ETV Bharat / state

ಕಾರ್ಗೋ ಸೇವೆಗೆ ಮುಂದಾದ ಸಾರಿಗೆ ನಿಗಮ: ರಸ್ತೆಗಿಳಿಯಲಿವೆ ಕೆಎಸ್ಆರ್​ಟಿಸಿ ಟ್ರಕ್​ಗಳು...!

author img

By ETV Bharat Karnataka Team

Published : Aug 29, 2023, 9:07 PM IST

ಪಾರ್ಸೆಲ್​ಗಳನ್ನು ಟ್ರಕ್​ಗಳಲ್ಲಿ ಸಾಗಾಣಿಕೆ ಮಾಡುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಕೆಎಸ್ಆರ್​​ಟಿಸಿ ಮುಂದಾಗಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಕಾರ್ಗೋ ಸೇವೆಗೆ ಮುಂದಾದ ಸಾರಿಗೆ ನಿಗಮ

ಬೆಂಗಳೂರು : ರಾಜ್ಯದ ರಸ್ತೆ ಸಾರಿಗೆಯ ಜೀವನಾಡಿಯಾಗಿರುವ ಕೆಎಸ್ಆರ್​ಟಿಸಿ ಇದೀಗ ಪ್ರಯಾಣಿಕ ಸಾರಿಗೆಯಿಂದ ಕಾರ್ಗೋ ಸೇವೆಗೂ ಕಾಲಿಡುತ್ತಿದೆ. ಇನ್ನೊಂದು ತಿಂಗಳಿನಲ್ಲಿ ಕೆಎಸ್ಆರ್​ಟಿಸಿ ಬಸ್​ಗಳು ಮಾತ್ರವಲ್ಲ, ಟ್ರಕ್​ಗಳು ಕೂಡ ಸಂಚರಿಸಲಿವೆ. ಇದಕ್ಕಾಗಿ ಪ್ರಾರಂಭಿಕವಾಗಿ 10 ಟ್ರಕ್​ಗಳ ಖರೀದಿ ಮಾಡಲಾಗಿದ್ದು, ಬೇಡಿಕೆಗೆ ತಕ್ಕ ರೀತಿ ಟ್ರಕ್ ಗಳ ಖರೀದಿಗೆ ನಿರ್ಧಾರ ಮಾಡಲಾಗಿದೆ.

ಬಸ್​ಗಳಲ್ಲೇ ಪಾರ್ಸೆಲ್ ಸೇವೆಯನ್ನು ಸಣ್ಣಮಟ್ಟದಲ್ಲಿ ಆರಂಭಿಸಿದ್ದ ಸಾರಿಗೆ ನಿಗಮ ಈಗ ಪ್ರತ್ಯೇಕವಾಗಿಯೇ ಕಾರ್ಗೋ ಸೇವೆ ಆರಂಭ ಮಾಡುತ್ತಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್​ಗಳಲ್ಲಿ ಕೆಲ ವರ್ಷಗಳ ಹಿಂದೆಯೇ ಕಾರ್ಗೊ ಸೇವೆಯನ್ನು ಸಣ್ಣದಾರಿ ಆರಂಭಿಸಲಾಗಿತ್ತು. ಆರಂಭಿಕ ಹಂತವಾಗಿ 109 ಕೇಂದ್ರಗಳಲ್ಲಿ ಈ ಸೇವೆ ಆರಂಭಿಸಿ ಹಂತಹಂತವಾಗಿ ರಾಜ್ಯದ ಎಲ್ಲಾ ಪ್ರಮುಖ ನಿಲ್ದಾಣಗಳಿಗೂ ವಿಸ್ತರಿಸಿತ್ತು. ಈ ಪಾರ್ಸೆಲ್ ಸೇವೆಯನ್ನು ಬಸ್​ಗಳ ಡಿಕ್ಕಿಯಲ್ಲಿ ಲಗ್ಗೇಜ್ ಹಾಕಿಕೊಂಡೇ ಸೇವೆ ಒದಗಿಸಲಾಗುತ್ತಿತ್ತು.

ಮೊದಲ ಪ್ರಯತ್ನವನ್ನು ಟೆಂಡರ್ ನೀಡಿದಾಗ ಕೆಎಸ್ಆರ್​ಟಿಸಿಗೆ 4 ಕೋಟಿ ರೂಪಾಯಿ ಆದಾಯ ಬರುತ್ತಿತ್ತು. ಇದನ್ನು ನೋಡಿದ ಕೆಎಸ್ಆರ್​ಟಿಸಿ ನೇರವಾಗಿ ನಿಗಮದಿಂದಲೇ ಕಾರ್ಗೊ ಸೇವೆ ಆರಂಭಿಸಿತು. ಆದಾಯ 30 ಕೋಟಿಗೆ ತಲುಪಿತು. ಹಾಗಾಗಿ ಈಗ ಅಧಿಕೃತವಾಗಿ ಪ್ರತ್ಯೇಕ ಕಾರ್ಗೋ ಸೇವೆಯನ್ನೇ ಪರಿಚಯಿಸಲು ಸಾರಿಗೆ ನಿಗಮ ಮುಂದಾಗಿದ್ದು, 100 ಕೋಟಿ ರೂ. ಗುರಿ ಹಾಕಿಕೊಂಡಿದೆ.

ವಿಶೇಷತೆಗಳೇನು? : ಹೊಸ ಕಾರ್ಗೊ ಯೋಜನೆಯಡಿ ಕೆಎಸ್ಆರ್​ಟಿಸಿ​ ಹೊಸದಾಗಿ 10 ಟ್ರಕ್​ಗಳನ್ನು ಖರೀದಿ ಮಾಡುತ್ತಿದೆ. 6 ಟನ್ ಸಾಮರ್ಥ್ಯದ ಈ ಟ್ರಕ್​ಗಳ ಮೂಲಕ ಪಾರ್ಸೆಲ್​ಗಳ ಸೇವೆ ಒದಗಿಸಲಿದೆ. ಬಸ್​ಗಳ ಡಿಕ್ಕಿಯಲ್ಲಿ ಹೆಚ್ಚಿನ ಸ್ಥಳಾವಕಾಶ ಇಲ್ಲದೆ, ಪಾರ್ಸೆಲ್ ಸೇವೆ ಒದಗಿಸಲು ಸಮಸ್ಯೆಯಾಗಿತ್ತು. ಹೀಗಾಗಿ ಹೆಚ್ಚಿನ ಪಾರ್ಸೆಲ್ ಇರುವ ಸ್ಥಳ ಹಾಗು ಮಾರ್ಗಕ್ಕೆ ಈ ಟ್ರಕ್​ಗಳನ್ನು ಬಳಕೆ ಮಾಡಿಕೊಂಡು ಪಾರ್ಸೆಲ್ ಸಾಗಾಣಿಕೆ ಮಾಡಲಿದೆ. ಇದು ಸಂಪೂರ್ಣವಾಗಿ ಪ್ರತ್ಯೇಕ ಸೇವೆಯಾಗಿರಲಿದೆ.

ಅಧಿಕ ಭಾರ ಹಾಗು ಅಧಿಕ ಪ್ರಮಾಣದ ಪಾರ್ಸೆಲ್ ಸಾಗಾಣಿಕ ಮಾಡುವ ಮಾರ್ಗ ಗುರುತಿಸಿ ಟ್ರಕ್ ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಿದ್ದಾರೆ. ಸದ್ಯ ಎಲ್ಲಾ ಜಿಲ್ಲಾ ಕೇಂದ್ರವನ್ನು ಈ ಟ್ರಕ್​ಗಳು ತಲುಪಲು ಸಾಧ್ಯವಿಲ್ಲ. ಅಂತಹ ಕಡೆ ಬಸ್​ಗಳನ್ನೇ ಅವಲಂಭಿಸಲಾಗುತ್ತದೆ. ಆದರೆ ಟ್ರಕ್​ಗಳ ಸಂಚಾರದ ಸಾಧಕ-ಬಾಧಕ ನೋಡಿಕೊಂಡು ಟ್ರಕ್​ಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಿದ್ದು, ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಮುಂದಿನ ದಿನಗಳಲ್ಲಿ ಕೆಎಸ್ಆರ್​ಟಿಸಿ ಟ್ರಕ್​ಗಳು ಸಂಚಾರ ಮಾಡಲಿವೆ. ಖಾಸಗಿ ಕಾರ್ಗೊ ಮಾದರಿಯಲ್ಲಿಯೇ ಕೆಎಸ್​ಆರ್​ಟಿಸಿ ಕಾರ್ಗೊ ಸೇವೆ ಆರಂಭಗೊಳ್ಳಲಿದೆ.

ಸಾರಿಗೆ ಸಚಿವರು ಹೇಳಿದ್ದೇನು? : ಈ ಕುರಿತು ಈ ಟಿವಿ ಭಾರತಕ್ಕೆ ಮಾಹಿತಿ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, 10 ಲಾರಿ ಖರೀದಿಸಿ ಕಾರ್ಗೊ ಸೇವೆ ನೀಡಬೇಕು ಎಂದು ಸಾರಿಗೆ ನಿಗಮದ ಆಡಳಿತ ಮಂಡಳಿಯಲ್ಲಿ ಪ್ರಸ್ತಾಪ ಮಾಡಲಾಯಿತು. ಅದಕ್ಕೆ ಅನುಮೋದನೆಯೂ ಆಗಿದೆ. ಇದರಿಂದ 100 ಕೋಟಿ ಆದಾಯ ಬರಬಹುದು ಎನ್ನುವ ಲೆಕ್ಕಾಚಾರ ಇದೆ. ಕೆಎಸ್ಆರ್​ಟಿಸಿ ಯಿಂದಲೇ ನೇರವಾಗಿ ಈ ಟ್ರಕ್​ಗಳ ಖರೀದಿ ಮಾಡಲಾಗುತ್ತದೆ. ಇದರಿಂದಾಗಿ ಬಸ್ ಡಿಕ್ಕಿಯಲ್ಲಿ ಹಾಕಿಕೊಂಡು ಹೋಗುವ ಬದಲು ಟ್ರಕ್​ನಲ್ಲಿ ಹಾಕಿಕೊಂಡು ಹೆಚ್ಚಿನ ಸೇವೆ ನೀಡಲಾಗುತ್ತದೆ. ಎಲ್ಲ ಯೋಜನೆ ಮಾಡಿ ಟ್ರಕ್ ಸಂಚರಿಸುವ ಮಾರ್ಗ ಸಿದ್ಧಪಡಿಸಲಾಗುತ್ತದೆ ಎಂದರು.

ಇದನ್ನೂ ಓದಿ : ಸಾರಿಗೆ ನಿಗಮಗಳಲ್ಲಿ ಇವಿ ದುನಿಯಾ ಆರಂಭ: ಕೆಎಸ್ಆರ್​ಟಿಸಿ, ಬಿಎಂಟಿಸಿ ಬಳಿಕ ವಾಯುವ್ಯ ಸಾರಿಗೆಯಲ್ಲೂ ವಿದ್ಯುತ್ ಚಾಲಿತ ಬಸ್​ಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.