ETV Bharat / state

ಮೊದಲ ಹಂತದ ಗ್ರಾ.ಪಂ. ಚುನಾವಣೆಗೆ ಮತದಾನ ಆರಂಭ : ಕಣದಲ್ಲಿ 1,17,383 ಅಭ್ಯರ್ಥಿಗಳು - ಮತದಾನ 2020

ಇಂದು ಗ್ರಾಮ ಪಂಚಾಯಿತಿಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದ್ದು, 2,930 ಗ್ರಾ.ಪಂ.ಗಳಿಗೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ 1,17,383 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

Today first phase of voting for grama panchayat
ಗ್ರಾಮ ಪಂಚಾಯತಿಗೆ ಮೊದಲ ಹಂತದ ಚುನಾವಣೆ
author img

By

Published : Dec 22, 2020, 4:43 AM IST

Updated : Dec 22, 2020, 7:06 AM IST

ಬೆಂಗಳೂರು: ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ಇಂದು ಮತದಾನ ನಡೆಯಲಿದ್ದು, ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

Today first phase of voting for grama panchayat
ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆ

ಒಟ್ಟು 5,762 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿದ್ದು, ಮೊದಲ ಹಂತದಲ್ಲಿ 2,930 ಗ್ರಾ.ಪಂ.ಗಳಿಗೆ ಬೆಳಗ್ಗೆ 7ರಿಂದ ಮತದಾನ ಆರಂಭವಾಗಿದ್ದು, ಸಂಜೆ 5ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗೂ ಎರಡನೇ ಹಂತದ ಚುನಾವಣೆ 2,832 ಗ್ರಾಮ ಪಂಚಾಯಿತಿಗಳಿಗೆ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಗ್ರಾಮ ಪಂಚಾಯತಿ ಮೊದಲ ಹಂತದ ಚುನಾವಣೆ

ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಚುನಾವಣೆ ನಡೆಯಲಿದೆ. ಬೀದರ್ ಜಿಲ್ಲೆ ಹೊರತುಪಡಿಸಿ ಉಳಿದೆಡೆ ಬ್ಯಾಲೆಟ್​​ ಪೇಪರ್​ ಮೂಲಕ ಚುನಾವಣೆ ನಡೆಸಲಾಗುತ್ತಿದೆ. ಮೊದಲ ಹಂತದ ಚುನಾವಣೆಯಲ್ಲಿ 1,17,383 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ವಿವರಗಳು :

ಮೊದಲ ಹಂತದಲ್ಲಿ 113 ತಾಲೂಕುಗಳ 2,930 ಗ್ರಾಮ ಪಂಚಾಯಿತಿಗಳು, ಎರಡನೇ ಹಂತದಲ್ಲಿ 113 ತಾಲೂಕುಗಳ 2,832 ಗ್ರಾಮ ಪಂಚಾಯಿತಿಗಳಿಗೆ ಮತದಾನ ನಡೆಯಲಿದೆ. 45,128 ಮತಗಟ್ಟೆಗಳಲ್ಲಿ 2,70,768 ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. 5,847 ಚುನಾವಣಾಧಿಕಾರಿಗಳು, 6,085 ಸಹಾಯಕ ಚುನಾವಣಾಧಿಕಾರಿಗಳು, 44,128 ಮತಗಟ್ಟೆಗಳಿಗೆ 2,70,768 ಮತಗಟ್ಟೆ ಅಧಿಕಾರಿಗಳನ್ನು ನೇಮಕಗೊಳಿಸಲಾಗಿದೆ.

ಒಟ್ಟು 2,97,15,048 ಮತದಾರರಿದ್ದಾರೆ. ಡಿಸೆಂಬರ್ 22(ಇಂದು) ಮತ್ತು 27 ರಂದು ಗ್ರಾ.ಪಂ. ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಹೊರಬೀಳಲಿದೆ.

Last Updated : Dec 22, 2020, 7:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.