ಬೆಂಗಳೂರು: ರಾಜ್ಯದಲ್ಲಿ ಭಾನುವಾರ 112 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಮಹಾಮಾರಿ ಸೋಂಕಿಗೆ ಒಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ 40,062ಕ್ಕೆ ಏರಿಕೆಯಾಗಿದೆ. ಇಂದು ಒಟ್ಟು 17,273 ಜನರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 112 ಪಾಸಿಟಿವ್ ಪ್ರಕರಣಗಳು ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,48,747ಕ್ಕೆ ಹೆಚ್ಚಳವಾಗಿದೆ. ಪಾಸಿಟಿವ್ ದರ ಶೇ.0.64ಕ್ಕೆ ಏರಿಕೆ ಕಂಡಿದೆ.
ಇತ್ತ, 92 ಮಂದಿ ಸೋಂಕಿತರು ಚೇತರಿಸಿಕೊಂಡಿದ್ದು, ಇದರೊಂದಿಗೆ ಈವರೆಗೆ ಒಟ್ಟು 39,06,679 ಮಂದಿ ಗುಣಮುಖರಾದಂತೆ ಆಗಿದೆ. ಸಾವಿನ ದರ ಶೇ.0.89ರಷ್ಟು ದಾಖಲಾಗಿದೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,964ರಷ್ಟಿದೆ.
ಬೆಂಗಳೂರಿನಲ್ಲಿ 89 ಮಂದಿಗೆ ಸೋಂಕು ತಗುಲಿದ್ದು, ಇದರೊಂದಿಗೆ ಸೋಂಕಿತರ 17,84,586ಕ್ಕೆ ಏರಿಕೆ ಆಗಿದೆ. 91 ಮಂದಿ ಡಿಸ್ಚಾರ್ಜ್ ಆಗಿದ್ದು, ಈ ತನಕ 17,65,784 ಜನ ಗುಣಮುಖರಾಗಿದ್ದಾರೆ. ನಗರದಲ್ಲಿ ಯಾವುದೇ ಸಾವಿನ ವರದಿಯಾಗಿಲ್ಲ. ಸಾವಿನ ಸಂಖ್ಯೆ 16,962ರಷ್ಟಿದ್ದು, ಸಕ್ರಿಯ ಪ್ರಕರಣಗಳು 1,839ರಷ್ಟು ಇವೆ.
ರೂಪಾಂತರಿ ವೈರಸ್ ವಿವರ:
- ಅಲ್ಪಾ- 156
- ಬೀಟಾ-08
- ಡೆಲ್ಟಾ ಸಬ್ ಲೈನೇಜ್- 4623
- ಇತರೆ- 331
- ಒಮಿಕ್ರಾನ್- 5422
- BAI.1.529- 1005
- BA1- 100
- BA2- 4317
- ಒಟ್ಟು- 10,540
ಇದನ್ನೂ ಓದಿ: 'ಸರ್ಕಾರದ ಸುಳ್ಳುಗಳ ಸರಮಾಲೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಬಯಲುಗೊಳಿಸಿದೆ'