ಬೆಂಗಳೂರು : ಇಂದು ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ಮಳಿಗೆಗಳ ತೆರವು ಕಾರ್ಯಾಚರಣೆ ನಡೆಯಿತು. ಉಪವಿಭಾಗ ಮಟ್ಟದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಅರುಣ್ ಹಾಗೂ ಸಹಾಯಕ ಅಭಿಯಂತರರಾದ ಮುರಳೀಧರ್, ಸಹಾಯಕ ಅಭಿಯಂತರರಾದ ಮುನಿಯಪ್ಪ ನೇತೃತ್ವದಲ್ಲಿ ತೆರವು ಕಾರ್ಯ ಹಮ್ಮಿಕೊಳ್ಳಲಾಗಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾರತ್ತಹಳ್ಳಿ ಉಪವಿಭಾಗದ ವಾರ್ಡ್ 150ರ ಬೆಳ್ಳಂದೂರು ವ್ಯಾಪ್ತಿಯಲ್ಲಿ ಬರುವ ಇಬ್ಬಲ್ಲೂರು ಜಂಕ್ಷನ್ನಿಂದ ಸರ್ಜಾಪುರ ಮುಖ್ಯರಸ್ತೆಯ ದೊಡ್ದಕನ್ನಲ್ಲಿ ಶಾಲೆಯವರೆಗೆ ಮತ್ತು ವಾರ್ಡ್ ನಂ.86ರಲ್ಲಿ ಮಾರತ್ತಹಳ್ಳಿ ವ್ಯಾಪ್ತಿಯಲ್ಲಿ ಬರುವ ಮಾರತ್ತಹಳ್ಳಿ ಮಾರ್ಕೇಟ್ನಿಂದ ಸಂಜಯನಗರದವರೆಗೆ, ಚೌಡೇಶ್ವರಿ ದೇವಸ್ಥಾನದ ರಸ್ತೆಯಲ್ಲಿ ಅನಧಿಕೃತ ಅಂಗಡಿ ಮಳಿಗೆಗಳ ಒತ್ತುವರಿ ತೆರೆವು ಕಾರ್ಯಾಚರಣೆ ನಡೆಸಲಾಯಿತು.
ಓದಿ: ಗಂಡ- ಹೆಂಡಿರ ಜಗಳಕ್ಕೆ ಬಲಿಯಾದ ಪತ್ನಿಯ ಸಹೋದರ
ಕಾರ್ಯಾಚರಣೆಯಲ್ಲಿ ಒಟ್ಟು 22 ತಾತ್ಕಾಲಿಕ ಅಂಗಡಿ-ಮಳಿಗೆಗಳು, 4 ಶಾಶ್ವತ ಅಂಗಡಿ-ಮಳಿಗೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇತರ ವಾರ್ಡ್ಗಳಲ್ಲಿಯೂ ಸಹ ಈ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಹಾದೇವಪುರ ವಲಯದ ಮುಖ್ಯ ಅಭಿಯಂತರರಾದ ಆರ್ ಎಲ್ ಪರಮೇಶ್ವರಯ್ಯ ಮಾಹಿತಿ ನೀಡಿದರು.