ETV Bharat / state

ನಾಳೆ ಸಾಮೂಹಿಕ ಗಣೇಶ ವಿಸರ್ಜನೆ: ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರಿಂದ‌ ಪಥ ಸಂಚಲನ - ಈಟಿವಿ ಭಾರತ ಕನ್ನಡ

ಬೆಂಗಳೂರಿನಲ್ಲಿ ನಾಳೆ ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನೆಲೆ ಪೊಲೀಸರು ಇಂದು ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಸೂಕ್ಷ್ಮ ಮತ್ತು ಅತೀಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದರು.

Kn_bng_05_ganesha_v
ಪೊಲೀಸರ ಪಥ ಸಂಚಲನ
author img

By

Published : Sep 3, 2022, 9:03 PM IST

ಬೆಂಗಳೂರು: ನಗರ ಪೂರ್ವ ವಿಭಾಗ ಹಾಗೂ ಈಶಾನ್ಯ ವಿಭಾಗಗಳಲ್ಲಿ ನಾಳೆ ಸಾಮೂಹಿಕ ಗಣೇಶ ವಿಸರ್ಜನೆ ಮೆರವಣಿಗೆ ಹಿನ್ನೆಲೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಕೇಂದ್ರಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು.

ಕೆಎಸ್ಆರ್​ಪಿ, ಆಎಎಫ್ ಹಾಗೂ ಸಿಎಆರ್ ಪಡೆ ಜೊತೆ ನಗರ ಪೊಲೀಸರು ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮತೀಯ ಸೂಕ್ಷ್ಮ ಪ್ರದೇಶಗಳಲ್ಲಿ ಪಥ ಸಂಚಲನ ನಡೆಸಿದರು.‌ ಸಾಮೂಹಿಕ ಗಣೇಶ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಲವು ಬಿಗಿ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಮೆರವಣಿಗೆ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ‌‌ ಪೊಲೀಸರನ್ನು ನಿಯೋಜಿಸಲಾಗಿದೆ.

ಹೆಣ್ಣೂರು, ರಾಮಮೂರ್ತಿನಗರ, ಧಣಿಸಂದ್ರ, ಭಾರತೀನಗರ, ಪುಲಕೇಶಿನಗರ, ನಾಗವಾರ, ಗೋವಿಂದಪುರ, ಅಮೃತಹಳ್ಳಿ ಸೇರಿದಂತೆ ನಾನಾ ಭಾಗಗಳಿಂದ ನೂರಾರು ಗಣೇಶಮೂರ್ತಿಗಳನ್ನು ಹಲಸೂರು ಕೆರೆಗಳಲ್ಲಿ ಏಕಕಾಲದಲ್ಲಿ ಸಾಮೂಹಿಕ ವಿಸರ್ಜನೆ ನಡೆಯಲಿದೆ. ಮತೀಯ ಪ್ರದೇಶಗಳಲ್ಲಿ ಮೆರವಣಿಗೆ ಸಾಗಲಿದ್ದು‌‌ ಒಂದು ಲಕ್ಷಕ್ಕೂ ಹೆಚ್ಚು ಜನರು ಜಮಾವಣೆಗೊಳಲಿದ್ದಾರೆ. ಮಂಜಾಗ್ರತವಾಗಿ ಆಯಾ ಜಾಗಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.

ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಡ್ರೋನ್ ಕ್ಯಾಮರ ಕಣ್ಗಾಗವಲಿರಲಿದೆ. 250 ಬಾಡಿವೋರ್ನ್ ಕ್ಯಾಮರ ಸಹ ಪೊಲೀಸರಿಗೆ ನೀಡಲಾಗುತ್ತಿದೆ‌. ನಾಳೆ ಬೆಳಗ್ಗೆ 6 ಗಂಟೆಯಿಂದ ನಾಡಿದ್ದು ಬೆಳಗ್ಗೆ 6ರವರೆಗೆ ಹೆಣ್ಣೂರು, ರಾಮಮೂರ್ತಿನಗರ, ಡಿ.ಜೆ.ಹಳ್ಳಿ,‌ ಕೆ.ಜಿ ಹಳ್ಳಿ ಸೇರಿದಂತೆ ಎಂಟು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮದ್ಯ ನಿಷೇಧಿಸಿ ಆದೇಶ ಹೊರಡಿಸಿರುವುದಾಗಿ ಪೂರ್ವ ವಿಭಾಗದ ಡಿಸಿಪಿ‌ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ.. ಸಿ ಟಿ ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.