ETV Bharat / state

ಬೆಂಗಳೂರಿಂದ ದೆಹಲಿಗೆ ರೈಲು ಸೇವೆ ಆರಂಭ: ರೈಲು ನಿಲ್ದಾಣದಲ್ಲಿ ಭದ್ರತೆ ಹೇಗಿದೆ ಗೊತ್ತೇ? - ರೈಲು ಸೇವೆ ಪುನರ್​ ಆರಂಭ

ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಿಂದ ವಿಶೇಷ ರೈಲು ದೆಹಲಿಗೆ ಹೊರಡಲಿದ್ದು, ರೈಲು ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

train-from-bengaluru-to-delhi
ಬೆಂಗಳೂರು ಟು ದೆಹಲಿ ರೈಲು ಆರಂಭ.
author img

By

Published : May 12, 2020, 8:07 PM IST

ಬೆಂಗಳೂರು: ಇಂದು ಬೆಂಗಳೂರಿನಿಂದ ದೆಹಲಿಗೆ ವಿಶೇಷ ರೈಲು ಸಂಚರಿಸಲಿದ್ದು, ರಾತ್ರಿ ‌8.30ಕ್ಕೆ ಬೆಂಗಳೂರಿನ ಕೆಎಸ್ಆರ್ ರೈಲು ನಿಲ್ದಾಣದಿಂದ ರೈಲು ಹೊರಡಲಿದೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರೈಲ್ವೇ ನಿಲ್ದಾಣದ ಪರಿಸ್ಥಿತಿ ವಿವರಿಸುತ್ತಿರುವ ಈಟಿವಿ ಭಾರತ ಪ್ರತಿನಿಧಿ

ಲಾಕ್​ಡೌನ್​ ಜಾರಿ ನಂತರ ಬಂದ್​ ಆಗಿದ್ದ ರೈಲು ಸೇವೆ ಇಂದಿನಿಂದ ಪುನರ್​ ಆರಂಭವಾಗಲಿದೆ. ಇನ್ನು ನಿನ್ನೆಯಿಂದ IRCTC ಮೂಲಕ ಆನ್ಲೈನ್ ಬುಕ್ಕಿಂಗ್ ಆರಂಭಿಸಿದ್ದು, ಟಿಕೆಟ್ ಬುಕ್ಕಿಂಗ್ ಮಾಡಿರುವವರು ತಂಡೋಪತಂಡವಾಗಿ ರೈಲ್ವೆ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಪ್ರತಿಯೊಬ್ಬರ ಐಡಿ‌ ಕಾರ್ಡ್ ತಪಾಸಣೆ ಮಾಡಿ ಸಾಮಾಜಿಕ ಅಂತರದಲ್ಲಿ‌ ಮಾಸ್ಕ್ ಧರಿಸಿಯೇ ಪ್ರತಿಯೊಬ್ಬರನ್ನು ರೈಲ್ವೆ ನಿಲ್ದಾಣದ ಒಳಗಡೆ ಬಿಡ್ತಿದ್ದಾರೆ.

ಸುಮಾರು 1,068 ಟಿಕೆಟ್ ಗಳು ಈಗಾಗಲೇ ಬುಕ್ ಆಗಿದ್ದು ಅವರಿಗೆ ಮಾತ್ರ ನಿಲ್ದಾಣದ ಒಳಗಡೆ ಅವಕಾಶ ಇದೆ. ಒಳಬಂದ ಬಳಿಕ ಮೆಡಿಕಲ್ ಚೆಕಪ್ ಮಾಡಿ ರೈಲು ಹತ್ತಲು ಅವಕಾಶ ನೀಡಲಾಗುತ್ತೆ. ಸದ್ಯ ನೂರಕ್ಕೂ ಅಧಿಕ ಪೊಲೀಸರಿಂದ ಈಗಾಗಲೇ ನಿಲ್ದಾಣದಲ್ಲಿ ಸೂಕ್ತ ಭದ್ರತೆ ಏರ್ಪಡಿಸಲಾಗಿದೆ. ಇನ್ನು ಪ್ರಯಾಣಿಕರಿಗೆ ಹಲವು ನಿಬಂಧನೆಗಳಿದ್ದು, ರೈಲು ಸಂಚಾರ ಆರಂಭಕ್ಕೂ‌ 90 ನಿಮಿಷ ಮುನ್ನ ನಿಲ್ದಾಣದಲ್ಲಿರಬೇಕು. ಬೇಕಾದ ಆಹಾರ, ಹೊದಿಕೆ ತಾವೇ ತರಬೇಕು. ತಪಾಸಣೆ ವೇಳೆ ರೋಗ ಲಕ್ಷಣಗಳಿದ್ದರೆ ಪ್ರಯಾಣಕ್ಕೆ ಅವಕಾಶ ನೀಡೊದಿಲ್ಲ.. 8.30ಕ್ಕೆ ಬೆಂಗಳೂರಿನಿಂದ ಹೊರಡಲಿರೋ ಈ ರೈಲು ಅನಂತಪುರ, ಧರ್ಮಾವರಂ, ಗುಂತಕಲ್, ಸಿಕಂದ್ರಾಬಾದ್, ನಾಗಪುರ್, ಇಟಾರ್ಸಿ, ಭೂಪಾಲ್, ಝಾನ್ಸಿ, ಗ್ವಾಲಿಯರ್, ಆಗ್ರಾ ಬಳಿಕ ದೆಹಲಿ ತಲುಪಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.