ಬೆಂಗಳೂರು : ಇಸ್ಕಾನ್ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರತಿವರ್ಷದಂತೆ ಈ ಬಾರಿಯೂ ಬಹಳ ಸಂಭ್ರಮವಿದ್ದು, ಆನ್‌ಲೈನ್ ಮೂಲಕ ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ.
ನಗರದ ಇಸ್ಕಾನ್ ದೇವಾಲಯದಲ್ಲಿ ವೈಕುಂಠ ಏಕಾದಶಿ ಸಂಭ್ರಮದಿಂದ ಜೋರಾಗಿದೆ. ವಿಶೇಷ ಪೂಜೆಗಳ ನಂತರ ಬ್ರಾಹ್ಮಿ ಮುಹೂರ್ತದಲ್ಲಿ ಸ್ವರ್ಗದ ಬಾಗಿಲನ್ನು ತೆರೆಲಾಗುತ್ತದೆ. ನಂತರ ದೇವರನ್ನು ಗರ್ಭಗುಡಿಯೊಳಗೆ ಕರೆದೊಯ್ಯಲಾಗುತ್ತದೆ.
ಈ ಎಲ್ಲಾ ಸಂಭ್ರಮಾಚರಣೆಗಳನ್ನು ಈ ಮೊದಲು ಭಕ್ತಾದಿಗಳು ದೇವಸ್ಥಾನಕ್ಕೆ ಬಂದು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಕಾರಣದಿಂದಾಗಿ ಜನರ ಹಿತ ದೃಷ್ಟಿಯಿಂದಾಗಿ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ.
ಆದರೂ ಕೂಡ ಇಸ್ಕಾನ್ ದೇವಾಲಯದಲ್ಲಿ ಅದ್ದೂರಿ ಆಚರಣೆಗೆ ಯಾವುದೇ ಬ್ರೇಕ್ ಹಾಕಿಲ್ಲ. ಈ ಎಲ್ಲಾ ವೈಭೋಗದ ಸಂಭ್ರಮವನ್ನು ಭಕ್ತಾದಿಗಳು ಕಣ್ತುಂಬಿಕೊಳ್ಳಲು ಬೆಳಗ್ಗಿನಿಂದಲೇ ತಮ್ಮ ವೆಬ್ಸೈಟ್ನಲ್ಲಿ ಎಲ್ಲಾ ಆಚರಣೆಯ ಲೈವ್ ಪ್ರದರ್ಶನ ತೋರಿಸಲಾಗುತ್ತಿದೆ. ಈ ಮೂಲಕ ಜನರು ದೇವಸ್ಥಾನಕ್ಕೆ ಬಾರದೆ ಇದ್ದರೂ ಆನ್‌ಲೈನ್ ಮೂಲಕವೇ ದೇವರ ದರ್ಶನ ಪಡೆಯಬಹುದಾಗಿದೆ.