ETV Bharat / state

ಕುಂಟುತ್ತಾ ಸಾಗಿದೆ ಅಂಡರ್ ಪಾಸ್ ಕಾಮಗಾರಿ: ವಾಹನ ಸವಾರರಿಗೆ ನರಕಯಾತನೆ

ನಗರದಲ್ಲಿನ ಸಂಚಾರದಟ್ಟಣೆ ನಿವಾರಿಸುವ ಸಲುವಾಗಿ ಪ್ಲೈಓವರ್, ಅಂಡರ್ ಪಾಸ್ ನಿರ್ಮಿಸಲಾಗುತ್ತದೆ. ಆದರೆ, ನಿರ್ಮಾಣ ಕಾರ್ಯ ವರ್ಷಾನುಗಟ್ಟಲೆ ನಡೆದರೆ ಸಾರ್ವಜನಿಕರ ಪರದಾಟ ದುಪ್ಪಟ್ಟಾಗುತ್ತದೆ. ಸದ್ಯ ಕುಂದಲಹಳ್ಳಿ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್​ನದ್ದೂ ಅದೇ ಹಣೆಬರಹ.

author img

By

Published : Dec 28, 2019, 1:24 PM IST

Underpass work delay: Traffic problem for vehicle riders
ಕುಂಟುತ್ತಾ ಸಾಗಿದೆ ಅಂಡರ್ ಪಾಸ್ ಕಾಮಗಾರಿ: ವಾಹನ ಸವಾರಿಗೆ ನರಕಯಾತನೆ

ಬೆಂಗಳೂರು: ನಗರದಲ್ಲಿನ ಸಂಚಾರದಟ್ಟಣೆ ನಿವಾರಿಸುವ ಸಲುವಾಗಿ ಫ್ಲೈಓವರ್, ಅಂಡರ್ ಪಾಸ್ ನಿರ್ಮಿಸಲಾಗುತ್ತದೆ. ಆದರೆ, ನಿರ್ಮಾಣ ಕಾರ್ಯ ವರ್ಷಾನುಗಟ್ಟಲೆ ನಡೆದರೆ ಸಾರ್ವಜನಿಕರ ಪರದಾಟ ದುಪ್ಪಟ್ಟಾಗುತ್ತದೆ. ಸದ್ಯ ಕುಂದಲಹಳ್ಳಿ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್​ನದ್ದೂ ಅದೇ ಹಣೆಬರಹ.

ಕುಂಟುತ್ತಾ ಸಾಗಿದೆ ಅಂಡರ್ ಪಾಸ್ ಕಾಮಗಾರಿ: ವಾಹನ ಸವಾರರಿಗೆ ನರಕಯಾತನೆ

ಕಾಮಗಾರಿ ಮುಗಿದು ಸಾರ್ವಜನಿಕರಿಗೆ ಲಭಿಸಬೇಕಾಗಿದ್ದ ಮಹದೇವಪುರ ಕ್ಷೇತ್ರದ ಮಾರತ್ ಹಳ್ಳಿ ಸಮೀಪದ ಕುಂದಲಹಳ್ಳಿ ಜಂಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಇನ್ನೂ ಕುಂಟುತ್ತಲೇ ಸಾಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಸಿಗ್ನಲ್ ಫ್ರೀ ಕಾರಿಡಾರ್ ಹೆಸರಲ್ಲಿ ಕಾಮಗಾರಿ ಆರಂಭಗೊಂಡಿತು. ಇದೇ ಡಿಸೆಂಬರ್ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಅನುಕೂಲಕ್ಕೆ ಸಿಗಬೇಕಾಗಿತ್ತು. ಆದರೆ, ಕಾಮಗಾರಿ ಮಾತ್ರ ಅರ್ಧದಷ್ಟೇ ಆಗಿದೆ.

ಮಾರತ್ ಹಳ್ಳಿ, ವೈಟ್ ಫೀಲ್ಡ್ ಹಾಗೂ ವರ್ತೂರು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೇ ಐಟಿಬಿಟಿ ಕಂಪನಿಗಳು ಕೂಡಾ ಹೆಚ್ಚಿರುವುದರಿಂದ ಸಂಚಾರದಟ್ಟಣೆಯಲ್ಲಿ ನಿವಾರಿಸಲು ಈ ಕಾಮಗಾರಿ ಆರಂಭಿಸಲಾಗಿತ್ತು. ಆದರೆ, ನಿಧಾನಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದಾಗಿ ವಾಹನ ಸವಾರರು ನಿತ್ಯ ನರಕಯಾತನೇ ಅನುಭವಿಸುವಂತಾಗಿದೆ.

ಕಾಮಗಾರಿ ನಿಧಾನಗತಿಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸಲು ಮುಂದಾದರೆ ಯಾರೊಬ್ಬರೂ ಸಹಕರಿಸಲು ತಯಾರಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ವೇಗ ನೀಡುತ್ತಾರಾ? ಕಾದು ನೋಡಬೇಕಿದೆ.

Intro:ಬೆಂಗಳೂರು: ಮಹದೇವಪುರ.

ಕಾಮಗಾರಿ ಅವಧಿ ಮುಗಿದಿದ್ದರೂ ಪೂರ್ಣಗೊಳ್ಳದ ಅಂಡರ್ ಪಾಸ್,ಟ್ರಾಫಿಕ್ ನಿಂದ ವಾಹನ ಸವಾರಿಗೆ ನರಕಯಾತನೆ.

ನಗರದಲ್ಲಿನ ಸಂಚಾರದಟ್ಟಣೆಯನ್ನು ನಿವಾರಿಸುವ ಸಲುವಾಗಿ ಪ್ಲೈಓವರ್ ಗಳು , ಅಂಡರ್ ಪಾಸ್ ನಿರ್ಮಿಸಲಾಗುತ್ತದೆ, ಆದರೇ ಅದೇ ಪ್ಲೈಓವರ್ ,ಅಂಡರ್ ಪಾಸ್ ಗಳನ್ನು ನಿರ್ಮಿಸಲು ವರ್ಷಾನೂ ಗಟ್ಟಲೇ ಕಾಲಾವಕಾಶ ತೆಗೆದುಕೊಳ್ಳುತ್ತಾರೆ, ಕಾಲಾವಕಾಶ ಮುಗಿದರೂ ಕೂಡಾ ಕಾಮಗಾರಿಗಳು ಮುಗಿಯೋದೆ ಇಲ್ಲ, ಇದರಿಂದ ಸಾರ್ವಜನಿಕರ ಪರದಾಟದ ಅವಧಿ ಕೂಡಾ ಮುಂದುವರೆಯುತ್ತದೆ, ಇಂತದ್ದೆ ಒಂದು ಅಂಡರ್ ಪಾಸ್ ಕಾಮಗಾರಿ ಮುಗಿದು ಸಾರ್ವಜನಿಕರ ಅನುಕೂಲಕ್ಕೆ ಸಿಗಬೇಕಾಗಿದ್ದಿದ್ದು ಇನ್ನೂ ಕುಂಟುತ್ತಲೇ ಸಾಗುತ್ತಿದ್ದು, ವಾಹನ ಸವಾರರು ಮಾತ್ರ ಪ್ರತಿನಿತ್ಯ ನರಕಯಾತನೇ ಅನುಭವಿಸುತ್ತಲೇ ಇದ್ದಾರೆ

ಮಹದೇವಪುರ ಕ್ಷೇತ್ರದ ಮಾರತ್ ಹಳ್ಳಿ ಸಮೀಪದ ಕುಂದಲಹಳ್ಳಿ ಜಂಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿ ಕಳೆದ ಎರಡು ವರ್ಷಗಳ ಹಿಂದೆ ಸಿಗ್ನಲ್ ಫ್ರೀ ಕಾರಿಡಾರ್ ಹೆಸರಲ್ಲಿ ಕಾಮಗಾರಿ ಆರಂಭಗೊಂಡಿತು, ಇದೇ ಡಿಸಂಬರ್ ಹೊತ್ತಿಗೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಅನುಕೂಲಕ್ಕೆ ಸಿಗಬೇಕಾಗಿತ್ತು , ಆದರೇ ಇನ್ನೂ ಕೂಡಾ ಕಾಮಗಾರಿ ಅರ್ಧದಲ್ಲೆ ಇದೆ. ಮಾರತ್ ಹಳ್ಳಿ, ವೈಟ್ ಫೀಲ್ಡ್ ಹಾಗೂ ವರ್ತೂರು ಭಾಗಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೇ ಐಟಿಬಿಟಿ ಕಂಪನಿಗಳು ಕೂಡಾ ಹೆಚ್ಚಿರುವುದರಿಂದ ಸಂಚಾರದಟ್ಟಣೆಯಲ್ಲಿ ನಿವಾರಿಸಲು ಈ ಕಾಮಗಾರಿ ಆರಂಭಿಸಲಾಗಿತ್ತು ಆದರೆ ನಿಧಾನಗತಿಯಲ್ಲಿ ಕಾಮಗಾರಿ ಸಾಗುತ್ತಿರುವುದರಿಂದ ನಿತ್ಯ ನರಕಯಾತನೇ ಅನುಭವಿಸುವ ಸರದಿ ವಾಹನ ಸವಾರರದ್ದು..

Body:ಇನ್ನೂ ಬಹುರಾಷ್ಟ್ರೀಯ ಕಂಪನಿಗಳು , ಪ್ರತಿಷ್ಟಿತ ಶಾಲಾ ಕಾಲೇಜುಗಳು ಇದೇ ಭಾಗದಲ್ಲಿರುವುದರಿಂದ ಜನಸಂಖ್ಯೆ ಹೇರಳವಾಗಿದೆ. ಜನಸಂಖ್ಯೆ ಹೇರಳವಾದಂತೆ ವಾಹನಗಳು ಸಹ ಹೆಚ್ಚಾಗಿವೆ. ಬೆಳಿಗ್ಗೆ ಏಳು ಗಂಟೆಗೆ ಸಂಚಾರದಟ್ಟಣೆ ಶುರುವಾದರೇ ಹನ್ನೊಂದರವರೆಗೂ ಇರುತ್ತದೆ. ಅಷ್ಟರಲ್ಲಾಗಲೇ ಪ್ರಯಾಣಿಕರು ತಲುಪಬೇಕಾದ ಸ್ಥಳಗಳಿಗೆ ತಲುಪಲಾಗದೇ ಒದ್ದಾಡುತ್ತಾರೆ. ಸಂಚಾರಿ ಪೋಲಿಸರೂ ಕೂಡಾ ದಟ್ಟಣೆಯನ್ನು ನಿವಾರಿಸಲು ಹರಸಾಹಸಪಡುತ್ತಾರೆ. ಇನ್ನೂ ಸಂಜೆ ನಾಲ್ಕಾದರೇ ಸಾಕು ಮತ್ತೆ ಸಂಚಾರದಟ್ಟಣೆ ಶುರು ರಾತ್ರಿ ಹನ್ನೊಂದರವರೆಗೂ ಸಮಸ್ಯೆ ಇದ್ದೆ ಇರುತ್ತದೆ. ಆದರೇ ಇಲ್ಲಿ ಉದ್ದೇಶಿಸಲಾಗಿರುವ ಕಾಮಗಾರಿ ಪೂರ್ಣಗೊಂಡರೇ ಸಂಚಾರದಟ್ಟಣೆ ಸಮಸ್ಯೆಗೆ ಮುಕ್ತಿಸಿಗುತ್ತೆ ಅನ್ನುತ್ತಾರೆ ಸ್ಥಳೀಯರು.

Conclusion:ಕಾಮಗಾರಿ ನಿಧಾನಗತಿಗೆ ಸಂಭಂದಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸಲು ಮುಂದಾದರೇ ಯಾರೋಬ್ಬರು ಕೂಡಾ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ವೇಗ ಸಿಗುತ್ತದಾ ಕಾದು ನೋಡಬೇಕಿದೆ...

ಧರ್ಮರಾಜು. ಎಮ್. ಕೆಆರ್ ಪುರ

ಬೈಟ್ ೨ ...ಶಿವನಂದ, ಸ್ಥಳೀಯ

ಬೈಟ್ ...ಮಂಜುನಾಥ್ ಸ್ಥಳೀಯರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.