ETV Bharat / state

ಇಂದು ಶಾಸಕರೊಂದಿಗೆ ಅರುಣ್ ಸಿಂಗ್ ಒನ್ ಟು ಒನ್ ಮೀಟಿಂಗ್ - ಶಾಸಕರೊಂದಿಗೆ ಅರುಣ್ ಸಿಂಗ್ ಸಭೆ,

ಬೆಂಗಳೂರಿನಲ್ಲಿ ಇಂದು ಶಾಸಕರೊಂದಿಗೆ ಅರುಣ್ ಸಿಂಗ್ ಒನ್ ಟು ಒನ್ ಮೀಟಿಂಗ್ ನಡೆಸಲಿದ್ದಾರೆ.

Arun singh meeting, Arun singh meeting held with MLAs, Arun singh meeting held with MLAs in Bangalore, ಶಾಸಕರೊಂದಿಗೆ ಅರುಣ್ ಸಿಂಗ್ ಸಭೆ, ಬೆಂಗಳೂರಿನಲ್ಲಿ ಶಾಸಕರೊಂದಿಗೆ ಅರುಣ್ ಸಿಂಗ್ ಸಭೆ, ಶಾಸಕರೊಂದಿಗೆ ಅರುಣ್ ಸಿಂಗ್ ಸಭೆ ಸುದ್ದಿ,
ಅರುಣ್ ಸಿಂಗ್
author img

By

Published : Jun 17, 2021, 4:50 AM IST

Updated : Jun 17, 2021, 8:10 AM IST

ಬೆಂಗಳೂರು: ಇಂದು ಬಿಜೆಪಿ ಶಾಸಕರ ಜೊತೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಒನ್ ಟು ಒನ್ ಪ್ರತ್ಯೇಕ ಸಭೆ ನಡೆಸಿ ಅಹವಾಲು ಆಲಿಸಲಿದ್ದಾರೆ. ಪಕ್ಷದಲ್ಲಿನ ಗೊಂದಲ, ಆಂತರಿಕ ಕಲಹ, ಬಣ ರಾಜಕೀಯ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಕುಮಾರಕೃಪಾ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿರುವ ಅರುಣ್ ಸಿಂಗ್ ಇಂದು ಇಡೀ ದಿನ ಪಕ್ಷದ ಶಾಸಕರು, ಪರಿಷತ್ ಸದಸ್ಯರು ಮತ್ತು ಸಂಸದರ ಭೇಟಿಗೆ ಸಮಯವನ್ನು ಮೀಸಲಿರಿಸಿದ್ದಾರೆ. 30 ಕ್ಕೂ ಹೆಚ್ಚಿನ ಸದಸ್ಯರು ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ಸಮಯ ಕೇಳಿದ ಸದಸ್ಯರ ಪಟ್ಟಿ: ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್, ಎ ಎಸ್ ಪಾಟೀಲ್ ನಡಹಳ್ಳಿ, ಕುಮಾರ್ ಬಂಗಾರಪ್ಪ, ಮಾಡಾಳ್ ವಿರೂಪಾಕ್ಷಪ್ಪ, ರಾಜುಗೌಡ, ಅಭಯ್ ಪಾಟೀಲ್, ಅಪ್ಪಚ್ಚು ರಂಜನ್, ಹೆಚ್ ವಿಶ್ವನಾಥ್(MLC), ಪ್ರೀತಂ ಗೌಡ, ರಾಜ್ಕುಮಾರ್ ಪಾಟೀಲ್ ತೇಲ್ಕೂರ್, ಬೆಳ್ಳಿ ಪ್ರಕಾಶ್, ವೈ ಎ ನಾರಾಯಣ ಸ್ವಾಮಿ, ಹರತಾಳು ಹಾಲಪ್ಪ, ಈರಣ್ಣ ಕಡಾಡಿ(ರಾಜ್ಯಸಭೆ ಸದಸ್ಯ), ಸುನೀಲ್ ಕುಮಾರ್, ಉದಯ್ ಗರುಡಾಚಾರ್, ರೂಪಾಲಿ ನಾಯ್ಕ್, ಶಂಕರ್ ಪಾಟೀಲ್ , ಮುನೇನಕೊಪ್ಪ, ಸೋಮಶೇಖರ್ ರೆಡ್ಡಿ, ಸಿದ್ದು ಸವದಿ, ಮಹೇಶ್ ಕುಮಟಳ್ಲಿ, ಮಸಾಲೆ ಜಯರಾಂ, ಜ್ಯೋತಿ ಗಣೇಶ್, ಸತೀಶ್ ರೆಡ್ಡಿ, ರಾಜೇಶ್ ಗೌಡ, ಪ್ರದೀಪ್ ಶೆಟ್ಟರ್(Mlc), ಪರಣ್ಣ ಮುನವಳ್ಳಿ,

ಬಿಎಸ್​ವೈ ಪರ, ವಿರೋಧಿ ಬಣ ತಟಸ್ಥ ನಿಲುವಿನ ಶಾಸಕರು ಭೇಟಿಗೆ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದ್ದು, ಎಲ್ಲರಿಗೂ ಪ್ರತ್ಯೇಕ ಭೇಟಿಗೆ ಸಮಯಾವಕಾಶ ನೀಡಿ ಸಂದೇಶ ಕಳುಹಿಸಲಾಗುತ್ತಿದೆ. ವೈಯಕ್ತಿಕವಾಗಿ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯ, ಆರೋಪ, ಅಸಮಧಾನಗಳ ಕುರಿತು ಅರುಣ್ ಸಿಂಗ್ ಜೊತೆ ಮಾತುಕತೆ ನಡೆಸಲಿದ್ದಾರೆ. ಯಾವ ಕಾರಣಕ್ಕಾಗಿ ಬಹಿರಂಗ ಹೇಳಿಕೆ ನೀಡಬೇಕಾಯಿತು, ಮಾಧ್ಯಮಗಳ ಮುಂದೆ ಹೋಗಬೇಕಾಯಿತು ಎನ್ನುವ ವಿವರಣೆ ನೀಡಲಿದ್ದಾರೆ.

Last Updated : Jun 17, 2021, 8:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.