ಐಕ್ಯತೆ, ಸಮಗ್ರತೆಯ ಬಗ್ಗೆ ಬದ್ಧತೆ ಉಳ್ಳವರಾಗಿದ್ದರು. ಅವರ ಬದುಕು ಸಾರ್ಥಕವಾಗಿದೆ. ಆಸೆಗೆ ಕೊನೆಯಿಲ್ಲ, ನಮ್ಮ ಬದುಕು, ಸಾಧನೆ ಬೇರೆಯವರಿಗೆ ಅಲ್ಲದಿದ್ದರೂ ನಮಗೆ ತೃಪ್ತಿ ತಂದರೆ ಸಾಕು. ರಾಜಕಾರಣ, ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರ. ಇವರ ಕೊಡುಗೆ ದೇಶಕ್ಕೆ ದೊಡ್ಡದು ಎಂದರು.
ಅರ್ಹರಿಗೆ ಗೌರವ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸೇವಾ ಸಮ್ಮಾನ ಹೆಸರಿನಲ್ಲಿ ಅರ್ಹರಿಗೆ ಗೌರವ ಸಲ್ಲಿಸಲಾಗಿದೆ. ಮಾದರಿ ಕಾರ್ಯ. ರಾಜ್ಯದಲ್ಲಿ ಮೊದಲ ಮುಸ್ಲಿಂ ಚಾರ್ಟರ್ಡ್ ಅಕೌಂಟೆಂಟ್ ಅನ್ನುವುದು ಗೊತ್ತಿರಲಿಲ್ಲ. ನೀವು ಶಿಕ್ಷಿತರಾಗುವ ಜತೆಗೆ ಅನೇಕ ಶಿಕ್ಷಣದ ಜತೆ ಸಮಾಜವನ್ನು ಮೇಲೆ ತರುವ ಯತ್ನ ಮಾಡಿದ್ದೀರಿ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ಕರ್ನಾಟಕದ ಹೆಮ್ಮೆಯ ಸುಪುತ್ರ. ರೆಹಮಾನ್ ಖಾನ್ ಅವರಿಂದು ರಾಜ್ಯಸಭೆಯಿಂದ ನಿವೃತ್ತಿ ಆಗಿರಬಹುದು, ಆದರೆ ಅವರ ರಾಜಕೀಯ ಭವಿಷ್ಯ ಉಜ್ವಲವಾಗಿದೆ. ಅವರು ಒಂದು ಸಮುದಾಯದ ನಾಯಕರಲ್ಲ, ರಾಜ್ಯಕ್ಕೆ ಉತ್ತಮ ಕೊಡುಗೆ ನೀಡಿ ರಾಜ್ಯದ ಮಾದರಿ ವ್ಯಕ್ತಿಯಾಗಿದ್ದಾರೆ.
ಮಾಜಿ ಸಚಿವ ರೆಹಮಾನ್ ಖಾನ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಚಿವ ಯು.ಟಿ. ಖಾದರ್, ಜಮೀರ್ ಅಹಮದ್, ಡಿ.ಕೆ. ಶಿವಕುಮಾರ್, ಸಂಸದ ರಾಜೀವ್ ಗೌಡ, ಮಾಜಿ ಸಂಸದ ಡಾ. ಎಂ. ವೀರಪ್ಪ ಮೊಯ್ಲಿ, ಮಾಜಿ ಸಚಿವ ಎಚ್.ಕೆ. ಪಾಟೀಲ್, ಶಾಸಕ ಎನ್.ಎ. ಹ್ಯಾರಿಸ್, ರೋಷನ್ ಬೇಗ್, ತನ್ವೀರ್ ಸೇಠ್ ಮುಖಂಡರಾದ ನಜೀರ್ ಅಹಮದ್, ನಾರಾಯಣ ಗೌಡಮತ್ತಿತರರು ಉಪಸ್ಥಿತರಿದ್ದರು.
ರೆಹಮಾನ್ ಖಾನ್ ಅವರ ಕಾಫಿ ಟೇಬಲ್ ಪುಸ್ತಕವನ್ನು ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಮೈ ಮೆಮೊರೀಸ್ ಕೃತಿಯನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಡುಗಡೆ ಮಾಡಿದರು. ಪೊಲೀಸ್ ಸಿಬ್ಬಂದಿ ಎಚ್.ಎಮ್. ಲೋಕೇಶ್, ಅರ್ಚನಾ ಡಿಎಸ್, ಬಿಎಂಟಿಸಿ ಸಿಬ್ಬಂದಿ ವೈ.ಎನ್. ಗಂಗಾಧರ, ಶ್ರೀನಿವಾಸ್ ಟಿ., ಬಿಬಿಎಂಪಿ ಸಿಬ್ಬಂದಿ ಮಹೇಶ್ ಹಾಗೂ ನಾರಾಯಣಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಶಿವಾರೆಡ್ಡಿ ಹಾಗೂ ಚಿಕ್ಕದೇವೇಗೌಡ ಅವರನ್ನು ಗೌರವಿಸಲಾಯಿತು.
Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.