ಬೆಂಗಳೂರು: ಗಾಳಿಪಟದ ದಾರಕ್ಕೆ ಸಿಲುಕಿ ಹಾರಲಾಗದೆ ಒದ್ದಾಡುತ್ತಿದ್ದ ಹದ್ದನ್ನು ಹಲಸೂರ್ ಗೇಟ್ ಪೊಲೀಸರು ಕ್ರೇನ್ ಮೂಲಕ ರಕ್ಷಣೆ ಮಾಡಿದ್ದಾರೆ.
ಓದಿ: ಎರಡನೇ ಬಾರಿಯೂ ಕೆಜಿಎಫ್ ಚಾಪ್ಟರ್-2 ಬಿಡುಗಡೆ ಮುಂದೂಡಿಕೆ?
ಮರದ ತುದಿಯಲ್ಲಿ ದಾರಕ್ಕೆ ಸಿಲುಕಿಕೊಂಡಿದ್ದ ಹದ್ದನ್ನು ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿಯಿಂದ ಅಮಾಯಕ ಜೀವಿಯ ಪ್ರಾಣ ರಕ್ಷಣೆಯಾಗಿದೆ. ದಾರದಿಂದ ಬಿಡಿಸಿಕೊಳ್ಳಲು ಸಾಕಷ್ಟು ಒದ್ದಾಡುತ್ತಿತ್ತು. ನೋಡಲಾಗದೆ ರಕ್ಷಿಸಲು ಮುಂದಾದೆವು ಎಂದು ಹಲಸೂರು ಠಾಣೆಯ ಪೊಲೀಸ್ ಸಿಬ್ಬಂದಿ ತಿಳಿಸಿದ್ದಾರೆ.
ಈ ಘಟನೆ ನಗರದ ಹೃದಯ ಭಾಗವಾದ ಕಾರ್ಪೋರೇಷನ್ ಸರ್ಕಲ್ ಬಳಿ ನಡೆದಿದ್ದು, ಮರದಲ್ಲಿ ದಾರಕ್ಕೆ ಸಿಲುಕಿಕೊಂಡಿದ್ದ ಹದ್ದನ್ನು ರಕ್ಷಿಸಿದ್ದಕ್ಕೆ ಸುತ್ತಮುತ್ತಲಿನ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.