ETV Bharat / state

ಹಾಫ್ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರನಿಂದ ಹಣ ವಸೂಲಿ ವಿಡಿಯೋ ವೈರಲ್: ಕಾನ್ಸ್​ಟೇಬಲ್​​ ಅಮಾನತು - ಟ್ರಾಫಿಕ್ ಕಾನ್ಸ್​ಟೇಬಲ್​​ ಅಮಾನತು

ಹಾಫ್ ಹೆಲ್ಮೆಟ್ ಹಾಕಬಾರದು ಅಂತಾ ನಿಯಮವಿದೆ ಆದರೂ ಬೈಕ್​ ಸವಾರರು ಹಾಫ್ ಹೆಲ್ಮೆಟ್ ಹಾಕುತ್ತಿದ್ದಾರೆ. ಅರ್ಧ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರನಿಂದ ಕಾನ್ಸ್​ಟೇಬಲ್​ ಒಬ್ಬರು​ 100 ರೂ. ಹಣ ವಸೂಲಿ ಮಾಡಿದ್ದ ವಿಡಿಯೋ ವೈರಲ್​ ಆಗಿದ್ದು, ಹಣ ಪಡೆದ ಟ್ರಾಫಿಕ್ ಕಾನ್ಸ್​ಟೇಬಲ್​​ ಅನ್ನು ಸಸ್ಪೆಂಡ್​ ಮಾಡಿ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.

ವೈರಲ್ ವಿಡಿಯೋ
ವೈರಲ್ ವಿಡಿಯೋ
author img

By

Published : Feb 5, 2022, 12:36 PM IST

ಬೆಂಗಳೂರು: ಹಾಫ್ ಹೆಲ್ಮೆಟ್ ಹಾಕಿದ್ದ ಬೈಕ್ ಸವಾರನಿಂದ ಟ್ರಾಫಿಕ್ ಕಾನ್ಸ್​ಟೇಬಲ್​​ ಲಂಚ ಪಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಆರೋಪಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಹೆಚ್.ಎ.ಎಲ್ ಠಾಣೆಯ ಟ್ರಾಫಿಕ್ ಕಾನ್ಸ್​ಟೇಬಲ್​​ ಪವನ್ ದ್ಯಾಮಣ್ಣ ಎಂಬುವರು ಹಾಫ್ ಹೆಲ್ಮೆಟ್ ಹಾಕಿಕೊಂಡು ಬಂದ ಬೈಕ್​ ಸವಾರನಿಂದ 100 ರೂ. ಲಂಚ ಪಡೆದು ಬಿಟ್ಟು ಕಳುಹಿಸಿದ ವಿಡಿಯೋ ವೈರಲ್ ಆಗಿತ್ತು. ಪ್ರಾಥಮಿಕ ತನಿಖೆಯಲ್ಲಿ ಆರೋಪ ನಿಜ ಎಂದು ಕಂಡು ಬಂದಿರುವುದರಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.

ವೈರಲ್ ವಿಡಿಯೋ

ಓದಿ: ರಾಹುಲ್ ಗಾಂಧಿ ಪ್ರವಾಸಿ ರಾಜಕಾರಣಿ, ಚುನಾವಣೆಗೂ ಮುನ್ನವೇ ಗೋವಾಕ್ಕೆ ಬರ್ತಾರೆ: ಸಿ.ಟಿ.ರವಿ

ಸಿಲಿಕಾನ್ ಸಿಟಿ ಪೊಲೀಸರು ಹಾಫ್ ಹೆಲ್ಮೆಟ್ ಧರಿಸುವುದನ್ನ ನಿಷೇಧಿಸಿ ಕಠಿಣ ನಿಯಮ ಜಾರಿಗೆ ತರಲು ಹೊರಟಿದ್ದಾರೆ. ಆದರೆ ದ್ವಿಚಕ್ರ ವಾಹನ ಸವಾರರು ಸರಿಯಾಗಿ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.