ETV Bharat / state

ಯೋಗದಿನದಂದು ವ್ಯಾಕ್ಸಿನೇಷನ್ ಮೇಳ : ಸಚಿವ ಸುಧಾಕರ್

author img

By

Published : Jun 19, 2021, 7:24 PM IST

ಜನರು 3ನೇ ಅಲೆಗೆ ಯಾರೂ ಎಡೆ ಮಾಡಿಕೊಡಬಾರದು. ಸರ್ಕಾರದ ಮಾರ್ಗಸೂಚಿ ಹೊರಡಿಸಿದ್ದನ್ನ ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ 3ನೇ ಅಲೆ ತೀವ್ರ ಸ್ವರೂಪದಲ್ಲಿ ಬರಬಾರದು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಡಾ. ದೇವಿಪ್ರಸಾದ್ ಶೆಟ್ಟಿ ವರದಿ ಕೊಟ್ಟಿದ್ದಾರೆ..

Minister Sudhakar
ಯೋಗದಿನದಂದು ವ್ಯಾಕ್ಸಿನೇಷನ್ ಮೇಳ

ಬೆಂಗಳೂರು : ಜಿಲ್ಲಾವಾರು ಪಾಸಿಟಿವಿಟಿ ದರ, ಬೆಡ್​​ಗಳ ಲಭ್ಯತೆ‌, ಮರಣ ಪ್ರಮಾಣ, ಸೋಂಕು ನಿಯಂತ್ರಣಾ ಕ್ರಮಗಳ ಕುರಿತಂತೆ ಹಿರಿಯ ಅಧಿಕಾರಿಗಳ ಜತೆ ಸಚಿವ ಸುಧಾಕರ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ಇಲಾಖೆಯ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ಆಯುಕ್ತ, ಅಧಿಕಾರಿಗಳು ಭಾಗಿಯಾಗಿದ್ದರು.

ಯೋಗದಿನದಂದು ವ್ಯಾಕ್ಸಿನೇಷನ್ ಮೇಳ..

ಸಭೆ ಬಳಿಕ ಮಾತಾನಾಡಿದ ಸಚಿವ ಸುಧಾಕರ್, ಜೂನ್ 21ರಂದು 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಿದೆ. ಅಂದು ಬಹಿರಂಗ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಲಾಗಿದೆ. ಹೀಗಾಗಿ, ಸೋಮವಾರದಂದು ಸಾಂಕೇತಿಕವಾಗಿ ಲಸಿಕಾ ಮೇಳ ನಡೆಸಲಾಗುವುದು. 18 ರಿಂದ 44 ರವರೆಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತೆ. ಈಗಾಗಲೇ ಕೋವಿಶೀಲ್ಡ್ 14 ಲಕ್ಷ ಡೋಸ್ ದಾಸ್ತಾನು ಇದೆ. ಅಂದು ಒಂದೇ ದಿನ 5 ರಿಂದ 7 ಲಕ್ಷ ಲಸಿಕೆ ನೀಡಲು ಗುರಿ ಹೊಂದಿದ್ದೇವೆ ಎಂದರು. ಈವರೆಗೆ ರಾಜ್ಯದಲ್ಲಿ 1 ಕೋಟಿ 80 ಡೋಸ್ ಹಾಕಿದ್ದೇವೆ ಎಂದರು.

‘ಲಾಕ್ ಡೌನ್ ಸಡಿಲಿಕೆ’

ರಾಜ್ಯದಲ್ಲಿ ಲಾಕ್‌ಡೌನ್ ಹಂತ ಹಂತವಾಗಿ ಸಡಿಲಗೊಳಿಸಲು ಚರ್ಚೆ ನಡೆಸಿದ್ದೇವೆ. ಪಾಸಿಟಿವಿಟಿ ಆಧಾರದಲ್ಲಿ ಜಿಲ್ಲೆಗಳಲ್ಲಿ ಅನ್‌ಲಾಕ್ ಮಾಡೋ ಬಗ್ಗೆ ಚರ್ಚಿಸಿದ್ದೇವೆ. ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ 16 ಜಿಲ್ಲೆಗಳಿವೆ. 13 ಜಿಲ್ಲೆಗಳಲ್ಲಿ ಶೇ.5ರಿಂದ ಶೇ.10ರಷ್ಟು ಪಾಸಿಟಿವಿಟಿ ದರವಿದೆ. ಮೈಸೂರೊಂದರಲ್ಲೇ ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇದೆ. ಪಾಸಿಟಿವಿಟಿ ದರ ಆಧರಿಸಿಯೇ ಮುಂದಿನ 14 ದಿನಕ್ಕೆ ಅನ್ಲಾಕ್ ಕ್ರಮ ಕೈಗೊಳ್ಳಲಾಗುತ್ತೆ ಎಂದರು.

‘ಲಸಿಕೆ ಪಡೆದವರಿಗೆ ಸೋಂಕು ಬಂದಿಲ್ಲ’

ಯಾರು ಎರಡು ಡೋಸ್ ಲಸಿಕೆ ಪಡೆದಿದ್ದಾರೋ ಅವರಿಗೆ ಶೇ. 99.9 % ಸೋಂಕು ಬಂದಿಲ್ಲ. ಸೋಂಕು ಬಂದವರು ಐಸಿಯುವರೆಗೆ ಹೋಗಿಲ್ಲ. ಎರಡು ಡೋಸ್ ಲಸಿಕೆ ಪಡೆದವರಿಗೆ ಯಾವುದೇ ಮ್ಯೂಟೆಂಟ್ ವೈರಸ್ ಸಹ ಬಾಧಿಸುವುದಿಲ್ಲ. ಹೀಗಾಗಿ, ದಯವಿಟ್ಟು ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದರು.

‘ಅಡ್ಡಾದಿಡ್ಡಿ ತಿರುಗಾಡಬೇಡಿ’

ಜನರು 3ನೇ ಅಲೆಗೆ ಯಾರೂ ಎಡೆ ಮಾಡಿಕೊಡಬಾರದು. ಸರ್ಕಾರದ ಮಾರ್ಗಸೂಚಿ ಹೊರಡಿಸಿದ್ದನ್ನ ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ 3ನೇ ಅಲೆ ತೀವ್ರ ಸ್ವರೂಪದಲ್ಲಿ ಬರಬಾರದು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲು ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈಗಾಗಲೇ ಡಾ. ದೇವಿಪ್ರಸಾದ್ ಶೆಟ್ಟಿ ವರದಿ ಕೊಟ್ಟಿದ್ದಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.