ETV Bharat / state

ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ: ಸದನದಲ್ಲಿ ಪಾಲ್ಗೊಳ್ಳಲು ಶಾಸಕರಿಗೆ "ವಿಪ್" ಜಾರಿ

ವಿಧಾನಸಭೆಯ ಆರನೇ ಅಧಿವೇಶನದ ಪ್ರಯುಕ್ತ ವಿಧಾನ ಮಂಡಲದಲ್ಲಿ ಚರ್ಚಿಸಬಹುದಾದ ವಿಷಯಗಳ ಕುರಿತಂತೆ ಪರಾಮರ್ಶಿಸಲು ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

tomorrow-congress-legislative-assembly-meeting
ಕಾಂಗ್ರೆಸ್ ಶಾಸಕಾಂಗ ಸಭೆ
author img

By

Published : Mar 2, 2020, 7:49 PM IST

Updated : Mar 2, 2020, 7:58 PM IST

ಬೆಂಗಳೂರು : ವಿಧಾನಸಭೆಯ ಆರನೇ ಅಧಿವೇಶನದ ಪ್ರಯುಕ್ತ ವಿಧಾನ ಮಂಡಲದಲ್ಲಿ ಚರ್ಚಿಸಬಹುದಾದ ವಿಷಯಗಳ ಕುರಿತಂತೆ ಪರಾಮರ್ಶಿಸಲು ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ವಿಧಾನಸೌಧ ಮೊದಲನೇ ಮಹಡಿಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಸಿಎಲ್​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ನಾಯಕರು ಉಪಸ್ಥಿತರಿರಲಿದ್ದಾರೆ.

tomorrow-congress-legislative-assembly-meeting
ಕಾಂಗ್ರೆಸ್ ಶಾಸಕಾಂಗ ಸಭೆ

ಬೆಳಗ್ಗೆ 9:30 ಕ್ಕೆ ಸಭೆ ಆರಂಭವಾಗಲಿದ್ದು, ಈ ಸಭೆಗೆ ಎಲ್ಲಾ ಶಾಸಕರು ಸಭೆಗೆ ತಪ್ಪದೆ ಹಾಜರಾಗಿ ತಮ್ಮ ಸಲಹೆಗಳನ್ನು ನೀಡಬೇಕೆಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಪ್ ಜಾರಿ

ಶಾಸಕಾಂಗ ಸಭೆ ನಂತರ ಭಾಗವಹಿಸುವ ವಿಧಾನಸಭೆ ಕಲಾಪದಲ್ಲಿ ಹಾಜರಿದ್ದು, ಚರ್ಚೆಯಲ್ಲಿ ಭಾಗವಹಿಸಲು ಪಕ್ಷದಿಂದ “ವಿಪ್” ಜಾರಿಗೊಳಿಸಲಾಗಿದೆ. ಕಲಾಪಗಳಲ್ಲಿ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ. ವಿಪ್ ಉಲ್ಲಂಘನೆ ಮಾಡದೇ ಪ್ರತಿಯೊಬ್ಬ ಶಾಸಕರು ಪಾಲ್ಗೊಳಬೇಕೆಂದು ಸೂಚಿಸಲಾಗಿದೆ.

Last Updated : Mar 2, 2020, 7:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.