ETV Bharat / state

ಬಳ್ಳಾರಿ: ಕ್ವಾರಂಟೈನ್​​ ಕೇಂದ್ರದ ಗೋಡೆ ಹಾರಿ ಇಬ್ಬರು ಪರಾರಿ! - ಬಳ್ಳಾರಿ ಲೇಟೆಸ್ಟ್ ನ್ಯೂಸ್​

ಬಳ್ಳಾರಿ ತಾಲೂಕಿನ ಯರ್ರಗುಡಿ ಹೊರ ವಲಯದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.

Two persons escaped from quarantine in Bellary
ಕ್ವಾರಂಟೈನ್​​ನಲ್ಲಿದ್ದ ಇಬ್ಬರು ಪರಾರಿ
author img

By

Published : May 17, 2020, 8:37 PM IST

ಬಳ್ಳಾರಿ: ತಾಲೂಕಿನ ಯರ್ರಗುಡಿ ಹೊರ ವಲಯದ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿದ್ದ ಇಬ್ಬರು ಪರಾರಿಯಾಗಿದ್ದಾರೆ.

ಕ್ವಾರಂಟೈನ್​​ನಲ್ಲಿದ್ದ ಇಬ್ಬರು ಪರಾರಿ

ನೆರೆಯ ಆಂಧ್ರ ಪ್ರದೇಶದ ಕಣೇಕಲ್ ಮಂಡಲದ ಯರ್ರಗುಂಟ್ಲ ಗ್ರಾಮದ ಮುನಿಸ್ವಾಮಿ, ಹೊನ್ನೂರಸ್ವಾಮಿ ಪರಾರಿಯಾಗಿರುವ ವ್ಯಕ್ತಿಗಳೆಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದಿದ್ದ ಮದುವೆ ಸಮಾರಂಭಕ್ಕೆ ಇವರಿಬ್ಬರು ಅನುಮತಿಯನ್ನು ಪಡೆಯದೆ ಆಗಮಿಸಿದ್ದರು.

ಈ ವಿಷಯ ತಿಳಿದ ಆರ್ ​ಆರ್ ತಂಡದ ಮುಖ್ಯಸ್ಥ ಹಾಗೂ ತಹಶೀಲ್ದಾರ್​ ಯು.ನಾಗರಾಜ ಅವರ ತಂಡ ಮದುವೆ ಮನೆಗೆ ನುಗ್ಗಿ ವಧು-ವರ ಸೇರಿದಂತೆ ಅನೇಕ ಜನರನ್ನು ಹೊಸ ಯರ್ರಗುಡಿ ಗ್ರಾಮ ಹೊರವಲಯದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದ್ದರು. ಇಲ್ಲಿರಲು ಸಾಧ್ಯವಾಗದೆ ಈ ಇಬ್ಬರು ವಸತಿ ನಿಲಯದ ಕಂಪೌಂಡ್​ ಹಾರಿ ಪರಾರಿಯಾಗಿದ್ದಾರೆ. ಈ ಸಂಬಂಧ ಮೋಕಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.