ETV Bharat / state

ಕೆಎಸ್‌ಆರ್‌ಟಿಸಿಗೆ ಮನಸೋತ ಯುಪಿ: ಅಧ್ಯಯನಕ್ಕೆ ಸಲಹೆಗಾರರ ನಿಯೋಗ ಕಳಿಸಿದ ಸಿಎಂ ಯೋಗಿ

ಉತ್ತರಪ್ರದೇಶ ಸರ್ಕಾರ ಕರ್ನಾಟಕದ ಸಾರಿಗೆ ವ್ಯವಸ್ಥೆಯನ್ನು ಮೆಚ್ಚಿಕೊಂಡಿದ್ದು, ಅಲ್ಲಿನ ಅಧಿಕಾರಿಗಳು ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಭೇಟಿ ನೀಡಿ ವಿವರ ಪಡೆದುಕೊಂಡಿದ್ದಾರೆ.

ಯುಪಿ ಸರ್ಕಾರದ ಅಧಿಕಾರಿಗಳು
ಯುಪಿ ಸರ್ಕಾರದ ಅಧಿಕಾರಿಗಳು
author img

By ETV Bharat Karnataka Team

Published : Sep 14, 2023, 8:34 AM IST

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಉಪಕ್ರಮಗಳಿಗೆ ಉತ್ತರ ಪ್ರದೇಶ ಸರ್ಕಾರ ಫಿದಾ ಆಗಿದೆ. ಸಾಮಾನ್ಯ ಸಾರಿಗೆ ಹಾಗು ಪ್ರೀಮಿಯಂ ಸೇವೆಗಳೆರಡರ ನಿರ್ವಹಣೆಗೂ ಮಾರುಹೋಗಿದ್ದು ಯುಪಿಆರ್​ಟಿಸಿ ನಿಯೋಗದ ಬಳಿಕ ಯುಪಿ ಸರ್ಕಾರದ ಅಧಿಕಾರಿಗಳ ನಿಯೋಗವೇ ಕೆಎಸ್‌ಆರ್​ಟಿಸಿ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ. ಎಲ್ಲೆಡೆ ಯುಪಿ ಮಾಡೆಲ್​ ಎನ್ನುವ ಚರ್ಚೆಯ ನಡುವೆ ಯುಪಿಯಲ್ಲೇ ಕರ್ನಾಟಕ ಮಾಡೆಲ್​ನ ಚಿಂತನೆ ನಡೆದಿದ್ದು ಕುತೂಹಲ ಮೂಡಿಸಿದೆ.

ಕೆ.ಎಸ್​.ಆರ್​.ಟಿ.ಸಿ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ಅಧಿಕಾರಿಗಳು
ಕೆಎಸ್‌ಆರ್‌ಟಿಸಿ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ಯುಪಿ ಅಧಿಕಾರಿಗಳು

ಉತ್ತರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳ ತಂಡದ ನಿಯೋಗ ಕೆಎಸ್‌ಆರ್‌ಟಿಸಿಗೆ ಭೇಟಿ ನೀಡಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಲಹೆಗಾರ ಡಾ.ಕೆ.ವಿ.ರಾಜು, ಯುಪಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್. ವೆಂಕಟೇಶ್ವರಲು ಹಾಗೂ ಉದ್ಯಮಶೀಲತೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಎಂ.ಕೆ.ಷಣ್ಮುಗ ಸುಂದರಂ ಸೇರಿದಂತೆ ಅಧಿಕಾರಿಗಳ ತಂಡವು ಶಾಂತಿನಗರದಲ್ಲಿರುವ ನಿಗಮದ ಕೇಂದ್ರ ಕಚೇರಿಗೆ ಭೇಟಿ ನೀಡಿ ನಿಗಮದಲ್ಲಿ ಅನುಷ್ಠಾನಗೊಳಿಸಿರುವ ಉಪಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರ ಪಡೆದರು.

ಸಾರಿಗೆ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಎಂಡಿ ವಿ.ಅನ್ಬುಕುಮಾರ್, ಯುಪಿ ನಿಯೋಗಕ್ಕೆ ಅಗತ್ಯ ಮಾಹಿತಿ ಒದಗಿಸಿದರು. ನಂತರ ತಂಡ ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-4ಕ್ಕೆ ಭೇಟಿ ನೀಡಿ, ನಿಗಮದ ಪ್ರತಿಷ್ಟಿತ ವಾಹನಗಳಾದ ಐರಾವತ ಕ್ಲಬ್ ಕ್ಲಾಸ್, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ ವಾಹನಗಳ ಕಾರ್ಯಾಚರಣೆ, ತಾಂತ್ರಿಕ ನಿರ್ವಹಣೆಯ ಬಗ್ಗೆ ಮಾಹಿತಿ ಹಾಗೂ ಎಲೆಕ್ಟ್ರಿಕ್ ಬಸ್​ಗಳ ಘಟಕ ಮತ್ತು ಚಾರ್ಜಿಂಗ್ ಸ್ಟೇಷನ್​ಗೆ ಭೇಟಿ‌ ಕೊಟ್ಟಿತು. ಪ್ರೀಮಿಯಂ ಸೇವೆಗಳ ಉಪಕ್ರಮಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಸೆಪ್ಟೆಂಬರ್ ಆರಂಭದಲ್ಲಿ ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳ ತಂಡ ಕೆಎಸ್‌ಆರ್ಟಿಸಿ ಕಚೇರಿಗೆ ಭೇಟಿ ನೀಡಿ, ಎರಡು ದಿನಗಳ ಕಾಲ ನಿಗಮದ ಸಮಗ್ರ ಕಾರ್ಯಾಚರಣೆ, ನಿರ್ವಹಣಾ ವಿಧಾನವನ್ನು ಅಧ್ಯಯನ ಮಾಡಿ ಹೊಸ ಹೊಸ ಪ್ರಯೋಗಗಳು, ಡೀಸೆಲ್ ಜೊತೆ ಬಯೋಡೀಸೆಲ್ ವಾಹನ, ವಿದ್ಯುತ್ ವಾಹನ ಪರಿಚಯಿಸಿ ಕಾರ್ಯಾಚರಣೆ ನಡೆಸುತ್ತಿರುವ ಕುರಿತು ಯುಪಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

ವಾಹನಗಳ ತಾಂತ್ರಿಕ ನಿರ್ವಹಣೆ ಮತ್ತು ಕಾರ್ಯಾಚರಣೆ, ಡ್ಯೂಟಿ ರೋಟಾ ವ್ಯವಸ್ಥೆ, ಮುಂಗಡ ಆಸನ ಕಾಯ್ದಿರಿಸುವಿಕೆ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಕ್ರಮಗಳು, ಮಾಹಿತಿ ತಂತ್ರಜ್ಞಾನ ಉಪಕ್ರಮಗಳು, ಬಸ್‌ ನಿಲ್ದಾಣ/ಘಟಕಗಳ ಕಾಮಗಾರಿ ಪದ್ಧತಿ, ಬಸ್‌ಗಳ ಬ್ರ್ಯಾಂಡಿಂಗ್, ಪುನಶ್ಚೇತನ ಕಾರ್ಯ, ಬಸ್‌ ನಿಲ್ದಾಣದ ಸ್ವಚ್ಛತೆ ಬಗ್ಗೆ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿತ್ತು.

ಕೆ.ಎಸ್​.ಆರ್​.ಟಿ.ಸಿ ಕೇಂದ್ರ ಕಚೇರಿಗೆ ಭೇಟಿ ನೀಡಿರುವ ಯುಪಿ ಸಿಎಂ ಸಲಹೆಗಾರರ ನಿಯೋಗ
ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಗೆ ಭೇಟಿ, ಸಚಿವ ರಾಮಲಿಂಗಾ ರೆಡ್ಡಿ ಜೊತೆ ಸಮಾಲೋಚನೆ

ಗ್ರಾಮೀಣ ಸಾರಿಗೆ, ನಗರ ಸಾರಿಗೆ, ವೇಗದೂತ, ರಾಜಹಂಸ, ಹವಾನಿಯಂತ್ರಣರಹಿತ ಸ್ಲೀಪರ್, ಎಸಿ ಸ್ಲೀಪರ್, ವೋಲ್ವೋ, ಮಲ್ಟಿ ಆಕ್ಸಲ್ ವೋಲ್ವೋ, ಮಲ್ಟಿ ಆ್ಯಕ್ಸಲ್ ಸ್ಲೀಪರ್ ಜೊತೆಗೆ ಅಂತರ್‌ಜಿಲ್ಲೆಗಳಿಗೆ ಎಸಿ ವಿದ್ಯುತ್ ಚಾಲಿತ ಬಸ್​ಗಳನ್ನು ಕಾರ್ಯಾಚರಿಸುತ್ತಿರುವ ವಿವರ ನೀಡಿತ್ತು.

ಈ ಎಲ್ಲಾ ವಿವರಗಳ ವರದಿ ಮೆಚ್ಚಿರುವ ಉತ್ತರಪ್ರದೇಶ ಸಾರಿಗೆ ಇಲಾಖೆ ಕೆಎಸ್‌ಆರ್‌ಟಿಸಿ ಉಪಕ್ರಮಗಳ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮಾಹಿತಿ ನೀಡಿತ್ತು. ಈ ವರದಿ ಹಿನ್ನೆಲೆಯಲ್ಲಿ ಖುದ್ದು ತಮ್ಮ ಸಲಹೆಗಾರರ ನೇತೃತ್ವದ ತಂಡವನ್ನೇ ಕರ್ನಾಟಕಕ್ಕೆ ಕಳಿಸಿಕೊಟ್ಟಿರುವ ಯೋಗಿ, ಕೆಎಸ್‌ಆರ್‌ಟಿಸಿ ಉಪಕ್ರಮಗಳ ಬಗ್ಗೆ ಮತ್ತಷ್ಟು ವಿವರ ಪಡೆದುಕೊಂಡು ಬರುವಂತೆ ಸೂಚಿಸಿದ್ದಾರೆ. ಅದರಂತೆ ಅಧಿಕಾರಗಳ ತಂಡ ಬಂದು ಹೋದ 10 ದಿನದಲ್ಲೇ ಸಿಎಂ ಸಲಹೆಗಾರರ ನಿಯೋಗ ರಾಜ್ಯಕ್ಕೆ ಆಗಮಿಸಿದೆ.

ಇದನ್ನೂ ಓದಿ: ಗಣೇಶ ಹಬ್ಬದ ನಿಮಿತ್ತ NWKRTCಯಿಂದ ಹೆಚ್ಚುವರಿ ವಿಶೇಷ ಬಸ್​ ಸೌಲಭ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.