ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಎಲ್ಲಾ ಪಕ್ಷಗಳಲ್ಲೂ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ರಾಜ್ಯದಲ್ಲಿ ಏಪ್ರಿಲ್ 18 ಹಾಗೂ ಏಪ್ರಿಲ್ 23 ಎರಡು ಹಂತದ ಚುನಾವಣೆ ನಡೆಯಲಿದೆ.
ಮೊದಲ ಹಂತದಲ್ಲಿ ತಮ್ಮ ಪಕ್ಷದ 14 ಅಭ್ಯರ್ಥಿಗಳನ್ನು ಫೈನಲ್ ಮಾಡಿದ್ದ ಉತ್ತಮ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ, ಎರಡನೇ ಹಂತದ ಚುನಾವಣೆಗೆ 13 ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಇಂದು ಬೆಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ಕರೆದು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಉಪೇಂದ್ರ ಪರಿಚಯ ಮಾಡಿಸಿದರು. ಆದರೆ, ಬಳ್ಳಾರಿ ಕ್ಷೇತ್ರದಲ್ಲಿ ನಮಗೆ ಸೂಕ್ತ ಅಭ್ಯರ್ಥಿ ಸಿಗದ ಕಾರಣ ಅಲ್ಲಿ ನಮ್ಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಕೆಲಸ ನೋಡಿ ಬಳ್ಳಾರಿಯಲ್ಲಿ ಉತ್ತಮ ಅಭ್ಯರ್ಥಿ ಸಿಗುತ್ತಾರೆ ಎಂಬ ವಿಶ್ವಾಸವನ್ನ ಉಪೇಂದ್ರ ವ್ಯಕ್ತಪಡಿಸಿದರು.
ಮೊದಲ ಹಂತದ ಚುನಾವಣೆ ನಡೆಯುವ ಹತ್ತು ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇವೆ. ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ನಾಳೆಯಿಂದ ಎರಡು ದಿನಗಳು ಬೆಂಗಳೂರಿನಲ್ಲಿ ಪ್ರಚಾರ ಮಾಡಿ ನಂತರ ಉತ್ತರ ಕರ್ನಾಟಕದ ಕಡೆ ಪ್ರಚಾರ ಆರಂಭಿಸುವುದಾಗಿ ಉಪೇಂದ್ರ ಹೇಳಿದರು.
ಯುಪಿಪಿ ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಹೀಗಿದೆ
೧) ಚಿಕ್ಕೋಡಿ _ ಪ್ರವೀಣ್ ಕುಮಾರ ಬಾಳಿಗಟ್ಟಿ
೨) ಬೆಳಗಾವಿ _ ಮಂಜುನಾಥ ರಾಜಪ್ಪನವರ್
೩) ಬಾಗಲಕೋಟೆ _ ಶಶಿಕುಮಾರ.ಎಂ
೪) ವಿಜಯಪುರ_ ಗುರುಬಸವ ಪಿ. ರಬಕವಿ
೫) ಕಲಬುರ್ಗಿ _ ಮಹೇಶ್ ಲಂಬಾಣಿ
೬) ರಾಯಚೂರು _ ನಿರಂಜನ್ ನಾಯಕ್
೭) ಬೀದರ್ _ ಅಂಬರೀಶ್ ಕೆಂಚಾ
೮) ಕೊಪ್ಪಳ _ ಶರಣಯ್ಯ ವಿ ಬಂಡೀಮಠ್
೯) ಹಾವೇರಿ _ ಈಶ್ವರ ಪಾಟೀಲ
೧೦) ಧಾರವಾಡ _ ಸಂತೋಷ್ ನಂಡೂರ್
೧೧) ಉತ್ತರ ಕನ್ನಡ _ ಸುನಿಲ್ ಪವಾರ್
೧೨) ದಾವಣಗೆರೆ __ ಗಣೇಶ್ ಬಿ.ಎ
೧೩) ಶಿವಮೊಗ್ಗ _ ವೆಂಕಟೇಶ್.ಆರ್