ಬೆಂಗಳೂರು: ಹೊಂಗಸಂದ್ರದಲ್ಲಿ ಮತ್ತಿಬ್ಬರು ವಲಸೆ ಕಾರ್ಮಿಕರಲ್ಲಿ ಕೊರೊನಾ ಪತ್ತೆಯಾಗಿದೆ. 60 ವರ್ಷದ ವ್ಯಕ್ತಿ ಹಾಗೂ ಮಧ್ಯ ವಯಸ್ಕ(35-40)ನಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಹೊಂಗಸಂದ್ರದಲ್ಲಿ ವಾಸವಾಗಿದ್ದ ಇವರು ಗುಜುರಿ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ರೋಗಿ- 419ರ ಸಂಪರ್ಕ ಹೊಂದಿದ್ದರು. ಈಗಾಗಲೇ ಮೊದಲು ಕೊರೊನಾ ಬಂದ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದಾರೆ. ಆದರೆ ಇವರ ಸಂಪರ್ಕದಲ್ಲಿದ್ದವರಿಗೆ ಈಗ ಕೊರೊನಾ ಕಾಣಿಸಿಕೊಳ್ಳುತ್ತಿದೆ.
ಇವರು ವಲಸೆ ಕಾರ್ಮಿಕನ ಪ್ರಥಮ ಸಂಪರ್ಕಿತರಾಗಿದ್ದು, ಇಷ್ಟು ದಿನ ಕ್ವಾರಂಟೈನ್ನಲ್ಲಿದ್ದರು. ಇವರ ವೃತ್ತಿ, ಇವರ ಸಂಪರ್ಕದಲ್ಲಿದ್ದವರ ಬಗ್ಗೆ ಇನ್ನಷ್ಟೇ ಮಾಹಿತಿ ಕಲೆಹಾಕಬೇಕಿದೆ ಎಂದು ಡಾ. ಸುರೇಶ್ ತಿಳಿಸಿದ್ದಾರೆ.