ಬೆಂಗಳೂರು: ಪೇಜಾವರ ಶ್ರೀಗಳ ಅಂತಿಮ ವಿಧಿ ವಿಧಾನವನ್ನು ನೋಡಲು ಸಾವಿರಾರು ಭಕ್ತರು ನಗರದ ವಿದ್ಯಾಪೀಠ ಮಠದತ್ತ ಆಗಮಿಸಿದ್ದಾರೆ.
ವಿದ್ಯಾಪೀಠ ಮಠದಲ್ಲಿ ಶ್ರೀಗಳ ಅಂತಿಮ ವಿಧಿ ವಿಧಾನ ನಡೆಯಲಿದೆ. ಶ್ರೀಗಳ ಅಂತಿಮ ದರ್ಶನ ಮಾಡಲು ಸಾವಿರಾರು ಭಕ್ತರು ಮಠದತ್ತ ಜಮಾಯಿಸಿದ್ದಾರೆ. ಆದರೆ ಮುಕ್ತ ಅವಕಾಶ ಇಲ್ಲದ ಕಾರಣ ಭಕ್ತರು ನಿರಾಶರಾಗಿದ್ದಾರೆ. ಮಠದ ಆಡಳಿತ ಮಂಡಳಿ ಭಕ್ತರ ಪ್ರವೇಶಕ್ಕೆ ವಿಶೇಷ ಪಾಸ್ ವ್ಯವಸ್ಥೆ ಮಾಡಿದ್ದು, ಪಾಸ್ ಪಡೆಯಲು ಭಕ್ತರು ಮುಗಿಬಿದ್ದಿದ್ದಾರೆ.
ಪಾಸ್ಗಾಗಿ ಮುಗಿ ಬಿದ್ದ ಹಿನ್ನೆಲೆ ಮಠದ ಸಿಬ್ಬಂದಿ ಪಾಸ್ ವಿತರಿಸಲು ಹರಸಾಹಸ ಪಟ್ಟರು. ಕೊನೆಗೆ ಪೊಲೀಸರು ನೆರೆದಿದ್ದ ನೂರಾರು ಭಕ್ತಾಧಿಗಳನ್ನು ನಿಯಂತ್ರಿಸಿದರು. ಬೆರಳೆಣಿಕೆಯಷ್ಟು ಪಾಸ್ ವಿತರಿಸಿದ್ದು, ಪಾಸ್ ಸಿಗದ ಹಲವು ಭಕ್ತಗಣ ನಿರಾಶೆಗೊಂಡಿದೆ.