ಬೆಂಗಳೂರು : ಕಾಡುಗೊಲ್ಲರ ನೋವಿನ ಜೀವನ ಪದ್ಧತಿ ಮತ್ತು ಜೀವನಶೈಲಿ ನೂರಾರು ವರ್ಷದ ಇತಿಹಾಸವನ್ನು ಎಲ್ಲರೂ ತಿಳಿಯಬೇಕು ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ.
ರಾಜ್ಯ ಕಾಡುಗೊಲ್ಲರ ಸಂಘದ ವತಿಯಿಂದ ಚಾಮುಂಡೇಶ್ವರಿ ಸ್ಟುಡಿಯೋ ಸಭಾಂಗಣದಲ್ಲಿ ಕಾಡುಗೊಲ್ಲರ ಜೀವನ ಶೈಲಿಯ ಸಾಕ್ಷ್ಯ ಚಿತ್ರ ಬಿಡುಗಡೆ ಸಮಾರಂಭದಲ್ಲಿ ರಾಜ್ಯಮಟ್ಟದ ಕಾಡುಗೊಲ್ಲರ ಸಭೆ, ಡಿ.ವಿ.ಡಿ. ಮತ್ತು ವಿಡಿಯೊ ಪ್ರಥಮ ಪ್ರದರ್ಶನ ಚಾಲನೆ ನೀಡಿ ಮಾತನಾಡಿ, ಕಾಡುಗೊಲ್ಲರ ಸಮುದಾಯದಲ್ಲಿ ಸಂಸ್ಕೃತಿ ಸಿರಿತನವಿದೆ, ಮನುಕುಲಕ್ಕೆ ಸಹಕಾರಿಯಾಗಿ ಬಾಳುವೆ ಮಾಡುವರು ಇವರು ಎಂದರು.
75 ವರ್ಷಗಳಿಂದ ಸರ್ಕಾರಗಳು ಯಾವುದೇ ಸೌಲಭ್ಯ ನೀಡದೆ ಕಾಡುಗೊಲ್ಲರನ್ನ ಕಡೆಗಣಿಸಲಾಗಿದೆ. ಸಮಾಜದಲ್ಲಿ ಬದಲಾವಣೆಗೆ ಚರ್ಚೆಯಾಗಬೇಕು. ಕಾಡುಗೊಲ್ಲರು ಬಗ್ಗೆ 1807ಇಸವಿ ಬುಕನ್ ಅವರ ಬುಡಕಟ್ಟು, ಅಲೆಮಾರಿ ಸಮುದಾಯ ಎಂದು ವರದಿ ನೀಡಿದ್ದಾರೆ ಎಂದು ತಿಳಿಸಿದರು.
ರಾಜಕೀಯ ತೀರ್ಮಾನ ಮಾಡಲು ಸಾಧ್ಯವಿಲ್ಲವೆಂದು ಕಾಡುಗೊಲ್ಲರನ್ನ ಕಡೆಗಣಿಸಿದರು. ಮೂಲಭೂತ ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ ಕಾಡುಗೊಲ್ಲ ಸಮಾಜದ ಇತಿಹಾಸವನ್ನು ಸಂಗ್ರಹಿಸಿ ಹಾಗೂ ಅನ್ನಪೂರ್ಣ ಅವರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಕಾಡುಗೊಲ್ಲರು ವಾಸಿಸುವ ಪ್ರದೇಶವನ್ನು ಕಂದಾಯ ಗ್ರಾಮಗಳಾಗಿ ಮಾಡಿ ಹಕ್ಕು ಪತ್ರ ನೀಡಬೇಕು.
ಕಾಡುಗೊಲ್ಲರ ಅಭಿವೃದ್ದಿಗಾಗಿ 15 ಎಕರೆ ಜಮೀನು ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕಾಡುಗೊಲ್ಲರ ಜೀವನ ಪದ್ದತಿ, ಆರ್ಥಿಕ ಸ್ಥಿತಿ, ಜೀವನ ಶೈಲಿ ರಾಷ್ಟಕ್ಕೆ ತಿಳಿಯಬೇಕು. 75 ವರ್ಷಗಳಿಂದ ಕಾಡುಗೊಲ್ಲರು ಶಿಕ್ಷಣ, ಉದ್ಯೋಗ, ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದರು.
ಕಾಡುಗೊಲ್ಲ ಸಮುದಾಯಕ್ಕೆ ಎಸ್. ಟಿ ಮೀಸಲಾತಿಗಾಗಿ ಕೇಂದ್ರ ಗೃಹ ಸಚಿವರಾದ ಅಮಿತ್ ಷಾ ಅವರು ಕೇಂದ್ರ ಸರ್ಕಾರದ ಜೊತೆಯಲ್ಲಿ ಚರ್ಚಿಸಿ ಅವರಿಗೆ ಎಸ್. ಟಿ ಮೀಸಲಾತಿ ಒದಗಿಸಲು ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ರಾಜ್ಯ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ ಮಾತನಾಡಿ, ಕಾಡುಗೊಲ್ಲ ಬುಡಕಟ್ಟು ಸಮುದಾಯ ಆರ್ಥಿಕವಾಗಿ ಹಿಂದುಳಿದವರಾಗಿದ್ದಾರೆ. ಕಾಡುಗೊಲ್ಲ ಸಮುದಾಯವನ್ನು ಎಸ್.ಟಿಗೆ ಸೇರಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಈ ಜನಾಂಗ ವಾಸಿಸುವ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಮಾಡಬೇಕು. ಮೂಲಭೂತ ಸಮಸ್ಯೆಗಳು ಮತ್ತು ಹಕ್ಕು ಪತ್ರ ನೀಡಬೇಕು. ಬುಡಕಟ್ಟು ಜನಾಂಗ ತಮ್ಮದೇ ಆಚರಣೆ, ಸಂಸ್ಕೃತಿ, ಸಂಪ್ರಾದಯ ಉಳಿಸಿಕೊಂಡು ಕಾಡಿನ ಅಂಚಿನಲ್ಲಿ ಹಟ್ಟಿಗಳನ್ನು ಕಟ್ಟಿಕೊಂಡು ವಾಸ ಮಾಡಲಾಗುತ್ತಿದೆ. ಹಿಂದೂ ಸಂಪ್ರದಾಯ ಹೊರತಾಗಿ ಬುಡಕಟ್ಟು ಸಂಪ್ರದಾಯ ಪಾಲಿಸಲಾಗುತ್ತಿದೆ ಎಂದರು.
ಕಾಡುಗೊಲ್ಲ ಸಮುದಾಯಕ್ಕೆ ಶಿಕ್ಷಣ ವ್ಯವಸ್ಥೆ, ಹಾಸ್ಟೆಲ್ ವ್ಯವಸ್ಥೆ ಉದ್ಯೋಗದಲ್ಲಿ ಅವಕಾಶ ಸಿಗುವಂತೆ ಮಾಡಲು ಕರ್ನಾಟಕ ರಾಜ್ಯ ಕಾಡುಗೊಲ್ಲ ಸಮುದಾಯದ ಜೀವನ ವಾಸ್ತವ ಚಿತ್ರಣ ತೊರಿಸಲು ಸಾಕ್ಷ್ಯ ಚಿತ್ರ ಮಾಡಲಾಗಿದೆ. ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಕಾಡುಗೊಲ್ಲ ಸಮುದಾಯದ ಪ್ರಾಬಲ್ಯವಿದೆ. ಚಿತ್ರದುರ್ಗ, ತುಮಕೂರು ಪಾವಗಡ, ಶಿರಾ, ಕೂಡ್ಲಗಿ, ಕೊರಟಗೆರೆ ಜಿಲ್ಲೆಯಲ್ಲಿ ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ ಹಿಂದುಳಿದ ಅವರನ್ನ ಸಮಾಜದ ಮುಖ್ಯ ವಾಹಿನಿ ತರಬೇಕು ಎಂದು ಹೇಳಿದರು.
ರಾಜ್ಯದಲ್ಲಿರುವ ಕಾಡುಗೊಲ್ಲ ಸಮುದಾಯ 7 ಲಕ್ಷ ಜನಸಂಖ್ಯೆ ಇದೆ. ಕಾಡುಗೊಲ್ಲ ಸಮುದಾಯದವನ್ನು ಎಸ್. ಟಿ ಮೀಸಲಾತಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರಿಗೆ, ಕೇಂದ್ರ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು. ರಾಜ್ಯ ಕಾಡುಗೊಲ್ಲರ ಸಮಾಜದ ಹಿರಿಯ ಮುಖಂಡರಾದ ಡೊಡ್ಡ ನಾಗಯ್ಯ, ರಾಷ್ಟ ಪ್ರಶಸ್ತಿ ವಿಜೇತ ನಿರ್ದೇಶಕ ನಂಜುಂಡೇಗೌಡ ಉಪಸ್ಥಿತರಿದ್ದರು.
ಓದಿ: ಲತಾ ಮಂಗೇಶ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಲು ಮುಂಬೈಗೆ ಆಗಮಿಸಲಿದ್ದಾರೆ ಪ್ರಧಾನಿ