ETV Bharat / state

ರಾಜ್ಯದಲ್ಲಿ ನಿನ್ನೆಗಿಂತ ಇಂದು ಕೊಂಚ ತಗ್ಗಿದ ಕೋವಿಡ್​ ಸೋಂಕು

author img

By

Published : Jun 30, 2022, 10:58 PM IST

ದೇಶದಲ್ಲಿ ಕೋವಿಡ್​ ಸೋಂಕು ಮತ್ತೆ ಹೆಚ್ಚಾಗಲಿದೆ ಎಂಬ ಭೀತಿ ನಡುವೆ ರಾಜ್ಯದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಕಡಿಮೆಯಾಗಿದೆ. ಬುಧವಾರ 1,249 ಜನರಿಗೆ ಸೋಂಕು ಪತ್ತೆಯಾಗಿತ್ತು. ಗುರುವಾರ 1,046 ಹೊಸ ಪ್ರಕರಣಗಳು ವರದಿಯಾಗಿವೆ...

covid-positive-cases-found-in-karnataka
ಕರ್ನಾಟಕದಲ್ಲಿ ಕೋವಿಡ್​ ಪಾಸಿಟಿವ್​

ಬೆಂಗಳೂರು: ರಾಜ್ಯದಲ್ಲಿ ಇಂದು 25,931 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 1,046 ಮಂದಿಗೆ ಸೋಂಕು ದೃಢಪಟ್ಟಿದೆ. ಇದೇ ವೇಳೆ ಸೋಂಕಿನಿಂದ ಯಾವುದೇ ಸಾವಿನ ವರದಿಯಾಗಿಲ್ಲ.

ಹೊಸ 1,046 ಪ್ರಕರಣಗಳಿಂದ ಸದ್ಯ ಸಕ್ರಿಯ ಪ್ರಕರಣಗಳ 5,896ಕ್ಕೆ ಏರಿಕೆಯಾಗಿದೆ. ಜೊತೆಗೆ 857 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 39,69,411ಕ್ಕೆ ಏರಿಕೆಯಾದರೆ, ಇದರಲ್ಲಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 39,23,398 ಆಗಿದೆ. ರಾಜ್ಯಾದ್ಯಂತ 40,075 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ.

ಈ ವಾರದ ಸೋಂಕಿತರ ಪ್ರಮಾಣ ಶೇ.3.59ರಷ್ಟಿದೆ. ರಾಜ್ಯದ ವಿಮಾನ ನಿಲ್ದಾಣಗಳಿಗೆ ಬಂದಿಳಿದವರಲ್ಲಿ 5,695 ಮಂದಿ ತಪಾಸಣೆಗೆ ಒಳಗಾಗಿದ್ದಾರೆ. ಇತ್ತ, ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿಯ ಹತ್ತಿರ ತಲುಪಿದೆ.

ಬೆಂಗಳೂರಿನಲ್ಲಿ 984 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 18,04091ಕ್ಕೆ ಏರಿಕೆ ಆಗಿದೆ. ಇದೇ ವೇಳೆ 800 ಮಂದಿ ಬಿಡುಗಡೆಯಾಗಿದ್ದು, ಇದುವರೆಗೂ 17,81,545 ಮಂದಿ ಬಿಡುಗಡೆಗೊಂಡಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,577 ಇದೆ. ನಗರದಲ್ಲಿ ಸಾವಿನ ಸಂಖ್ಯೆ 16,968ರಷ್ಟಿದೆ.

ಇದನ್ನೂ ಓದಿ: ಹರ್ಷ ಹತ್ಯೆ ಪ್ರಕರಣ: NIA ತಂಡದಿಂದ 13 ಕಡೆ ದಾಳಿ, ಪರಿಶೀಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.