ETV Bharat / state

ಮುಂದುವರೆದ ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ - bangalore transport employees protest

ಮೆಜೆಸ್ಟಿಕ್​ನ ಬಿಎಂಟಿಸಿ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಯಥಾಸ್ಥಿತಿ ಸಂಚಾರ ಮುಂದುವರೆದಿದ್ದು, ಜತೆಗೆ ಟಿಟಿ, ಆಟೋ, ಟ್ಯಾಕ್ಸಿಗಳು ಕೂಡ ಹೆಚ್ಚಾಗಿ ಕಂಡುಬರುತ್ತಿವೆ.

Travelers facing difficulties due to transport employees problem
ಮುಂದುವರೆದ ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರ ಪರದಾಟ!
author img

By

Published : Apr 15, 2021, 5:28 PM IST

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಇಂದೂ ಕೂಡ ಡಿಪೋಗಳಿಂದ ಸರ್ಕಾರಿ ಬಸ್ಸುಗಳು ಹೊರಬಂದಿಲ್ಲ. ಖಾಸಗಿ ಬಸ್​ಗಳಿಂದಲೇ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ ತುಂಬಿ ಹೋಗಿದೆ.

ಸಾಲು ಸಾಲು ರಜೆ ಹಿನ್ನೆಲೆ ಊರುಗಳಿಗೆ ಹೋಗಿದ್ದವರೀಗ ವಾಪಸ್ ಬಂದಿದ್ದಾರೆ. ಬಸ್ಸುಗಳಿಗಾಗಿ ಪ್ರಯಾಣಿಕರು ಕಾದು ಕುಳಿತಿರುವ ದೃಶ್ಯ ಕಂಡು ಬರುತ್ತಿದೆ. ಅನಿವಾರ್ಯವಾಗಿ ಖಾಸಗಿ ಬಸ್​ಗಳಲ್ಲೇ ಜನರು ಸಂಚಾರ ಮುಂದುವರೆಸಿದ್ದಾರೆ.

ಸಾರಿಗೆ ನೌಕರರ ಮುಷ್ಕರ: ಪ್ರಯಾಣಿಕರು ಹೇಳುವುದೇನು?

ಮೆಜೆಸ್ಟಿಕ್​ನ ಬಿಎಂಟಿಸಿ ನಿಲ್ದಾಣದಲ್ಲಿ ಖಾಸಗಿ ವಾಹನಗಳ ಯಥಾಸ್ಥಿತಿ ಸಂಚಾರ ಮುಂದುವರೆದಿದ್ದು, ಜತೆಗೆ ಟಿಟಿ, ಆಟೋ, ಟ್ಯಾಕ್ಸಿಗಳು ಕೂಡ ಹೆಚ್ಚಾಗಿ ಕಂಡುಬರುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಅಕ್ಕಪಕ್ಕದ ರಾಜ್ಯ ಮತ್ತು ಜಿಲ್ಲೆಗಳಿಂದ ಆಗಮಿಸುತ್ತಿರುವ ಪ್ರಯಾಣಿಕರು ಬಸ್​ಗಳಿಗಾಗಿ ಕಾದು ಕುಳಿತಿದ್ದಾರೆ. ಖಾಸಗಿ ಬಸ್ಸುಗಳು ಎಲ್ಲಾ ಮಾರ್ಗದಲ್ಲಿ ಸಂಚಾರ ಮಾಡುತ್ತಿಲ್ಲದಿರುವುದು ಕೂಡ ಕಾಯುವಿಕೆಗೆ ಒಂದು ಕಾರಣವಾಗಿದೆ.

ಇದನ್ನೂ ಓದಿ: ಸಾರಿಗೆ ಮುಷ್ಕರ: ಸರ್ಕಾರದ ವಿರುದ್ಧ ಇಂದಿನಿಂದ ಮೇಣದ ಬತ್ತಿ ಪ್ರತಿಭಟನೆ

ಪರದಾಡುತ್ತಿರುವ ಕೆಲವು ಪ್ರಯಾಣಿಕರು ಕ್ಯಾಬ್, ಆಟೋ ಮೂಲಕ ತಮ್ಮ ಸ್ಥಳ ತಲುಪುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.