ಬೆಂಗಳೂರು: ಕೆಫೆ ಕಾಫಿ ಡೇ ವತಿಯಿಂದ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆ ಅಂಗವಾಗಿ ಸಾಕು ಪ್ರಾಣಿಗಳ ದತ್ತು ತೆಗೆದುಕೊಳ್ಳುವ ಅಭಿಯಾನ ಆಯೋಜಿಸಿದೆ.
ನಗರದ ಮಲ್ಯ ರಸ್ತೆಯಲ್ಲಿ ಇರುವ ಕೇಂದ್ರ ಕಚೇರಿ ಕೆಫೆ ಕಾಫಿ ಡೇ ಸ್ಕ್ವೇರ್‌ನಲ್ಲಿ ಆಯೋಜಿಸಲಾಗಿದೆ. ದತ್ತು ತೆಗೆದುಕೊಳ್ಳುವ ಕಾರ್ಯಕ್ರಮದಲ್ಲಿ ವಿಕಲಾಂಗ ಶ್ವಾನಗಳು, ವಯಸ್ಕ ಮತ್ತು ಶ್ವಾನದ ಮರಿಗಳನ್ನು ನೀಡಲಾಗುತ್ತದೆ.
15 ಶ್ವಾನದ ಮರಿಗಳ ಜೊತೆಗೆ 3 ವಿಕಲಾಂಗ ಶ್ವಾನಗಳು ಮತ್ತು 2 ದೃಷ್ಟಿಹೀನ ಶ್ವಾನಗಳನ್ನು ದತ್ತು ಪ್ರಕ್ರಿಯೆಯಲ್ಲಿ ಇರಿಸಲಾಗಿದೆ. ಕೆಫೆ ಕಾಫಿ ಡೇ ಜತೆಗೆ ಸಿಜೆ ಮೆಮೋರಿಯಲ್ ಟ್ರಸ್ಟ್ ಮತ್ತು ದಿ ಡಾಗ್ಗಿ ಬೇಕರಿ ಕೈ ಜೋಡಿಸಿವೆ.
ಇದನ್ನೂ ಓದಿ: ಮುಂದುವರೆದ ಬಜೆಟ್ ಪೂರ್ವಭಾವಿ ಸಭೆ: 10 ಇಲಾಖೆಗಳೊಂದಿಗೆ ಸಿಎಂ ಬಿಎಸ್ವೈ ಚರ್ಚೆ
ಸಿಸಿಡಿ ಸಿಇಓ ವಿನಯ್ ಭೋಪಟ್ಕರ್ ಮಾತನಾಡಿ, ನಮ್ಮ ಗ್ರಾಹಕರಿಗೆ ಸ್ಮರಣೀಯ ಹಾಗೂ ಹಿತಕರ ಅನುಭವಗಳನ್ನು ನೀಡಲು ನಾವು ಬಯಸುತ್ತೇವೆ. ಕಳೆದ ಎರಡು ತಿಂಗಳಲ್ಲಿ ಸಿಸಿಡಿಯ ಹೊರಾಂಗಣ ಪ್ರದೇಶಗಳಲ್ಲಿ ಸಾಕುಪ್ರಾಣಿ ಪ್ರಿಯರಿಗಾಗಿ ಕೆಫೆಗಳನ್ನು ತೆರೆಯಲು ಕೆಲಸ ಮಾಡಿದ್ದೇವೆ. ಸಾಕುಪ್ರಾಣಿಗಳು ನಮ್ಮ ಜೊತೆಗಿರುವುದಷ್ಟೆ ಅಲ್ಲ ನಿಸ್ವಾರ್ಥ ಪ್ರೀತಿಯ ನೀಡುತ್ತವೆ. ಸಾಕುಪ್ರಾಣಿಗಳು ಮನುಷ್ಯನ ಒತ್ತಡ ಕಡಿಮೆ ಮಾಡುತ್ತವೆ ಎಂದರು.