ETV Bharat / state

ಕೊರೊನಾ ಸೋಂಕಿತರ ಚಿಕಿತ್ಸೆಗೆ ಓಪನ್​ ಸ್ಟೇಡಿಯಂಗಳ ಬಳಕೆ: ಬಿಬಿಎಂಪಿ ಆಯುಕ್ತ - ಕೊರೊನಾ ಸುದ್ದಿ

ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಕಂಠೀರವ ಸ್ಟೇಡಿಯಂ, ತ್ರಿಪುರವಾಸಿನಿ ಚೌಲ್ಟ್ರಿ, ವೈಟ್ ಫೀಲ್ಡ್​​ನ ಎಕ್ಸಿಬಿಷನ್ ಹಾಲ್​​ಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹೇಳಿದ್ದಾರೆ.

ಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್
author img

By

Published : Jun 12, 2020, 7:27 PM IST

Updated : Jun 12, 2020, 7:58 PM IST

ಬೆಂಗಳೂರು: ನಗರದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಒಟ್ಟು ಸೋಂಕಿತರ ಸಂಖ್ಯೆ 600ಕ್ಕೆ ತಲುಪಿದೆ. ಕೊರೊನಾ ಸೋಂಕು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹರಡಿದ್ರೆ ನಗರದ ಓಪನ್ ಜಾಗಗಳನ್ನು ಫೀಲ್ಡ್ ಆಸ್ಪತ್ರೆಯನ್ನಾಗಿ ಮಾಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಹೇಳಿದ್ದಾರೆ.

ಇದಕ್ಕಾಗಿ ಕಂಠೀರವ ಸ್ಟೇಡಿಯಂ, ತ್ರಿಪುರವಾಸಿನಿ ಚೌಲ್ಟ್ರಿ, ವೈಟ್ ಫೀಲ್ಡ್​​ನ ಎಕ್ಸಿಬಿಷನ್ ಹಾಲ್​​ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನೊಂದೆಡೆ ಕೊರೊನಾ ಸೋಂಕು ಪರೀಕ್ಷೆಯ ವರದಿ ಬೇಗ ತಿಳಿಯುತ್ತಿಲ್ಲ. ಹಾಗಾಗಿ ಶಂಕಿತ ವ್ಯಕ್ತಿ ವರದಿ ಬರುವ ತನಕ ಓಡಾಡಿ ಬೇರೆಯವರಿಗೆ ಹರಡುವ ಸಾಧ್ಯತೆ ಇದೆ. ಈ ವಿಚಾರ ಸಚಿವರ ಗಮನಕ್ಕೆ ತರಲಾಗಿದೆ. ರೋಗಿಗಳು ಕೂಡ ಮನೆ ವಿಳಾಸ, ಫೋನ್ ನಂಬರ್ ಸರಿಯಾಗಿ ಕೊಟ್ಟಿರುವುದಿಲ್ಲ. ಪಾಸಿಟಿವ್ ವರದಿ ಬಂದ ಮೇಲೂ ಆಸ್ಪತ್ರೆಗೆ ಸೇರಿಸುವುದು ಒಂದೆರಡು ದಿನ ತಡವಾಗ್ತಿದೆ. ಇದಕ್ಕಾಗಿ ಸೋಂಕು ಪರೀಕ್ಷೆ ನಡೆಸಿದ ವ್ಯಕ್ತಿಗೆ ಸಂದೇಶ ಹೋಗುವ ವ್ಯವಸ್ಥೆ ಆಗಬೇಕು. ಪಾಸಿಟಿವ್ ಎಂದು ಮೆಸೇಜ್ ಕಳಿಸಿದರೆ ಸೋಂಕಿತ ವ್ಯಕ್ತಿಯೇ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.

ರಾಜೀವ್ ಗಾಂಧಿ, ವಿಕ್ಟೋರಿಯಾದಲ್ಲಿ ಕೋವಿಡ್ ಚಿಕಿತ್ಸೆಗೆ ಹಾಸಿಗೆಗಳು ಇವೆ. ಬೌರಿಂಗ್ ಆಸ್ಪತ್ರೆಯನ್ನು ಕೂಡ ಕೋವಿಡ್ ಆಸ್ಪತ್ರೆ ಎಂದು ಘೋಷಿಸಲಾಗಿದೆ. ಅಲ್ಲಿನ ಎರಡು ಫ್ಲೋರ್ ಮಾತ್ರ ಕೋವಿಡ್​ಗೆ ಇಟ್ಟುಕೊಂಡು ಉಳಿದ ಮಹಡಿಗಳಲ್ಲಿ ಇತರ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವುದು. ಸೀರಿಯಸ್ ಕೇಸ್ ಆದ್ರೆ ಮಾತ್ರ ಐಸಿಯು ವ್ಯವಸ್ಥೆ ಬೇಕಾಗುತ್ತದೆ. ಇಲ್ಲದಿದ್ರೆ ಮನೆ ವಾತಾವರಣದಲ್ಲಿಯೇ ಉತ್ತಮ ಆಹಾರದೊಂದಿಗೆ ಒಂದು ವಾರದಲ್ಲಿ ಕೋವಿಡ್ ಗುಣಪಡಿಸಬಹುದು ಎಂದರು.

ಕೊರೊನಾ ಸೋಂಕಿತರ ಮನೆಯ ರಸ್ತೆ ಹಾಗೂ ಒಂದು ಮನೆಯನ್ನು ಕಂಟೈನ್ಮೆಂಟ್​ ಮಾಡುತ್ತಿರುವುದರಿಂದ ಸಂಖ್ಯೆ ಹೆಚ್ಚಾಗ್ತಿದೆ. ಆದ್ರೆ ಒಂದು ವಲಯವನ್ನೇ ಕಂಟೈನ್ಮೆಂಟ್​​​ ಮಾಡುವ ಪದ್ಧತಿ ಈಗ ಇಲ್ಲ ಎಂದರು. ನಗರದಲ್ಲಿ ಒಂದೇ ದಿನ 42 ಕೇಸ್ ವರದಿಯಾಗಿದ್ದು, ಅದು ಒಂದು ದಿನದ ವರದಿ ಅಲ್ಲ. ಐದು ದಿನದ ಕೇಸ್. ಬುಲೆಟಿನ್​ನಲ್ಲಿ ಅಪ್ಲೋಡ್ ಮಾಡುವುದು ತಡವಾಗ್ತಿರೋದ್ರಿಂದ ಒಂದೇ ದಿನ ಹೆಚ್ಚು ಪಾಸಿಟಿವ್ ಕೇಸ್ ಬಂದಿದೆ ಎಂದರು.

Last Updated : Jun 12, 2020, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.