ಬೆಂಗಳೂರು: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ತಂಬಾಕು ದುಷ್ಪರಿಣಾಮ ಹಾಗೂ ಕೋಟ್ಪಾ 2003 ಕುರಿತು ಜಾಗೃತಿ ಮೂಡಿಸಲು ಇಂದು ನಗರದ ಮುಖ್ಯ ಭಾಗಗಳಲ್ಲಿ ಬೀದಿ ನಾಟಕ ಮಾಡಲಾಯಿತು.
ನಗರದ ಪ್ರಮುಖ ಸ್ಥಳಗಳಾದ ಮೈಸೂರು ಬ್ಯಾಂಕ್ ವೃತ್ತ, ಟೌನ್‌ಹಾಲ್, ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಕೆ.ಆರ್. ಮಾರ್ಕೆಟ್‌ನಲ್ಲಿ ನಾಟಕ ಪ್ರದರ್ಶನ ಮಾಡಿದರು. ಇನ್ನು ಈ ನಾಟಕದಲ್ಲಿ ತಂಬಾಕು, ಗುಟ್ಕಾ ದುರಭ್ಯಾಸ ಬೆಳೆಸಿಕೊಳ್ಳಬಾರದು. ಇನ್ನು ಅವುಗಳನ್ನು ಸೇವಿಸುವುದ್ರಿಂದ ಅರೋಗ್ಯಕ್ಕೆ ಅಪಾಯಕಾರಿ ಎಂಬ ಸಂದೇಶವನ್ನು ವಿಭಿನ್ನವಾಗಿ ಸಾರುವ ಮೂಲಕ ಜಾಗೃತಿ ಮೂಡಿಸಿದರು.
ಇಲ್ಲಿ ಕಲಾವಿದರು ಯಮಧರ್ಮ, ಚಿತ್ರಗುಪ್ತ, ತಂಬಾಕಿಗೆ ತುತ್ತಾಗಿರುವವರ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನು ಜಾಗೃತಿ ಮೂಡಿಸಲು ವಿಶ್ವಭಾರತಿ ಕಲಾ ತಂಡ, ಶೂನ್ಯ, ಅದ್ವಯ, ಮಹಾನಾಯಕ ತಂಡಗಳು ಬಿಬಿಎಂಪಿ ಸಹಯೋಗದೊಂದಿಗೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಜಾಗೃತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.