ETV Bharat / state

ಡ್ರಗ್​ ಸಪ್ಲೈ ಮಾಡುತ್ತಿದ್ದ ಮೂವರು ಆರೋಪಿಗಳ ಬಂಧನ: 25 ಲಕ್ಷ ಮೌಲ್ಯದ 3 ಕೆ.ಜಿ ಹಾಶಿಶ್ ಎಣ್ಣೆ ಜಪ್ತಿ - Hashish Oil accused at bengalore

ಕಳೆದ ಎರಡು ದಿನಗಳ ಹಿಂದೆ ವಿಶಾಖಪಟ್ಟಣದಿಂದ ಬೆಲೆಬಾಳುವ ಹಾಶಿಶ್ ಎಣ್ಣೆ ಖರೀದಿಸಿ ಕಾರಿನಲ್ಲಿ ಸಾಗಿಸುತ್ತಿದ್ದ ಆರೋಪಿಗಳ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಎನ್​ಸಿಬಿ ಅಧಿಕಾರಿಗಳು ದೇವನಹಳ್ಳಿ ಟೋಲ್​​ ಬಳಿ ಬಂಧಿಸಿ ಸುಮಾರು 25 ಲಕ್ಷ ಮೌಲ್ಯದ 3 ಕೆ.ಜಿ.ಹಾಶಿಶ್ ಎಣ್ಣೆಯನ್ನು‌ ಜಪ್ತಿ ಮಾಡಿಕೊಂಡಿದ್ದಾರೆ.

three drug supliers arrested by NCB at bengalore
ಹಾಶಿಶ್ ಎಣ್ಣೆ ಜಪ್ತಿ
author img

By

Published : Nov 12, 2020, 5:36 PM IST

ಬೆಂಗಳೂರು: ಆಂಧ್ರ‌ಪ್ರದೇಶದ ವಿಶಾಖಪಟ್ಟಣದಿಂದ ಬೆಂಗಳೂರು ಮಾರ್ಗವಾಗಿ ಕೇರಳಕ್ಕೆ‌ ಹಾಶಿಶ್ ಆಯಿಲ್‌ ಸರಬರಾಜು ಮಾಡುತ್ತಿದ್ದ ಮೂವರು ಅಂತಾರಾಜ್ಯ ದಂಧೆಕೋರರನ್ನು ಮಾದಕವಸ್ತು‌ ನಿಯಂತ್ರಣ ದಳ (ಎನ್​​ಸಿಬಿ) ಬೆಂಗಳೂರು ವಲಯದ ಅಧಿಕಾರಿಗಳು ಬಂಧಿಸಿದ್ದಾರೆ.

ರಂಜಿತ್, ಸಾರಂಗ್ ಹಾಗೂ ಅನಿಶ್ ಬಂಧಿತ ಆರೋಪಿಗಳು. ಕಳೆದ ಎರಡು ದಿನಗಳ ಹಿಂದೆ ವಿಶಾಖಪಟ್ಟಣದಿಂದ ಬೆಲೆಬಾಳುವ ಹಾಶಿಶ್ ಎಣ್ಣೆ ಖರೀದಿಸಿ ಕಾರಿನಲ್ಲಿ ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎನ್​ಸಿಬಿ ಅಧಿಕಾರಿಗಳು ದೇವನಹಳ್ಳಿ ಟೋಲ್​​ ಬಳಿ ಆರೋಪಿಗಳನ್ನು ಬಂಧಿಸಿ ಸುಮಾರು 25 ಲಕ್ಷ ಮೌಲ್ಯದ 3 ಕೆ.ಜಿ.ಹಾಶಿಶ್ ಎಣ್ಣೆ‌ ಜಪ್ತಿ ಮಾಡಿಕೊಂಡಿದ್ದಾರೆ.

ಯಾರಿಗೂ ಅನುಮಾನ ಬಾರದಿರಲು ಕಾರು ಚಾಲಕನ ಸೀಟಿನ ಕೆಳಗೆ ಬಾಕ್ಸ್​ ರೀತಿಯಲ್ಲಿ ಹಾಶಿಶ್ ಆಯಿಲ್​ ಬಚ್ಚಿಟ್ಟುಕೊಂಡು ಬೆಂಗಳೂರು‌ ಮಾರ್ಗವಾಗಿ ಕೇರಳಕ್ಕೆ ಹೋಗಿ ಮಾರಾಟ ಮಾಡಲು ಯೋಜನೆ ರೂಪಿಸಿದ್ದರು. ಆರೋಪಿಗಳು ಮಾಲ್ಡೀವ್ಸ್​, ಶ್ರೀಲಂಕಾಕ್ಕೂ ಡ್ರಗ್ಸ್ ಸರಬರಾಜು ಮಾಡುವ ಯೋಜನೆ‌ ರೂಪಿಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಬೆಂಗಳೂರು ವಲಯ ನಿರ್ದೇಶಕ ಅಮಿತ್ ಗವಾಟೆ ತಿಳಿಸಿದ್ದಾರೆ.

ಏನಿದು ಹಾಶಿಶ್ ಆಯಿಲ್ ?
ವೈಟ್ ಪೆಟ್ರೋಲಿಯಂ ಮೂಲಕ ಗಾಂಜಾದಿಂದ ಬಟ್ಟಿ ಇಳಿಸಿದ ದ್ರವ್ಯವನ್ನು ಹತ್ತು ದಿನಗಳ ಕಾಲ ಹಾಗೇ ಇಟ್ಟ ಬಳಿಕ‌ ಅದು ಗಾಂಜಾ ದ್ರಾವಕವಾಗಿ ಪರಿವರ್ತನೆಯಾಗುತಿತ್ತು. ಅದನ್ನೇ ಈ ದಂಧೆಕೋರರು ಹಾಶಿಶ್ ಆಯಿಲ್ ಎಂದು ಕರೆದು ಎಗ್ಗಿಲ್ಲದೇ ಮಾರಾಟ ಮಾಡುತ್ತಾರೆ. ಕಾಳಸಂತೆಯಲ್ಲಿ‌‌ 10 ಗ್ರಾಂ ಆಯಿಲ್​ಗೆ 5 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.