ETV Bharat / state

ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನ ಹೆಚ್ಚಳ; ರಾಷ್ಟ್ರೀಯ ಸಮೀಕ್ಷೆಯಲ್ಲಿ ಬಹಿರಂಗ

ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಸಚಿವಾಲಯದಡಿ ಭಾರತೀಯ ಅರಣ್ಯ ಸಮೀಕ್ಷೆ (ಎಎಸ್‌ಐ)ಯು ಸಿದ್ಧಪಡಿಸಿದ ಭಾರತೀಯ ಅರಣ್ಯ ವರದಿ-2021ರಲ್ಲಿ ದೇಶದ 7 ಬೃಹತ್ ನಗರಗಳ ಹಸಿರು ಹೊದಿಕೆಯ ಪ್ರಮಾಣ ಸರ್ವೇ ಮಾಡಲಾಗಿದೆ. ಇದರಲ್ಲಿ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈ ನಗರಗಳಲ್ಲಿ 2011ರಿಂದ 2021ರವರೆಗೆ ಅರಣ್ಯ ಹೊದಿಕೆಯ ಬೆಳವಣಿಗೆ ಬಗ್ಗೆ ಮಾಹಿತಿ ಕಲೆಹಾಕಿದೆ.

increase of tree cutting in the name of Bangalore development

author img

By

Published : Jun 16, 2022, 9:51 PM IST

ಬೆಂಗಳೂರು: ದೇಶದ ಬೃಹತ್ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲಿ 5 ಚದರ ಕಿ.ಮೀ ಅರಣ್ಯದ ಹೊದಿಕೆ ಕಡಿಮೆಯಾಗಿದೆ. ಇದು ಭಾರತದ ಅರಣ್ಯ ವರದಿ 2021ರ ಸಮೀಕ್ಷೆಯಿಂದ ಬಹಿರಂಗವಾಗಿದೆ.

ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆ ಸಚಿವಾಲಯದಡಿ ಭಾರತೀಯ ಅರಣ್ಯ ಸಮೀಕ್ಷೆ (ಎಎಸ್‌ಐ)ಯು ಸಿದ್ಧಪಡಿಸಿದ ಭಾರತೀಯ ಅರಣ್ಯ ವರದಿ-2021ರಲ್ಲಿ ದೇಶದ 7 ಬೃಹತ್ ನಗರಗಳ ಹಸಿರು ಹೊದಿಕೆಯ ಪ್ರಮಾಣ ಸರ್ವೇ ಮಾಡಲಾಗಿದೆ. ಇದರಲ್ಲಿ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತ್ತಾ ಮತ್ತು ಮುಂಬೈ ನಗರಗಳಲ್ಲಿ 2011ರಿಂದ 2021ರವರೆಗೆ ಅರಣ್ಯ ಹೊದಿಕೆಯ ಬೆಳವಣಿಗೆ ಬಗ್ಗೆ ಮಾಹಿತಿ ಕಲೆಹಾಕಿದೆ.

ಇದರಲ್ಲಿ ಬೆಂಗಳೂರಿನಲ್ಲಿ 4.98 ಚದರ ಕಿ.ಮೀ ಅರಣ್ಯಹೊದಿಕೆ ಕಡಿಮೆಯಾಗಿರುವ ಅಂಶವು ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಅಹಮದಾಬಾದ್‌ನಲ್ಲಿ 8.55 ಚದರ ಕಿ.ಮೀ ಹಾಗೂ ಕೋಲ್ಕತ್ತಾದಲ್ಲಿ 0.75 ಚ.ಕಿ.ಮೀ ಅರಣ್ಯ ಹೊದಿಕೆ ನಷ್ಟವಾಗಿರುವುದು ತಿಳಿದುಬಂದಿದೆ.

ದೇಶದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ 2ನೇ ನಗರವಾದ ಹೈದರಾಬಾದ್‌ನಲ್ಲಿ ಕಳೆದ 10 ವರ್ಷಗಳಲ್ಲಿ 48.66 ಚದರ ಕಿ.ಮೀ ಅರಣ್ಯ ಹೊದಿಕೆ ಪ್ರಮಾಣ ಹೆಚ್ಚಳವಾಗಿದೆ. ಅಭಿವೃದ್ಧಿಯ ಜತೆಜತೆಗೆ ಗಿಡಗಳನ್ನು ಬೆಳೆಸುವುದಕ್ಕೂ ಆದ್ಯತೆ ನೀಡಿರುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧ್ಯವಾಗಿದೆ. ಮತ್ತೊಂದೆಡೆ, ಅತ್ಯಧಿಕ ವಾಯುಮಾಲಿನ್ಯ ಸಮಸ್ಯೆಯಿಂದ ಬಳಲುತ್ತಿರುವ ನಗರ ದೆಹಲಿಯಲ್ಲಿಯೂ 19.19 ಚ.ಕಿ.ಮೀ ಹಸಿರು ಹೊದಿಕೆ ಹೆಚ್ಚಳವಾಗಿದೆ. ಮುಂಬೈನಲ್ಲಿ 9 ಚ.ಕಿ.ಮೀ ಮತ್ತು ಚನ್ನೈನಲ್ಲಿ 4.68 ಚ.ಕಿ.ಮೀ ಅರಣ್ಯ ಹೊದಿಕೆ ವಿಸ್ತರಣೆಯಾಗಿದೆ.

ಅರಣ್ಯ ಪ್ರದೇಶದಲ್ಲಿ ಇಳಿಕೆ: ಪ್ರಸ್ತುತ ದೇಶದ ಪ್ರಮುಖ 7 ನಗರಗಳ ಅರಣ್ಯ ವ್ಯಾಪ್ತಿಯ ವ್ಯಾಪ್ತಿಯು 509.72 ಚದರ ಕಿ.ಮೀ. (ಒಟ್ಟು ಭೌಗೋಳಿಕ ಪ್ರದೇಶದಲ್ಲಿ ಶೇ.10.21) ಹರಡಿಕೊಂಡಿದೆ. ಇದರಲ್ಲಿ ದೆಹಲಿಯು ಅತಿ ಹೆಚ್ಚು 194.24 ಚದರ ಕಿ.ಮೀ. ಅರಣ್ಯವನ್ನು ಹೊಂದಿದೆ. ನಂತರದ ಸ್ಥಾನ ಮುಂಬೈ 110.77 ಚದರ ಕಿ.ಮೀ. ಹಾಗೂ ಬೆಂಗಳೂರು 89.02 ಚದರ ಕಿ.ಮೀ. ಹೊಂದಿದೆ. ಆದರೆ, ಬೆಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಒಟ್ಟಾರೆ ನಗರ ವಿಸ್ತೀರ್ಣದ ಶೇ.7.19 ರಷ್ಟು ಇದ್ದ ಅರಣ್ಯ ಪ್ರದೇಶವು 2021ರಲ್ಲಿ ಶೇ.6.81ಕ್ಕೆ ಇಳಿಕೆಯಾಗಿದೆ.

ಇದನ್ನೂ ಓದಿ: ಕುವೆಂಪು ವಿವಿ ಘಟಿಕೋತ್ಸವ: 'ಕನ್ನಡ'ತಿ ದಿವ್ಯಾಗೆ 11 ಸ್ವರ್ಣ ಪದಕ ಪುರಸ್ಕಾರ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.