ETV Bharat / state

ವಿಕ್ಟೋರಿಯಾ ಆಸ್ಪತ್ರೆ ಪಾಡು ಯಾರಿಗೂ ಬೇಡ: ಎಮರ್ಜೆನ್ಸಿ ವಾರ್ಡ್ ಫುಲ್- ಒಂದೇ ಬೆಡ್‌ನಲ್ಲಿ ಇಬ್ಬಿಬ್ಬರು ರೋಗಿಗಳು..! - Victoria Hospital latest news

ರಾಜಧಾನಿಯ ಹೆಸರಾಂತ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆಗೆ ಹೊರ ಜಿಲ್ಲೆ, ರಾಜ್ಯದಿಂದಲೂ ರೋಗಿಗಳು ಬರುತ್ತಾರೆ. ಆದರೆ, ಈ ಆಸ್ಪತ್ರೆ ಅವ್ಯವಸ್ಥೆ ಹೇಗಿದೆ ಅಂದರೆ ತುಂಬಿ ತುಳುಕುತ್ತಿರುವ ಐಸಿಯು ವಾರ್ಡ್​ನ ಒಂದೇ ಬೆಡ್‌ನಲ್ಲಿ ಇಬ್ಬಿಬ್ಬರು ರೋಗಿಗಳು ಇದ್ದಾರೆ. ಮತ್ತೊಂದೆಡೆ ಚಿಕಿತ್ಸೆ ಸಿಗದೇ ನರಳಾಟ ಅನುಭವಿಸುತ್ತಿರುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರೋಪಿಸಿದೆ.

ವಿಕ್ಟೋರಿಯಾ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆ
author img

By

Published : Oct 15, 2021, 10:31 PM IST

Updated : Oct 16, 2021, 12:39 PM IST

ಬೆಂಗಳೂರು: ಅನಾರೋಗ್ಯ ಬಂತು ಅಂದರೆ ಸರ್ಕಾರಿ ಆಸ್ಪತ್ರೆಗಳೇ ಬಡವರ ಪಾಲಿಗೆ ಇರುವ ಆಸರೆ. ಆದರೆ, ಆ ಆಸ್ಪತ್ರೆಗಳೇ ರೋಗಿಗಳಿಗೆ ಕಂಟಕವಾಗುತ್ತಿವೆ. ಇದಕ್ಕೆ ಉದಾಹರಣೆಯಾಗಿ ವಿಕ್ಟೋರಿಯಾ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್‌ನಲ್ಲಿ ಶವ ಇರುವ ಬೆಡ್ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ‌ ನೀಡಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ವಿಕ್ಟೋರಿಯಾ ಆಸ್ಪತ್ರೆಯ ಎಮರ್ಜೇನ್ಸಿ ವಾರ್ಡ್​ನಲ್ಲಿ ರೋಗಿಗಳಿಗೆ ಪರದಾಟ

ರಾಜಧಾನಿಯ ಹೆಸರಾಂತ ಆಸ್ಪತ್ರೆಗಳಲ್ಲಿ ಒಂದಾದ ವಿಕ್ಟೋರಿಯಾ ಆಸ್ಪತ್ರೆಗೆ ಹೊರ ಜಿಲ್ಲೆ, ರಾಜ್ಯದಿಂದಲೂ ರೋಗಿಗಳು ಬರುತ್ತಾರೆ. ಆದರೆ, ಈ ಆಸ್ಪತ್ರೆ ಅವ್ಯವಸ್ಥೆ ಹೇಗಿದೆ ಅಂದರೆ ತುಂಬಿ ತುಳುಕುತ್ತಿರುವ ಐಸಿಯು ವಾರ್ಡ್​ನ ಒಂದೇ ಬೆಡ್‌ನಲ್ಲಿ ಇಬ್ಬಿಬ್ಬರು ರೋಗಿಗಳು, ಚಿಕಿತ್ಸೆ ಸಿಗದೆ ನರಳಾಟ ಅನುಭವಿಸುತ್ತಿರುವುದಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರೋಪಿಸಿದೆ.

ರೋಗಿಗಳನ್ನು ಸಾಗಿಸಲು ಸ್ಟ್ರೆಚ್ಚರ್​ ಇಲ್ಲ. ವೀಲ್​ ಚೇರ್​ ಕೂಡಾ ಇಲ್ಲದೇ ಸಂಕಷ್ಟ ಎದುರಿಸುತ್ತಿದ್ದಾರೆ‌.‌ ವಿಕ್ಟೋರಿಯಾದಲ್ಲಿ 80 ಐಸಿಯುಗಳು ಪೂರ್ಣಗೊಂಡಿದ್ದರಿಂದ ಕುಣಿಗಲ್​ನಿಂದ ಬಂದಿದ್ದ ರೋಗಿಯೊಬ್ಬರಿಗೆ ಐಸಿಯು ಬೆಡ್ ಸಿಗದೇ ಪರದಾಡುವ ಪರಿಸ್ಥಿತಿ ಎದುರಾಯ್ತು. ವೈದ್ಯರ ಮತ್ತು ಸಿಬ್ಬಂದಿಯ ಕೊರತೆ ಇರುವುದರಿಂದ ರೋಗಿಗಳು ಮತ್ತು ಕುಟುಂಬಸ್ಥರು ಪರದಾಡಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಗಮನ ಸೆಳೆದಿದೆ.

ಓದಿ: ಅದ್ದೂರಿಯಾಗಿ ಜರುಗಿದ ನಾಡಹಬ್ಬ ದಸರಾ ಜಂಬೂಸವಾರಿ

Last Updated : Oct 16, 2021, 12:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.