ETV Bharat / state

'ಕತ್ತಿ'ಮತ್ತಷ್ಟು ಹರಿತ: ಬಿಎಸ್​ವೈ ಮನವೊಲಿಕೆ ವಿಫಲ

ಅಸಮಾಧಾನಗೊಂಡಿದ್ದ ಉಮೇಶ್ ಕತ್ತಿಯನ್ನು ಸಮಾಧಾನ ಪಡಿಸಲೆಂದು ಸಿಎಂ ಬಿಎಸ್​ವೈ ತಮ್ಮ ಮನೆಗೆ ಕರೆಸಿಕೊಂಡಿದ್ದರು. ಆದರೆ, ಮಾತುಕತೆಯ ನಡುವೆಯೇ ಶಾಸಕ ಉಮೇಶ ಕತ್ತಿ ಹೊರಬಂದಿದ್ದು, ಬಿಎಸ್​ವೈ ಸಂಧಾನ ವಿಫಲವಾಗಿದೆ.

ಕೋಪಗೊಂಡ 'ಕತ್ತಿ'
author img

By

Published : Aug 24, 2019, 11:49 AM IST

Updated : Aug 24, 2019, 12:09 PM IST

ಬೆಂಗಳೂರು: ಸಚಿವ ಸ್ಥಾನ ವಂಚಿತ ಮಾಜಿ ಸಚಿವ ಉಮೇಶ್ ಕತ್ತಿ ಜೊತೆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸಿದ ಎರಡನೇ ಮನವೊಲಿಕೆ ಸಭೆಯೂ ವಿಫಲಗೊಂಡಿದ್ದು, ಶಿಫಾರಸ್ಸಿನ ಮಂತ್ರಿಗಿರಿ ನಾನು ಕೇಳಲ್ಲ ಎನ್ನುತ್ತಾ ಲಕ್ಷ್ಮಣ‌ಸವದಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಸಿಎಂ ನಿವಾಸದಿಂದ ಕತ್ತಿ ಹೊರ ನಡೆದಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದಲ್ಲಿ ಯಡಿಯೂರಪ್ಪ ಎದುರೇ ಉಮೇಶ್ ಕತ್ತಿ - ಲಕ್ಷ್ಮಣ್ ಸವದಿ ಜಟಾಪಟಿ ನಡೆದಿದೆ. ಪರಸ್ಪರ ಜೋರು ಮಾತುಗಳಿಂದ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಕತ್ತಿಗೆ ಸಚಿವ ಸ್ಥಾನ ತಪ್ಪಿದ್ದು ನನಗೆ ಸಂಬಂಧಸಿದ್ದಲ್ಲ, ಹೈಕಮಾಂಡ್ ನನ್ನ ಕೆಲಸ ಗುರುತಿಸಿ ಮಂತ್ರಿ ಮಾಡಿದ್ದಾರೆ, ನನ್ನ ವಿಚಾರಕ್ಕೆ ಯಾಕ್ ಬರ್ತೀರ ಎಂದು ಸಚಿವ ಸವದಿ ಕತ್ತಿಗೆ ಕೇಳಿದ್ದಾರೆ. ಸವದಿ ಮಾತಿಂದ ಸಿಟ್ಟಾದ ಉಮೇಶ್ ಕತ್ತಿ, ಎಲ್ಲ ನಿನ್ನಿಂದಲೇ ಆಗಿದ್ದು ಹೈಕಮಾಂಡ್ ನಲ್ಲಿ ಲಾಬಿ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದೀಯ, ನಿನ್ನ ಹಾಗೆ ಇನ್ನೊಬ್ಬರ ಶಿಫಾರಸ್ಸಿನ ಮಂತ್ರಿಗಿರಿ ನಾನು ಕೇಳಲ್ಲ ಎಂದು ಸವದಿ ವಿರುದ್ಧ ಸಿಟ್ಟಲ್ಲಿ ವಾಗ್ದಾಳಿ ನಡೆಸಿದರು.

ಕೋಪಗೊಂಡ 'ಕತ್ತಿ'

ಸಚಿವ ಸ್ಥಾನ ವಂಚಿತಗೊಂಡು ತೀವ್ರ ಅಸಮಧಾನಗೊಂಡಿರುವ ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವ ಮೂಲಕ ಸದ್ಯಕ್ಕೆ ಬಿಜೆಪಿಯಲ್ಲಿ‌ ಎದ್ದಿರುವ ಅಸಮಧಾನವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ನಡೆಸಿದ್ದರು. ಆದರೆ ಸಂಧಾನದಲ್ಲಿ ಇಬ್ಬರನ್ನೂ ಸಮಾಧಾನ ಮಾಡಲು ಹೈರಾಣಾದ ಸಿಎಂ ಮನವೊಲಿಕೆ ಮಾಡುವಲ್ಲಿ ವಿಫಲರಾದರು. ಕೊನೆಗೆ ಏನಾದ್ರೂ ಮಾಡಿಕೊಳ್ಳಿ ನನ್ನ ದಾರಿ ನನಗೆ ಎಂದು ಕತ್ತಿ ಸಿಟ್ಟಿನಿಂದ ಹೊರಟರು ಎನ್ನಲಾಗಿದೆ.

ಯಡಿಯೂರಪ್ಪ ನಿವಾಸದಿಂದ ಸಿಟ್ಟಿಂದ ಹೊರಬಂದ ಉಮೇಶ್ ಕತ್ತಿ, ಸಂಪುಟ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆ ಕೇಳಿದರೆ, ನಿಮ್ಮನ್ನು ಕೇಳಿ ಸೇರಿಸ್ತಾರಂತೆ ಎಂದು ಹೇಳಿ ಮಾಧ್ಯಮಗಳ ವಿರುದ್ಧವೂ ಸಿಟ್ಟಿನಿಂದಲೇ ಮಾತನಾಡಿ ತೆರಳಿದರು. ಇದೆಲ್ಲವೂ ಕತ್ತಿ ಜೊತೆ ಬಿಎಸ್​ವೈ ಸಂಧಾನ ಮಾತುಕತೆ ವಿಫಲವಾಯ್ತಾ? ಎನ್ನುವುದಕ್ಕೆ ಪುಷ್ಟಿ ನೀಡುವಂತಿದೆ.

Intro:

ಬೆಂಗಳೂರು: ಸಚಿವ ಸ್ಥಾನ ವಂಚಿತಗೊಂಡ ತೀವ್ರ ಅಸಮಧಾನಗೊಂಡಿರುವ ಬಿಜೆಪಿ ಹಿರಿಯ ನಾಯಕ ಉಮೇಶ್ ಕತ್ತಿಗೆ ಸಚಿವ ಸ್ಥಾನ ನೀಡುವ ಮೂಲಕ ಸಧ್ಯಕ್ಕೆ ಬಿಜೆಪಿಯಲ್ಲಿ‌ ಎದ್ದಿರುವ ಅಸಮಧಾನವನ್ನು ನಿಯಂತ್ರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.

ದೆಹಲಿಯಿಂದ ಹಿಂದಿರುಗುತ್ತಿದ್ದಂತೆ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ಮಾಜಿ ಸಚಿವ ಉಮೇಶ್ ಕತ್ತಿಯನ್ನು ಸಿಎಂ ಕರೆಸಿಕೊಂಡರು. ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಉಮೇಶ್ ಕತ್ತಿ ಅವರ ಮನವೊಲಿಕೆ ಕಾರ್ಯವನ್ನು ನಡೆಸಲಾಯಿತು.

ಈಗಾಗಲೇ ರಮೇಶ್ ಜಾರಕಿಹೊಳಿ ಹಾಗು ಬಾಲಚಂದ್ರ ಜಾರಕಿಹೊಳಿ ಬೆಳಗಾವಿ ಕೋಟಾದಡಿ ಕತ್ತಿ ಅವರಿಗೆ ಸಚಿವ ಸ್ಥಾನ ನೀಡಲು ಒಪ್ಪಿಗೆ ನೀಡಿರುವ ಕಾರಣ ಕತ್ತಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಅನೌಪಚಾರಿಕವಾಗಿ ಮಾತುತೆಯೂ ನಡೆದಿದೆ ಎನ್ನಲಾಗಿದೆ.ಯಾವುದೇ ಮನವೊಲಿಕೆ ಗೆ ಕತ್ತಿ ಒಪ್ಪದೇ ಇದ್ದಲ್ಲಿ ಒಂದು ಅಥವಾ ಎರಡು ವಾರದಲ್ಲಿ ಅವರನ್ನು ಸಂಪುಟಕ್ಕೆ‌ ತೆಗೆದುಕೊಳ್ಳುವ ಚಿಂತನೆ ಬಿಎಸ್ವೈ ನಡೆಸಿದ್ದಾರೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಈಗ ಎದ್ದಿರುವ ಅಸಮಧಾನದಲ್ಲಿ ಸೋತ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೊಟ್ಟಿದ್ದು ಏಕೆ ಎನ್ನುವ ಜೊತೆಯಲ್ಲಿ ಉಮೇಶ್ ಕತ್ತಿಯನ್ನು ಬಿಟ್ಟಿದ್ದು ಏಕೆ ಎನ್ನುವ ಪ್ರಶ್ನೆಯೇ ಪ್ರಮುಖವಾಗಿ ಕೇಳಿಬಂದಿದೆ.ಇದೇ ಚರ್ಚೆ ಪಕ್ಷದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ಈ ಹಿನ್ನಲೆಯಲ್ಲಿ ಲಕ್ಷ್ಮಣ ಸವದಿಯನ್ನು ನಿವಾಸಕ್ಕೆ ಕರೆಸಿಕೊಂಡ ಸಿಎಂ ಕತ್ತಿ ಹಾಗು ಸವದಿಯನ್ನು ಕೂರಿಸಿಕೊಂಡು ಮಾತುಕತೆ ನಡೆಸುತ್ತಿದ್ದಾರೆ. ಒಂದು ರೀತಿಯಲ್ಲಿ ಸಂಧಾನ ಕಾರ್ಯ ನಡೆಸಿ ಸಂತಸ ಗುತ್ತಿ. ಲಕ್ಷ್ಮಣ ಸವದಿಯನ್ನು ಸಂಪುಟದಿಂದ ಬಿಟ್ಟು ಉಮೇಶ್ ಕತ್ತಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೋ ಅಥವಾ ಉಮೇಶ್ ಕತ್ತಿಯನ್ನು ಸಂಪುಟ ವಿಸ್ತರಿಸಿ ತೆಗೆದುಕೊಳ್ಳುತ್ತಾರೋ ಎನ್ನುವುದು ಇದೀಗ ಚರ್ಚಿತ ವಿಷಯವಾಗಿದೆ.

ಇದರ ಜೊತೆ ಮತ್ತೋರ್ವ ಅಸಮಧಾನಿತ ನಾಯಕ ಕೆ.ಜಿ ಬೋಪಯ್ಯ ಅವರನ್ನು ಕರೆಸಿಕೊಂಡು ಸಿಎಂ ಮಾತುಕತೆ ನಡೆಸಿದ್ದಾರೆ.‌ಅವರನ್ನು ಸಮಾಧಾನೊಡಿಸುವಲ್ಪಿ ಸಫಲರಾಗಿದ್ದಾರೆ ಎನ್ನಲಾಗಿದೆ.Body:.Conclusion:
Last Updated : Aug 24, 2019, 12:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.