ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೇಸ್ಬುಕ್, ಇನ್ಸ್ಟಾಗ್ರಾಂನಲ್ಲಿ ಲೈವ್ ಮಾಡಿ ಪ್ರಚೋಧಿಸಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಾಕೀರ್ ಹಾಗೂ ಸೈಯದ್ ಸೋಹಿಲ್ ಬಂಧಿತರು.
ಘಟನೆಯ ದಿನ ಈ ಇಬ್ಬರೂ ಆರೋಪಿಗಳು ಇನ್ಸ್ಟಾಗ್ರಾಂನಲ್ಲಿ ಲೈವ್ ಮಾಡಿ, ಎಲ್ಲರೂ ಡಿ.ಜೆ.ಹಳ್ಳಿ ಠಾಣೆಯ ಬಳಿ ಬರುವಂತೆ ಕರೆ ನೀಡಿದ್ದರು. ಠಾಣೆಯ ಬಳಿ ಬರಬೇಡಿ ಎಂದು ಪೊಲೀಸರು ಹೇಳಿದ್ದರೂ ಆರೋಪಿಗಳು ತೋರಿಸಿದ್ದ ಲೈವ್ ವಿಡಿಯೋ ಆಧರಿಸಿ ಜನ ಜಮಾವಣೆ ಆಗಿದ್ದರು.
ಈ ಮಧ್ಯೆ, ಲೈವ್ ಮಾಡಿದ್ದ ಮತ್ತೊಬ್ಬ ಆರೋಪಿ ಮುದಾಸೀರ್ ಅಹಮದ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.