ETV Bharat / state

ಸಿಗರೇಟು ಕಾಸು ಕೇಳಿದ್ದಕ್ಕೆ ಕಾಂಡಿಮೆಂಟ್ಸ್‌ ಅಂಗಡಿ ಮಾಲೀಕನಿಗೆ ಮನಸೋಇಚ್ಛೆ ಥಳಿಸಿದ ಪುಂಡರು!

ಬೆಂಗಳೂರು ನಗರದಲ್ಲಿ ಇತ್ತೀಚೆಗೆ ಪುಂಡರ ಹಾವಳಿ ಹೆಚ್ಚುತ್ತಿದೆ. ಕೆಲವು ತಿಂಗಳ ಹಿಂದಷ್ಟೇ ಬೇಕರಿ ಕೆಲಸಗಾರರ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಕಾಂಡಿಮೆಂಟ್ಸ್‌ ಅಂಗಡಿ ಮಾಲೀಕನ ಮೇಲೆ ಪುಂಡಾಟಿಕೆ ಪ್ರದರ್ಶಿಸಿದ್ದಾರೆ.

author img

By

Published : Jan 17, 2023, 7:26 AM IST

Updated : Jan 17, 2023, 8:52 AM IST

Condiments owner assaulted
ಕಾಂಡಿಮೆಂಟ್ಸ್ ಮಾಲೀಕನ ಮೇಲೆ ಹಲ್ಲೆ

ಬೆಂಗಳೂರು : ಕಾಸು ಕೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕನ ಮೇಲೆ ಕೋಪಗೊಂಡ ಪುಂಡರ ತಂಡದ ಸದಸ್ಯರು ಮನಬಂದಂತೆ ಹಲ್ಲೆ‌ ಮಾಡಿ ಅಂಗಡಿ ಪೀಠೋಪಕರಣ‌ ಧ್ವಂಸಗೊಳಿಸಿದ್ದಾರೆ. ಮದ್ಯ ಸೇವಿಸಿ ದುಷ್ಕೃತ್ಯ ಪ್ರದರ್ಶಿಸಿದ್ದಾರೆ ಎಂದು ತಿಳಿದುಬಂದಿದೆ. ಬೈಂದೂರು ಮೂಲದ ಮಂಜುನಾಥ್ ಶೆಟ್ಟಿ ಹಲ್ಲೆಗೊಳಗಾಗಿದ್ದಾರೆ. ಇವರು ನೀಡಿದ ದೂರು ಆಧರಿಸಿ ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲ್ಲೆಕೋರರನ್ನು ಬಂಧಿಸಿದ್ದಾರೆ.

ಕಳೆದ 13 ವರ್ಷಗಳಿಂದ ಜೆ.ಪಿ.ನಗರದ 24ನೇ ಮುಖ್ಯರಸ್ತೆಯಲ್ಲಿ ಮಂಜುನಾಥ್ ಕಾಂಡಿಮೆಟ್ಸ್‌ ನಡೆಸುತ್ತಿದ್ದಾರಂತೆ. ಸೋಮವಾರ ಬೆಳಗ್ಗೆ 10 ಗಂಟೆ‌ಯ ಸುಮಾರಿಗೆ ಇವರ ಅಂಗಡಿಗೆ ಬಂದಿದ್ದ ಆರೇಳು ಮಂದಿ‌ ಸಿಗರೇಟ್ ಕೇಳಿದ್ದಾರೆ.‌ ಸಿಗರೇಟ್‌ ಹಣ ಕೊಡುವಂತೆ ತಿಳಿಸಿದಾಗ ಸಿಟ್ಟಾದ ಕಿಡಿಗೇಡಿಗಳು ಮಂಜುನಾಥ್ ಮೇಲೆ ಮುಷ್ಠಿ ಹಾಗೂ ರಾಡ್‌ನಿಂದ ಹೊಡೆದಿದ್ದಾರೆ. ರಸ್ತೆಗೆಳೆದು ತಂದು ಕಾಲಿನಿಂದ ತುಳಿದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೂರಿನ ವಿವರ: ಸೋಮವಾರ ಬೆಳಗ್ಗೆ ಅಂದಾಜು 30 ರಿಂದ 40 ವರ್ಷ ಪ್ರಾಯದ ಆರೇಳು ಮಂದಿ ಹುಡುಗರು ಮದ್ಯದ ಅಮಲಿನಲ್ಲಿ ಅಂಗಡಿಯೊಳಗೆ ನುಗ್ಗಿದ್ದಾರೆ. ಸಿಗರೇಟ್ ಬಂಡಲಿಗೆ ಕೈ ಹಾಕಿ ತೆಗೆದುಕೊಳ್ಳಲು ಯತ್ನಿಸಿದರು. ಇದನ್ನು ಪ್ರಶ್ನಿಸಿದಾಗ ರಾಡ್‌ ಮತ್ತು ಮುಷ್ಟಿಯಿಂದ ಗುದ್ದಿ ಹಲ್ಲೆ ನಡೆಸಿದರು. ಇದಾದ ಬಳಿಕ, ನನ್ನನ್ನು ರಸ್ತೆಗೆ ಎಳೆದು ತಂದು ಕಾಲಿನಿಂದ ತುಳಿದರು. ರಸ್ತೆಯಲ್ಲಿದ್ದ ಸಲಾಕೆಯಿಂದಲೂ ನನ್ನ ಎದೆ, ತಲೆ ಹಾಗು ಹೊಟ್ಟೆಗೆ ಹೊಡೆದರು. ಮೂಗು ಮತ್ತು ತಲೆಯಿಂದ ರಕ್ತ ಸುರಿಯಿತು ಎಂದು ಮಂಜುನಾಥ್ ಶೆಟ್ಟಿ ವಿವರಿಸಿದ್ದಾರೆ.

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ: ಕೆಲವು ದಿನಗಳ ಹಿಂದೆ ಇಂಥದ್ದೇ ಘಟನೆ ನಡೆದಿತ್ತು. ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕಾಂಡಿಮೆಂಟ್ಸ್ ಮಾಲೀಕ ಮತ್ತು ಆತನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದರು. ಕೆಂಗೇರಿ ಉಪನಗರದ ಚೌಡೇಶ್ವರಿ ಕಾಂಡಿಮೆಂಟ್ಸ್ ಮಾಲೀಕ ಶಿವಕುಮಾರ್, ಪತ್ನಿ ಹಾಗು ಮಗುವಿನ ಮೇಲೆ ಹಲ್ಲೆ ಮಾಡಿದ್ದ ಆರೋಪಿ ಟಿಪ್ಪು ಎಂಬಾತ ಸೆರೆಯಾಗಿದ್ದ.

ಸಿಗರೇಟ್ ಹಣ ಕೇಳಿದ್ದಕ್ಕೆ ಥಳಿತ: ಕಳೆದ ವರ್ಷದ ಡಿಸೆಂಬರ್ 9ರಂದು ಸಿಗರೇಟ್ ಹಣ ಕೇಳಿದ್ದಕ್ಕೆ ಅಂಗಡಿ ಹುಡುಗರ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ 1.90 ಲಕ್ಷ ರೂ. ದೋಚಿ, ಪ್ರಾಣ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಮೂವರನ್ನು ದುರುಳರನ್ನು ಎಚ್ಎಎಲ್‌ ಪೊಲೀಸರು ಬಂಧಿಸಿದ್ದರು. ಡೆಲಿವರಿ ಬಾಯ್ ಕಾರ್ತಿಕ್, ಅಲ್ಯೂಮಿನಿಯಂ ವರ್ಕ್ ಮಾಡುವ ಸಲ್ಮಾನ್, ಖಾಸಗಿ ಹೊಟೇಲ್ ಮ್ಯಾನೇಜರ್ ಕಾರ್ತಿಕ್ ಬಂಧಿತರಾಗಿದ್ದರು. ಉಡುಪಿಯ ಬೈಂದೂರು ಮೂಲದ ನವೀನ್ ಕುಮಾರ್ ಹಾಗೂ ಪ್ರಜ್ವಲ್ ಶೆಟ್ಟಿ, ನಿತೀನ್ ಶೆಟ್ಟಿ ಎಂಬುವರ ಮೇಲೆ ಈ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಘಟನೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ: ಸಿಗರೇಟ್ ಹಣ ಕೇಳಿದಕ್ಕೆ ಕೊಲೆ ಬೆದರಿಕೆ ಹಾಕಿ ಹಲ್ಲೆ: ಮೂವರ ಬಂಧನ

Last Updated : Jan 17, 2023, 8:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.