ETV Bharat / state

ರೈತರಿಗೆ ಏಕೀಕೃತ ಕರೆ ಕೇಂದ್ರ ವ್ಯವಸ್ಥೆ; ಭೀಮಾ ಫಲ್ಸ್ ಬ್ರ್ಯಾಂಡ್‌ನ ತೊಗರಿ ಮಾರುಕಟ್ಟೆಗೆ

author img

By

Published : Aug 17, 2023, 4:28 PM IST

Minister Chaluvarayaswamy: ಬೆಳೆ, ಹವಾಮಾನ, ವಿಮೆ, ರೈತ ವಿದ್ಯಾನಿಧಿ, ಕೃಷಿ ಸಂಜೀವಿನಿ, ಪಿಎಂ ಕಿಸಾನ್​ ಬೆಳೆ ಸಮೀಕ್ಷೆ ಮತ್ತಿತರ ವಿಷಯಗಳಲ್ಲಿ ಸೂಕ್ತ ಮಾಹಿತಿ, ಸಲಹೆ ಒದಗಿಸುವುದು ಏಕೀಕೃತ ರೈತ ಕರೆಯ ಉದ್ದೇಶ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಕೃಷಿ ಸಚಿವ ಚೆಲುವರಾಯ ಸ್ವಾಮಿ
ಕೃಷಿ ಸಚಿವ ಚೆಲುವರಾಯ ಸ್ವಾಮಿ
ಕೃಷಿ ಸಚಿವ ಚಲುವರಾಯ ಸ್ವಾಮಿ ಮಾಹಿತಿ

ಬೆಂಗಳೂರು: ಕೃಷಿ ಸಂಬಂಧಿತ ಮಾಹಿತಿ, ಸಲಹೆ-ಮಾರ್ಗದರ್ಶನ‌ ಪಡೆಯಲು ಏಕೀಕೃತ ರೈತ ಕರೆ ಕೇಂದ್ರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಕೃಷಿ ಆಯುಕ್ತರ ಕಚೇರಿಯಲ್ಲಿ ಇಂದು ರೈತ ಸಹಾಯವಾಣಿ ಕೇಂದ್ರದ ಉದ್ಘಾಟನೆ ಹಾಗೂ ಬೆಳೆ ಸಮೀಕ್ಷೆ ಕುರಿತು ತರಬೇತುದಾರರಿಗೆ ರಾಜ್ಯ ಮಟ್ಟದ ಎರಡು ದಿನದ ತರಬೇತಿ ಕಾರ್ಯಾಗಾರಕ್ಕೆ ಚಾಲನೆ, ಭೀಮಾ ಪಲ್ಸ್ ತೊಗರಿ ಬೇಳೆ ಬ್ರ್ಯಾಂಡ್ ಬಿಡುಗಡೆ ಮಾಡಿ ಸಚಿವರು ಮಾತನಾಡಿದರು.

ಈ ಹಿಂದೆ ವಿವಿಧ ಯೋಜನೆಗಳಿಗಿದ್ದ 8 ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಏಕೀಕೃತ ಕರೆ ಕೇಂದ್ರ ಸ್ಥಾಪಿಸಲಾಗಿದೆ. 1800-425-3553 ನೂತನ ಏಕೀಕೃತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ರೈತರು ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಭೀಮಾ ಫಲ್ಸ್ ಬ್ರ್ಯಾಂಡ್‌ ತೊಗರಿ ಬೇಳೆ ಮಾರುಕಟ್ಟೆಗೆ: 'ಭೀಮಾ ಫಲ್ಸ್' ಬ್ರ್ಯಾಂಡ್‌ನ ತೊಗರಿ ಬೇಳೆಯನ್ನು ಎರಡು ಮಾದರಿಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಸಚಿವರು, ಮುಂದೆ ಇನ್ನಷ್ಟು ಉತ್ಪನ್ನಗಳ‌ ಮೌಲ್ಯ ವರ್ಧನೆಗೆ ಗಮನಹರಿಸಲಾಗುವುದು. ರೈತ ಉತ್ಪಾದಕಾ ಸಂಘಟನೆಗಳ ಮೂಲಕ ಮಾರಾಟ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಅಮೃತ ಮಳಿಗೆಗಳನ್ನು ಹೆಚ್ಚಿಸಿ, ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಹಾಗೂ‌ ಮಾರುಕಟ್ಟೆ ಕಲ್ಪಿಸಲಾಗುವುದು ಎಂದರು.

2023-24ನೇ ಸಾಲಿಗೂ ರೈತ ಸಿರಿ ಯೋಜನೆ ಮುಂದುವರಿಸಲಾಗಿದೆ. ಸಿರಿಧಾನ್ಯಗಳ ಪ್ರೋತ್ಸಾಹಕ್ಕೆ ಮತ್ತಷ್ಟು ಒತ್ತು ನೀಡಲಾಗುತ್ತಿದೆ. ದೆಹಲಿಯಲ್ಲಿ ನವೆಂಬರ್​ನಲ್ಲಿ ನಡೆಯುವ ಜಾಗತಿಕ ಸಮಾವೇಶಕ್ಕೆ ರಾಜ್ಯದಿಂದ ಇಬ್ಬರು ಮಹಿಳಾ ರೈತರನ್ನು ಕಳುಹಿಸಿ ಕೊಡಲಾಗುವುದು. ಮಂಡ್ಯ ಜಿಲ್ಲೆಯ ರಾಣಿ ಚಂದ್ರಶೇಖರ್ ಹಾಗೂ ಕೋಲಾರ ಜಿಲ್ಲೆಯಿಂದ ಮಾರ್ಗರೇಟ್ ಎಂಬವರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಸಿರಿಧಾನ್ಯ ಬೆಳೆದ ರೈತರಿಗೆ ಕ್ರಾಪ್ ಸರ್ವೆ ಆಧಾರಿತ ಮೇಲೆ ಹೆಕ್ಟೇರ್​ಗೆ 10 ಸಾವಿರ ರೂ. ಅನುದಾನ ಗರಿಷ್ಠ 2 ಹೆಕ್ಟೇರ್​ಗೆ ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಸಿರಿಧಾನ್ಯ ಸಂಸ್ಕರಣಾ ಯಂತ್ರೋಪಕರಣಗಳ ಖರೀದಿಗೆ ಶೇ.50 ರ ರಿಯಾಯಿತಿಯಲ್ಲಿ ಗರಿಷ್ಠ 10 ಲಕ್ಷ ರೂ. ವರೆಗೆ ನೀಡಲಾಗುತ್ತದೆ ಎಂದು ಹೇಳಿದರು.

ಬೆಳೆ ಸಮೀಕ್ಷೆ: ರೈತರಿಗೆ ಸರ್ಕಾರದ ‌ಯೋಜನೆಗಳು ಸಮರ್ಪಕವಾಗಿ ತಲುಪಲು ಬೆಳೆ ಸಮೀಕ್ಷೆ ಕೂಡಾ ಪ್ರಮುಖ. ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುವವರಿಗೆ ತಾಂತ್ರಿಕ ಅರಿವು ಹಾಗೂ ಇತರ ಮಾಹಿತಿ ಅಗತ್ಯ. ಹೀಗಾಗಿ ರಾಜ್ಯ ಮಟ್ಟದಲ್ಲಿ ಬೆಳೆ ಸಮೀಕ್ಷೆ ಮಾಸ್ಟರ್ ತರಬೇತುದಾರರ ತರಬೇತಿ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಅಧಿಕಾರಿ ಸಿಬ್ಬಂದಿ ಜವಾಬ್ದಾರಿಯಿಂದ ರೈತರ ಹಿತ ಗಮ‌ದಲ್ಲಿಟ್ಟು ಸಮೀಕ್ಷೆ ನಡೆಸಬೇಕು ಎಂದು ಸೂಚನೆ ಕೊಟ್ಟರು.

ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ‌ತೊಡಗುತ್ತಿವೆ. ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೊಡಗಿಸಿಕೊಂಡರೆ ಉತ್ತಮ ಎಂದು ಸಚಿವರು ಸಲಹೆ ನೀಡಿದರು. ರಾಜ್ಯದಲ್ಲಿ 2017 ಕ್ಕೂ ಮುಂಚಿತವಾಗಿ ಬೆಳೆ ವಿಸ್ತೀರ್ಣ ಅಂಕಿ-ಅಂಶಗಳ ಅಂದಾಜು ಕಾರ್ಯವನ್ನು ಅಧಿಕಾರಿಗಳು ಭೌತಿಕವಾಗಿ ಮಾಡುತ್ತಿದ್ದುದರಿಂದ, ಸಮಯಕ್ಕೆ, ಸರಿಯಾಗಿ ಸರ್ವ/ಹಿಸ್ಸಾವಾರು ಬೆಳೆ ಮಾಹಿತಿಯ ದಾಖಲೆಯು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ, ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸುವ ಕಾರ್ಯ ಸಮಯಕ್ಕೆ ಸರಿಯಾಗಿ ಆಗದೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಹಾಗೂ ರಾಜ್ಯದ ಬೆಳೆವಾರು ವಿಸ್ತೀರ್ಣ ಮತ್ತು ಉತ್ಪಾದನೆಯನ್ನು ಅಂದಾಜಿಸುವ ಕಾರ್ಯವು ವಿಳಂಬವಾಗುತ್ತಿತ್ತು.

ಆದ್ದರಿಂದ, ಸಕಾಲದಲ್ಲಿ ಸರ್ವೆ ನಂಬರ್‌ವಾರು/ಹಿಸ್ಸಾವಾರು/ತಾಕುವಾರು ಬೆಳೆ ಮಾಹಿತಿಯನ್ನು ಪಡೆಯಲು ಪರಿಣಾಮಕಾರಿಯಾದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವುದು ಅವಶ್ಯಕವಾಗಿತ್ತು. ಈ ಹಿನ್ನೆಲೆಯಲ್ಲಿ 2017 ನೇ ಸಾಲಿನಿಂದ ಡಿ.ಪಿ.ಎ.ಆರ್ (ಇ-ಆಡಳಿತ) ಇಲಾಖಾ ವತಿಯಿಂದ ಅಭಿವೃದ್ಧಿಪಡಿಸಲಾದ ಜಿಪಿಎಸ್ ಆಧಾರಿತ ಮೊಬೈಲ್ ತಂತ್ರಾಂಶವನ್ನು ಬಳಸಿ ಸರ್ವೆ ನಂಬರ್/ಹಿಸ್ಸಾವಾರು ಬೆಳೆ ಮಾಹಿತಿಯನ್ನು ದಾಖಲಿಸುವ ಕಾರ್ಯ ಚಾಲ್ತಿಯಲ್ಲಿದೆ.

2019-20ನೇ ಸಾಲಿನಿಂದ ಕೃಷಿ ಇಲಾಖೆಯನ್ನು ನೋಡಲ್‌ ಇಲಾಖೆಯಾಗಿ ನೇಮಿಸಿದ್ದು, ಕಂದಾಯ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಂಡು ಖಾಸಗಿ ನಿವಾಸಿಗಳ (ಪಿ.ಆರ್-ಪ್ರೈವೇಟ್ ರೆಸಿಡೆಂಟ್ಸ್(ಪಿ.ಆರ್. ಮೊಬೈಲ್ ಆಪ್) ಮೂಲಕ ಜಿಲ್ಲಾಧಿಕಾರಿಗಳ ನೇರ ಉಸ್ತುವಾರಿಯಲ್ಲಿ ಕೈಗೊಳ್ಳಲಾಗುತ್ತಿದೆ. 2020 ನೇ ಸಾಲಿನಿಂದ ರೈತರೇ ನೇರವಾಗಿ ತಮ್ಮ ಜಮೀನಿನ ಬೆಳೆ ವಿವರಗಳನ್ನು ರೈತರ ಮೊಬೈಲ್ ಆಪ್ ಮೂಲಕ ದಾಖಲಿಸಲು ಪ್ರೋತ್ಸಾಹಿಸಲಾಗಿತ್ತು ಎಂದು ವಿವರ ನೀಡಿದರು.

ಪುಸ್ತುತ ಪೂರ್ವ ಮುಂಗಾರು, ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಸಮೀಕ್ಷೆ ಮಾಹಿತಿಯಲ್ಲಿನ ವ್ಯತ್ಯಾಸಗಳನ್ನು ರೈತರು ಬೆಳೆ ದರ್ಶಕ್ ಆ್ಯಪ್​ನಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಿ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ.

ಬೆಳೆ ಸಮೀಕ್ಷೆಯ ದತ್ತಾಂಶವನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ ಯೋಜನೆ, NDRF/SDRE ಪರಿಹಾರ ವಿತರಣೆ, ಬ್ಯಾಂಕ್‌ ಮೂಲಕ ಸಾಲ ವಿತರಣೆಗೆ, ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು, ಬೆಳೆ ಅಂಕಿ ಅಂಶಗಳನ್ನು ಕ್ರೋಡೀಕರಿಸಲು, ವಿವಿಧ ಇಲಾಖೆಗಳ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ವಿತರಿಸಲು, ವಿವಿಧ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆ ನಿರ್ಧರಿಸಲು ಮತ್ತು ಸರ್ಕಾರದ ಇನ್ನಿತರೆ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಲಭ್ಯವಾಗಿಸಲಾಗುತ್ತಿದೆ.

ಹಾಗೆಯೇ ಬೆಳೆ ಸಮೀಕ್ಷೆ ದತ್ತಾಂಶವು ಹಂಗಾಮುವಾರು ಅವಶ್ಯವಿರುವ ರಸಗೊಬ್ಬರಗಳ ಪುಮಾಣವನ್ನು ಅಂದಾಜಿಸಲು ಹಾಗೂ ಕಾವು ದಾಸ್ತಾನು ನಿರ್ವಹಿಸುವಲ್ಲಿ ಸಹಾಯವಾಗುತ್ತದೆ. ಬೆಳೆ ಸಮೀಕ್ಷೆ ಕುರಿತು ರೈತರು ಹೆಚ್ಚಿನ ಮಾಹಿತಿ ಪಡೆಯಲು ಬೆಳೆ ಸಮೀಕ್ಷೆಯ ಸಹಾಯವಾಣಿ/ರೈತರ ಕರೆ ಕೇಂದ್ರ (ದೂರವಾಣಿ ಸಂಖ್ಯೆ: 18004253553) ಗೆ ಕರೆ ಮಾಡಬಹುದಾಗಿದೆ. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಬೆಳೆ ಸಮೀಕ್ಷೆ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ವಿವಿಧ ಇಲಾಖೆಯ ಜಿಲ್ಲಾ/ತಾಲ್ಲೂಕು ಮಟ್ಟದ ಮಾಸ್ಟರ್ ತರಬೇತುದಾರರಿಗೆ ಹಾಗೂ ಅಧಿಕಾರಿಗಳಿಗೆ SATCOM ಮೂಲಕ ಹಾಗೂ Online ತರಬೇತಿಗಳನ್ನು ಆಯೋಜಿಸಲಾಗಿತ್ತು.

ಆದರೆ, ಬೆಳೆ ಸಮೀಕ್ಷೆ ಕಾರ್ಯವನ್ನು ಸಕಾಲದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮೊಬೈಲ್ ಆಪ್ ಹಾಗೂ ಸಮೀಕ್ಷೆ ಪ್ರಕ್ರಿಯೆಯಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಾಸ್ಟರ್ ತರಬೇತುದಾರರಿಗೆ ಹೆಚ್ಚಿನ ಮಾಹಿತಿ ನೀಡಿ, ಸಾಮರ್ಥ್ಯ ವೃದ್ಧಿಸುವ ಸಲುವಾಗಿ ತರಬೇತಿ ನೀಡುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಕಾಲಿಕ ಹಾಗೂ ಸರ್ವೆ/ಹಿಸ್ಸಾವಾರು ನಿಖರ ಬೆಳೆ ಮಾಹಿತಿಯ ದಾಖಲೆಗೆ ಅನುವಾಗುವಂತೆ 2023-24 ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಾಸ್ಟ‌ರ್​ ತರಬೇತುದಾರರಿಗೆ ಇಂದು ಮತ್ತು ನಾಳೆ ವಿಭಾಗವಾರು ಎರಡು ದಿನದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾವೇರಿ ನೀರು ವಿವಾದ: ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುವ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಕೃಷಿ ಇಲಾಖೆಯ ಆಯುಕ್ತರ ಕಚೇರಿಯಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಒಂದು ತಿಂಗಳಲ್ಲಿ ಕೆಆರ್​ಎಸ್ ಅಣೆಕಟ್ಟಿನಲ್ಲಿ ಸಂಗ್ರಹವಾಗಿರುವ ನೀರಿನ ಬಗ್ಗೆ ಸತತವಾಗಿ ಮಾಹಿತಿ ನೀಡಲಾಗುತ್ತಿದೆ. ತಮಿಳುನಾಡಿನವರು ಸುಪ್ರೀಂ ಕೋರ್ಟ್​ನ ಮೊರೆ ಹೋಗಿದ್ದಾರೆ. ನಾವು ರೈತರ ಪರವಾಗಿ ಏನು ಪ್ರಯತ್ನ ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ ಎಂದರು.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಂಡ್ಯ ಜಿಲ್ಲೆಯ ಜನರು ಬೆಳೆಗೆ ನೀರು ಬಿಡುವಂತೆ ಕೇಳಿದ್ರು‌‌. ಆಗ ಕುಮಾರಸ್ವಾಮಿಯವರು ಕೇಂದ್ರ ಸರ್ಕಾರವನ್ನು ಕೇಳಿ ಎಂದು ಹೇಳಿದ್ರು‌‌‌. ಆಗ ಏಕೆ ಕುಮಾರಸ್ವಾಮಿ ರೈತರ ಪರ ಮಾತನಾಡಲಿಲ್ಲ ಎಂದು ಪ್ರಶ್ನಿಸಿದರು.

ನಾಗಮಂಗಲದ ಮಾಜಿ ಶಾಸಕ ಸುರೇಶ್ ಗೌಡ ಮಾಡಿರುವ ಹಣ ವಸೂಲಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಚಲುವರಾಯಸ್ವಾಮಿ, ನಮಗೂ ಕೊಡಿಸಿ ಎಂದರು. ನಿನ್ನೆ ನಾಗಮಂಗಲ ಕ್ಷೇತ್ರದಲ್ಲಿ ಸುರೇಶ್ ಗೌಡರು, ಹೈಕಮಾಂಡ್ ತಲುಪಿಸಲು ಸುಮಾರು 300 ಕೋಟಿ ರೂ. ಇಲಾಖೆಯಲ್ಲಿ ವಸೂಲಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ಅನ್ಬುಕುಮಾರ್ ಅವರು ಮಾತನಾಡಿ, ಏಕೀಕೃತ ರೈತ ಕರೆ ಕೇಂದ್ರ ಪ್ರಾರಂಭ ಅತ್ಯಂತ ಮಹತ್ವದ್ದಾಗಿದೆ. ಇದರಿಂದ ರೈತರಿಗೆ ಮಾಹಿತಿ ನೀಡುವ ಜೊತೆಗೆ ಸಮಸ್ಯೆಗಳನ್ನು ಅರಿಯಬಹುದಾಗಿದೆ. ಯಾವ ವಿಚಾರ ತಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದರು.

ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೃಷಿ ಅಭಿವೃದ್ಧಿ ಯೋಜನೆಗಳು ಹೆಚ್ಚು ಪ್ರಗತಿಪರವಾಗಿವೆ ಎಂದು ಅಭಿಪ್ರಾಯ ಪಟ್ಟ ಅವರು, ಬೆಳೆ ಸಮೀಕ್ಷೆ ತರಬೇತಿ ಕಾರ್ಯಾಗಾರವೂ ಸಹ ಅತ್ಯಂತ ಮಹತ್ವವಾದ್ದು, ರೈತರ ಹಿತ ಸಂರಕ್ಷಣೆಗೆ ಅನುಕೂಲಕರ ಹಾಗೂ ಇಲಾಖೆಗಳ ನಡುವಿನ ಸಮನ್ವಯತೆಗೂ ಸಹಕಾರಿ ಎಂದು ಹೇಳಿದರು.

ಇದನ್ನೂ ಓದಿ: ರೈತ ಸಹಾಯವಾಣಿ ಕೇಂದ್ರದ ಉದ್ಘಾಟನೆ: ಬೆಳೆ ದರ್ಶಕ್ ಆ್ಯಪ್​​ ಮೂಲಕ ಬೆಳೆ ಸಮೀಕ್ಷೆ ಸಮಸ್ಯೆ ಇತ್ಯರ್ಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.