ETV Bharat / state

ಕೊರೊನಾ ಲಾಕ್​ಡೌನ್​ ಕುರಿತು ಇಂದಿನ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ! - ಕೊರೊನಾ ವೈರಸ್ ನಿಯಂತ್ರಣ ಕುರಿತ ಕ್ರಮಗಳು

ಕೊರೊನಾ ವೈರಸ್ ನಿಯಂತ್ರಣ ಕುರಿತ ಕ್ರಮಗಳು, ರಾಜ್ಯದಲ್ಲಿರುವ ಪರಿಸ್ಥಿತಿ, ಪ್ರಕರಣಗಳ ಸಂಖ್ಯೆ ಮತ್ತಿತರ ಮಾಹಿತಿ ನೀಡಿ ಲಾಕ್‌ ಡೌನ್‌ ಮುಂದುವರಿಸಬೇಕೆ ಅಥವಾ ಸಡಿಲಿಸಬೇಕೆ ಎಂಬ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ.

ಕೊರೊನಾ ಲಾಕ್​ಡೌನ ಕುರಿತು ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ

author img

By

Published : Apr 9, 2020, 8:52 AM IST

ಬೆಂಗಳೂರು: ಕೊರೊನಾ ಸೋಂಕು ತಡೆಯಲು ಕೈಗೊಳ್ಳಬೇಕಾದ ಕ್ರಮ ಹಾಗೂ ಲಾಕ್‌ ಡೌನ್‌ ಅವಧಿ ಏಪ್ರಿಲ್ 14 ರಂದು ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಬಿಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕರೆದಿರುವ ತುರ್ತು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕೊರೊನಾ ವೈರಸ್ ನಿಯಂತ್ರಣ ಕುರಿತ ಕ್ರಮಗಳು, ರಾಜ್ಯದಲ್ಲಿರುವ ಪರಿಸ್ಥಿತಿ, ಪ್ರಕರಣಗಳ ಸಂಖ್ಯೆ ಮತ್ತಿತರ ಮಾಹಿತಿ ನೀಡಿ ಲಾಕ್‌ ಡೌನ್‌ ಮುಂದುವರಿಸಬೇಕೆ ಅಥವಾ ಸಡಿಲಿಸಬೇಕೆ ಎಂಬುದರ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ. ಜೊತೆಗೆ ಶಾಸಕರ ವೇತನ ಕಡಿತ ಹಾಗೂ ಮತ್ತಿತರ ವಿಚಾರಗಳ ಕುರಿತು ಇಂದಿನ ಸಂಪುಟ ಸಭೆ ಚರ್ಚೆಯಾಗಲಿದೆ.

ಸಂಸದರ ಒಂದು ವರ್ಷದ ವೇತನ ಶೇ.30 ಮತ್ತು ಎರಡು ವರ್ಷಗಳ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಕಡಿತ ಮಾದರಿಯಲ್ಲಿ ರಾಜ್ಯದಲ್ಲೂ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರ ವೇತನ ಕಡಿತ ಮಾಡಬಹುದಾ ಎಂಬುದರ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಏ. 14 ರ ನಂತರ ಮದ್ಯ ಸರಬರಾಜು ಮಾಡಬೇಕೆ ಅಥವಾ ನಿಷೇಧ ಮುಂದುವರಿಸಬೇಕೆ ಎಂಬುದರ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ, ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳು ಹೊರಬೀಳುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.