ಆನೇಕಲ್ (ಬೆಂಗಳೂರು) : ರೈತರ ಹೋರಾಟ ಬೆಂಬಲಿಸಿ ನಡೆಯುತ್ತಿರುವ ಟ್ರ್ಯಾಕ್ಟರ್ ಪರೇಡ್ಗೆ ತಾಲೂಕಿನಿಂದಲೂ ಟ್ರ್ಯಾಕ್ಟರ್ಗಳು ಹೊರಟಿದ್ದವು. ಈ ವೇಳೆ ಪೊಲೀಸರು, ಟ್ರ್ಯಾಕ್ಟರ್ಗಳನ್ನು ತಡೆದು ವಾಪಸ್ ಕಳಿಸುವ ಪ್ರಯತ್ನ ಮಾಡಿದರು. ಆದರೂ, ರೈತರು ಆನೇಕಲ್ನಿಂದ ನೆಲಮಂಗಲದತ್ತ ಜಾಥಾ ಮುಂದುವರಿಸಿದರು.
ಇದನ್ನೂ ಓದಿ:ಟ್ರ್ಯಾಕ್ಟರ್ ಪರೇಡ್ಗೆ ಬಿಡದ ಪೊಲೀಸರೊಂದಿಗೆ ಮಂಡ್ಯ ರೈತರ ವಾಗ್ವಾದ
ನಿನ್ನೆ ರಾತ್ರಿಯೇ ರೈತರನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಟ್ರ್ಯಾಕ್ಟರ್ ಪರೇಡ್ ನಡೆಸಿದರೆ ಲೈಸೆನ್ಸ್ ವಾಪಸ್ ಪಡೆಯಲಾಗುತ್ತದೆ ಎಂದು ಬೆದರಿಕೆ ಹಾಕಿರುವುದಾಗಿ ರೈತರೊಬ್ಬರು ಆರೋಪಿಸಿದ್ದಾರೆ.
ಏನೇ ಆದರೂ, ನಾವು ಹೋರಾಟ ಕೈ ಬಿಡಲ್ಲ. ನಮಗೆ ಬೇಡವಾದ ಕಾಯ್ದೆಗಳು ಈ ಸರ್ಕಾರಕ್ಕೆ ಯಾಕೆ? ಈಗಾಗಲೇ ನಡೆಯುತ್ತಿರುವ ಅನ್ನದಾತರ ಹೋರಾಟ ಸರ್ಕಾರದ ಕಣ್ಣಿಗೆ ಕಾಣ್ತಿಲ್ವ ಎಂದು ಪ್ರಶ್ನಿಸಿದರು.