ETV Bharat / state

ಟ್ರಾಫಿಕ್ ಪೊಲೀಸರಿಗೂ ಟಾರ್ಗೆಟ್ ಫಿಕ್ಸ್​: ಸಂಚಾರಿ ನಿಯಮ ಉಲ್ಲಂಘಿಸಿದರೆ ಕೇಸ್​ ಗ್ಯಾರಂಟಿ - ಸಂಚಾರಿ ನಿಯಮ ಉಲ್ಲಂಘನೆ

ಬಹುತೇಕ ವಾಹನ ಸವಾರರು ಒನ್ ವೇನಲ್ಲಿ ಓಡಾಡುವ ವಿಚಾರ ಬಯಲಾಗಿದೆ. ಹೀಗಾಗಿ ಒನ್ ವೇನಲ್ಲಿ ಓಡಾಡುವವರಿಗೆ 500 ರೂ. ಫೈನ್ ಹಾಕಲು ‌ಮುಂದಾಗಿದ್ದಾರೆ.‌

Bangalore
ಟ್ರಾಫಿಕ್ ಪೊಲೀಸ್
author img

By

Published : Aug 27, 2020, 4:21 PM IST

ಬೆಂಗಳೂರು: ಲಾಕ್​ಡೌನ್ ರಿಲೀಫ್ ಆದ ಬಳಿಕ ನಗರದಲ್ಲಿ ಎಂದಿನಂತೆ ವಾಹನಗಳ ದಟ್ಟಣೆ ಶುರುವಾಗಿದೆ. ಸದ್ಯ ಜನರು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದಾರೆ‌. ಆದರೆ, ಕೊರೊನಾ ಭಯಕ್ಕೆ ಮಾಸ್ಕ್ ಹಾಕೋರು, ಸಂಚಾರದ ನಿಯಮಗಳನ್ನ ಮಾತ್ರ ಮರೆತಿದ್ದಾರೆ.

ಕೆಲವರು ಹೆಲ್ಮೆಟ್ ಧರಿಸದೇ ಫೇಸ್​ಶೀಲ್ಡ್ ಹಾಕೋದು ಅಥವಾ ಸಿಗ್ನಲ್​ ಜಂಪ್ ಮಾಡೋದು ಹೀಗೆ ಬೇರೆ ನಿಯಮ ಉಲ್ಲಂಘನೆ ಮಾಡ್ತಿರುವ ವಿಚಾರ ಪ್ರತಿ ದಿನ ಬೆಳಕಿಗೆ ಬರ್ತಿದೆ. ‌ಇತ್ತಕಡೆ ಕೊರೊ‌ನಾ ಸೋಂಕಿನಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬಹಳ ನಷ್ಟ ಉಂಟಾಗಿದೆ. ಹಾಗಾಗಿ ಸದ್ಯ ಟ್ರಾಫಿಕ್ ಇಲಾಖೆ ತನ್ನ ಸಿಬ್ಬಂದಿಗೆ ಬಹಳ ಜವಾಬ್ದಾರಿಯನ್ನ ನೀಡಿದೆ. ಇಷ್ಟು ದಿವಸ ಇಲ್ಲದ ಟ್ರಾಫಿಕ್ ಪೊಲೀಸರು ಪ್ರತಿ ಸಿಗ್ನಲ್ ಬಳಿ, ರಸ್ತೆಗಳ ಬದಿ, ಜೀಬ್ರಾ ಕ್ರಾಸ್​ಗಳಲ್ಲಿ, ರಸ್ತೆಯ ತುದಿಯಲ್ಲಿ, ಫುಟ್​​ಪಾತಲ್ಲಿ ಹಾಗೆ ಸಂಚಾರಿ ಸಿಸಿಟಿವಿ ಮಾನಿಟರಿಂಗ್ ಮಾಡುವುದರಲ್ಲಿ ನಿರತರಾಗಿದ್ದಾರೆ.

traffic rules in Bangalore
ಬಸ್ತಿಯಲ್ಲಿರುವ ಟ್ರಾಫಿಕ್​ ಪೊಲೀಸರು

ಹಿರಿಯಾಧಿಕಾರಿಗಳ ಸೂಚನೆಯಂತೆ ಪ್ರತಿ ಸಿಬ್ಬಂದಿ ಇಷ್ಟು ಅಂತ ವಾಹನ ಸವಾರರ ಮೇಲೆ ದಂಡ ವಿಧಿಸಬೇಕೆಂಬ ನಿಯಮ ಕೂಡ ಜಾರಿ ಮಾಡಿದ್ದರಂತೆ. ಹೀಗಾಗಿ ಪ್ರತಿ ಸಿಬ್ಬಂದಿ ರಸ್ತೆ ಬದಿಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮ ವಹಿಸಿಕೊಂಡು ಸಂಚಾರ ಉಲ್ಲಂಘನೆ ಮಾಡುವವರಿಗೆ ದಂಡ ವಿಧಿಸುತ್ತಿದ್ದಾರೆ.

‌ಒನ್ ವೇನಲ್ಲಿ ಓಡಾಡುವವರ ಮೇಲೆಯೂ ಕಣ್ಣು:‌

ಸದ್ಯ ಬಹುತೇಕ ವಾಹನ ಸವಾರರು ಒನ್ ವೇನಲ್ಲಿ ಓಡಾಡುವ ವಿಚಾರ ಬಯಲಾಗಿದೆ. ಹೀಗಾಗಿ ಒನ್ ವೇನಲ್ಲಿ ಓಡಾಡುವವರಿಗೆ 500 ರೂ. ಫೈನ್ ಹಾಕಲು ಟ್ರಾಫಿಕ್​ ಪೊಲೀಸರು ‌ಮುಂದಾಗಿದ್ದಾರೆ.‌ ಹಾಗೆ ಎಲ್ಲೆಡೆ ಬೊರ್ಡ್ ಕೂಡ ಅಳವಡಿಕೆ ಮಾಡಿದ್ದಾರೆ. ಮಾರ್ಚ್​ನಿಂದ ಇಲ್ಲಿಯವರೆಗೆ 17,49,610 ಕೇಸ್ ದಾಖಲಿಸಿ 96,26,74,100ರೂ. ಒಟ್ಟು ದಂಡ ಹಾಕಿದ್ದಾರೆ.

ಸಿಗ್ನಲ್ ಜಂಪಿಂಗ್ 32,677, ಏಕಮುಖ ಸಂಚಾರ 17,254, ಮೊಬೈಲ್ ಬಳಕೆ 14,011, ಜೀಬ್ರಾ ಕ್ರಾಸ್ ಮೇಲೆ ವಾಹನ ನಿಲುಗಡೆ 10,723, ನೋ ಪಾರ್ಕಿಂಗ್ 7225, ಅತಿವೇಗ ಚಾಲನೆ 609, ತ್ರಿಬಲ್ ರೈಡಿಂಗ್ 2,624, ಪಾದಚಾರಿ ರಸ್ತೆಯಲ್ಲಿ ವಾಹನ ಚಾಲನೆ 386, ನೋಂದಣಿ ಫಲಕ ಇಲ್ಲದಿರುವುದು12,289, ಹೆಲ್ಮೆಟ್ ಧರಿಸದೇ ಸಂಚಾರ ಮಾಡಿರುವುದು 74,46,673 , ಹಿಂಬದಿ ಸವಾರ ಹೆಲ್ಮೆಟ್ ಧರಿಸದೇ ಇರುವುದು 42,05,788 ಕೇಸ್​ಗಳು ಸೇರಿದಂತೆ ಹಲವು ನಿಯಮ ಉಲ್ಲಂಘನೆ ಮಾಡಿದವರ ಮೇಲೆ ದಂಡ ವಿಧಿಸಿ ಮತ್ತಷ್ಟು ದಂಡ ವಸೂಲಿಗೆ ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.