ETV Bharat / state

ಹುಲಿ ಉಗುರು ಪೆಂಡೆಂಟ್​ ಪ್ರಕರಣ: ಜಗ್ಗೇಶ್​ ವಿರುದ್ಧದ ಅರಣ್ಯಾಧಿಕಾರಿಗಳ ನೋಟಿಸ್‌ಗೆ ಹೈಕೋರ್ಟ್ ತಡೆ - ಈಟಿವಿ ಭಾರತ ಕನ್ನಡ

ಹುಲಿ ಉಗುರು ಪೆಂಡೆಂಟ್​ ಪ್ರಕರಣದಲ್ಲಿ ನಟ ಜಗ್ಗೇಶ್​ ವಿರುದ್ಧ ಅರಣ್ಯಾಧಿಕಾರಿಗಳ ನೋಟಿಸ್​ಗೆ ಹೈಕೋರ್ಟ್​ ತಡೆ ನೀಡಿದೆ.

Tiger claw case The High Court stayed the forest officers notice given to Jaggesh
ಹುಲಿ ಉಗುರು ಪೆಂಡೆಂಟ್​ ಪ್ರಕರಣ: ಜಗ್ಗೇಶ್​ ವಿರುದ್ಧ ಅರಣ್ಯಾಧಿಕಾರಿಗಳ ನೋಟಿಸ್‌ಗೆ ಹೈಕೋರ್ಟ್ ತಡೆ
author img

By ETV Bharat Karnataka Team

Published : Oct 30, 2023, 1:42 PM IST

Updated : Oct 30, 2023, 3:48 PM IST

ಬೆಂಗಳೂರು: ಹುಲಿ ಉಗುರು ಪೆಂಡೆಂಟ್​ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ಅವರಿಗೆ ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಿದ ಒಂದು ತಾಸಿನಲ್ಲಿ ಅವರ ಮನೆಯನ್ನು ಶೋಧನೆ ನಡೆಸಲಾಗಿತ್ತು. ಅರಣ್ಯಾಧಿಕಾರಿಗಳ ಈ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅರಣ್ಯ ಇಲಾಖೆಯ ನೋಟಿಸ್​ ಹಾಗೂ ಶೋಧನಾ ವಾರೆಂಟ್‌ಗೆ ಮಧ್ಯಂತರ ತಡೆ ನೀಡಿ ಆದೇಶಿಸಿದೆ.

ಸಾಮಾಜಿಕ ಜಾಲತಾಣಗಳ ದೃಶ್ಯಗಳನ್ನು ಆಧರಿಸಿ ನೋಟಿಸ್ ಜಾರಿ ಮತ್ತು ಶೋಧನೆ ನಡೆಸಲು ಮುಂದಾಗಿದ್ದ ಅರಣ್ಯ ಇಲಾಖೆಯ ಕ್ರಮವನ್ನು ಪ್ರಶ್ನಿಸಿ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ನೋಟಿಸ್ ಮತ್ತು ಶೋಧನಾ ವಾರೆಂಟ್‌ಗೆ ಮಧ್ಯಂತರ ತಡೆ ನೀಡಿದೆ.

ಅಲ್ಲದೇ, ಪ್ರತಿಕ್ರಿಯೆ ಕೇಳಿ ನೋಟಿಸ್ ಜಾರಿ ಮಾಡಿದ ಬಳಿಕ ಅವರು ಉತ್ತರಕ್ಕಾಗಿ ನಿರೀಕ್ಷೆ ಮಾಡಬೇಕು. ಇಲ್ಲವೇ ಅವರು ಹೇಳಿಕೆ ನೀಡುವವರೆಗೂ ಸುಮ್ಮನೆ ಇರಬೇಕು. ನೋಟಿಸ್ ನೀಡಿದ ಒಂದೇ ತಾಸಿನಲ್ಲಿ ಶೋಧನೆ ನಡೆಸಿರುವ ಉದ್ದೇಶವೇನು? ಪ್ರಚಾರಕ್ಕಾಗಿ ಈ ರೀತಿ ನಡೆದುಕೊಳ್ಳಲಾಗಿದೆಯೇ? ಪ್ರಚಾರಕ್ಕಾಗಿ ಬೇರೆ ಯಾವುದಾದರೂ ಕೆಲಸ ಮಾಡಿ, ಅದರ ಬದಲಿಗೆ ಈ ರೀತಿಯಲ್ಲಿ ದಾಳಿ ನಡೆಸಿ ಪ್ರಚಾರ ಪಡೆದುಕೊಳ್ಳುವುದು ಎಷ್ಟು ಸರಿ ಎಂದು ಪೀಠ ಪ್ರಶ್ನೆ ಮಾಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅಕ್ಟೋಬರ್ 25ರಂದು ತಮ್ಮಲ್ಲಿ ಯಾವುದೇ ಹುಲಿ ಉಗುರು ಇದ್ದಲ್ಲಿ ಅರಣ್ಯ ಇಲಾಖೆಗೆ ಒಪ್ಪಿಸಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಆದಾದ ಒಂದು ಗಂಟೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವಲ್ಲಿ 14 ಅಧಿಕಾರಿಗಳು ಮನೆಗೆ ಭೇಟಿ ನೀಡಿ ಶೋಧನೆ ನಡೆಸಿದ್ದಾರೆ. ಅಲ್ಲದೇ, ಸುಮಾರು 40 ವರ್ಷಗಳ ಹಿಂದೆ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಶೀಲಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಇದೀಗ ಶೋಧನೆ ನಡೆಸುವುದಕ್ಕೆ ಮುಂದಾಗಿದ್ದಾರೆ ಎಂದರು.

ಇದರಿಂದ ಗರಂ ಆದ ನ್ಯಾಯಪೀಠ, ನೋಟಿಸ್ ನೀಡಿದ ಬಳಿಕ ಉತ್ತರ ನೀಡುವವರೆಗೂ ಸುಮ್ಮನಿರಬೇಕು ಎಂದು ಹೇಳಿತು. ಈ ವೇಳೆ ಸರ್ಕಾರದ ಪರ ವಕೀಲರು, ಕೆಲ ಮಾಹಿತಿಗಳ ಪ್ರಕಾರ ಹುಲಿ ಉಗುರು ನಾಶ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದೇ ಕಾರಣಕ್ಕೆ ದಾಳಿ ಮಾಡಲಾಗಿದೆ ಎಂದು ಸಮರ್ಥನೆ ಮಾಡಿಕೊಂಡರು.

ಇದನ್ನೂ ಓದಿ: ಹುಲಿ ಉಗುರು ಪೆಂಡೆಂಟ್ ಹೊಂದಿರುವ ಆರೋಪ: ದರ್ಶನ್, ರಾಕ್​ಲೈನ್ ವೆಂಕಟೇಶ್‌ ಮನೆಯಲ್ಲಿ ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ

ಇದಕ್ಕೆ ಸಿಟ್ಟಾದ ನ್ಯಾಯಪೀಠ, ನೋಟಿಸ್ ನೀಡಿದ ಒಂದು ತಾಸಿನಲ್ಲಿ ಯಾವ ಮೂಲಗಳು ನಿಮಗೆ ಮಾಹಿತಿ ನೀಡಿದವು ಎಂದು ಪ್ರಶ್ನಿಸಿತು. ಅರಣ್ಯ ಉತ್ಪನ್ನಗಳನ್ನು ವಶದಲ್ಲಿಟ್ಟುಕೊಳ್ಳುವುದು ಕಾನೂನು ಪ್ರಕಾರ ತಪ್ಪು. ಆದರೆ, ಸರ್ಕಾರ ಮಾಡಿರುವ ಪ್ರಕ್ರಿಯೆ ಸರಿಯಾದ ಕ್ರಮವಲ್ಲ. ಸಂಪೂರ್ಣ ಪ್ರಚಾರಕ್ಕಾಗಿ ಮಾಡಲಾಗಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ವಾದ ಮುಂದುವರೆಸಿದ ಅರ್ಜಿದಾರ ಪರ ವಕೀಲರು, ಅರ್ಜಿದಾರ ರಾಜ್ಯಸಭಾ ಸದಸ್ಯರಾಗಿದ್ದಾರೆ. ಜೊತೆಗೆ ಸಂಸತ್ ಅಧಿವೇಶನ ನಡೆಯುತ್ತಿದೆ. ಈ ಸಂಸತ್‌ನಲ್ಲಿ ಚರ್ಚೆ ನಡೆಸುವುದಕ್ಕಾಗಿ ಹಲವು ವಿಚಾರಗಳ ಚರ್ಚೆ ನಡೆಸಬೇಕಾಗುತ್ತಿದೆ. ಈ ಸಂದರ್ಭದಲ್ಲಿ ದಾಳಿ ನಡೆಸುವುದು ಎಷ್ಟು ಸರಿ? ಎಂದು ಅರಣ್ಯ ಇಲಾಖೆ ಕ್ರಮವನ್ನು ಪ್ರಶ್ನಿಸಿದರು.

ಪ್ರಕರಣದ ಹಿನ್ನೆಲೆ: ಕಳೆದ ಕೆಲ ವರ್ಷಗಳ ಹಿಂದೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಸಂದರ್ಭ, ಜಗ್ಗೇಶ್ ಅವರು ತನ್ನಲ್ಲಿದ್ದ ಹುಲಿ ಉಗುರಿನ ಲಾಕೇಟ್‌ ಅನ್ನು ತೋರಿಸಿ ಇದು ನಿಜವಾದ ಹುಲಿ ಉಗುರು. ನನ್ನ ಮಗ ಹುಲಿಯಂತಿರಬೇಕು ಎಂದು ನಮ್ಮ ತಾಯಿ ನನಗೆ ಹಾಕಿದ್ದಾರೆ ಎಂದು ಹೇಳಿದ್ದರು. ಈ ನಡುವೆ ಬಿಗ್‌ ಬಾಸ್ ಸ್ಪರ್ಧಿ ವರ್ತೂರು ಸಂತೋಷ್​ ಹುಲಿ ಉಗುರು ಧರಿಸಿದ್ದ ಹಿನ್ನೆಲೆ ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಸಂದರ್ಶನದ ಹೇಳಿಕೆಯುಳ್ಳ ದೃಶ್ಯಗಳು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಈ ಹಿನ್ನೆಲೆಯಲ್ಲಿ ಜಗ್ಗೇಶ್‌ಗೆ ನೋಟಿಸ್ ನೀಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಮನೆಯಲ್ಲಿ ಶೋಧನೆ ನಡೆಸಿದ್ದರು. ಇದನ್ನು ಪ್ರಶ್ನಿಸಿ ಜಗ್ಗೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: 'ಅರಣ್ಯಾಧಿಕಾರಿಗಳ ದಾಳಿ ಕಾನೂನುಬಾಹಿರ': ಹುಲಿ ಉಗುರು ಮಾದರಿ ಪೆಂಡೆಂಟ್‌ ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಿದ ಜಗ್ಗೇಶ್‌

Last Updated : Oct 30, 2023, 3:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.