ETV Bharat / state

ಮೀನುಗಾರಿಕಾ ಬೋಟುಗಳಲ್ಲಿ ಸ್ವದೇಶಿ ನಿರ್ಮಿತ ಯಂತ್ರಗಳ ಬಳಕೆಗೆ ಚಿಂತನೆ : ಸಚಿವ ಕೋಟ - ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸುದ್ದಿ

ಕೊರೊನಾ ಕಾರಣದಿಂದ ಸಪ್ತಪದಿ ಕಾರ್ಯಕ್ರಮ ಮುಂದೂಡಲಾಗಿತ್ತು. ಜನವರಿಯಿಂದ ಮತ್ತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು. ದೇವಾಲಯಗಳ ಆಡಳಿತ ಮಂಡಳಿಯವರು ಸ್ಥಳೀಯವಾಗಿಯೇ ಮುಹೂರ್ತ ನಿಗದಿ ಪಡಿಸಿಕೊಂಡ್ರೂ ಅನುಮತಿ ನೀಡಲಾಗುತ್ತದೆ. ವಧು-ವರರಿಗೆ ಸರ್ಕಾರದಿಂದ ಕೊಡುವ ಉಡುಗೊರೆ ಮತ್ತು ಸೌಲಭ್ಯಗಳನ್ನು ಈ ಮೊದಲು ಪ್ರಕಟಿಸಿದಂತೆಯೇ ಕೊಡಲಾಗುತ್ತದೆ..

shrinivas poojary
ಸಚಿವ ಕೋಟ ಶ್ರೀನಿವಾಸ ಪೂಜಾರಿ
author img

By

Published : Jan 8, 2021, 5:39 PM IST

ಬೆಂಗಳೂರು : ಯಾಂತ್ರೀಕೃತ ಮೀನುಗಾರಿಕಾ ಬೋಟುಗಳಲ್ಲಿ ಈವರೆಗೆ ಶೇ.90ರಷ್ಟು ಚೀನಾ ನಿರ್ಮಿತ ಯಂತ್ರಗಳನ್ನು ಬಳಸಲಾಗುತ್ತಿತ್ತು. ಇದನ್ನು ತಪ್ಪಿಸಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯಡಿ ಸ್ವದೇಶಿ ನಿರ್ಮಿತ ಯಂತ್ರಗಳ ಬಳಕೆಗೆ ಉದ್ದೇಶಿಸಲಾಗಿದೆ ಎಂದು ಮುಜರಾಯಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಇಂದು ಮೀನುಗಾರರ ಮುಖಂಡರು, ಕಂಪನಿ ಮುಖ್ಯಸ್ಥರು ಹಾಗೂ ಸರ್ಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಅಡಿ ಯಾಂತ್ರಿಕೃತ ಮೀನುಗಾರಿಕಾ ಹಡಗುಗಳಿಗೆ ಸ್ವದೇಶಿ ಯಂತ್ರ ಬಳಸುವ ಬಗ್ಗೆ ಚರ್ಚೆ ಮಾಡಿದ್ದೇವೆ.

ಅದಕ್ಕಾಗಿ ಇಂದು ಸ್ವದೇಶಿ ಕಂಪನಿಗಳ ಜೊತೆ ಸಭೆ ನಡೆಸಿದ್ದೇವೆ. ಇನ್ನು, ಎರಡು ಮೂರು ತಿಂಗಳಿನಲ್ಲಿ ಕರಾವಳಿ ತೀರ ಭಾಗದಲ್ಲಿ ಯಾಂತ್ರಿಕೃತ ಹಡಗುಗಳ ಇಂಜಿನ್​ಗಳ ವಸ್ತು ಪ್ರದರ್ಶನ ಏರ್ಪಾಡು ಮಾಡುತ್ತೇವೆ ಎಂದು ಹೇಳಿದರು.

ಇದನ್ನು ಓದಿ: ನರ್ಮದಾ ನದಿಯಲ್ಲಿ ಮಗುಚಿದ ದೋಣಿ: 7 ಜನರು ಪತ್ತೆ, ಹಲವರು ನಾಪತ್ತೆ

ಸೀಮೆಎಣ್ಣೆ ಬಳಕೆಯಾಗುತ್ತಿರುವ ನಾಡದೋಣಿಗಳಿಗೆ ಗ್ಯಾಸ್ ಎಂಜಿನ್ ಅಳವಡಿಕೆಗೆ ಸರ್ಕಾರ ಚಿಂತನೆ ನಡೆಸಿದೆ. ಪ್ರಸಕ್ತ ಚೀನಾ ನಿರ್ಮಿತ ಯಂತ್ರೋಪಕರಣಗಳ ಗುಣಮಟ್ಟಕ್ಕೆ ಸರಿಸಾಟಿಯಾದ ಭಾರತೀಯ ಯಂತ್ರೋಪಕರಣಗಳು ಲಭ್ಯವಾಗುತ್ತಿಲ್ಲ.

ಹಾಗಾಗಿ, ಭಾರತ ನಿರ್ಮಿತ ಗುಣಮಟ್ಟದ ವಸ್ತುಗಳ ನಿರ್ಮಾಣಕ್ಕೆ ಉದ್ಯಮಗಳಿಗೆ ಒಂದಿಷ್ಟು ಸಮಯ ಕೊಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು. ಕಡಲಿನಲ್ಲಿ ತೊಂದರೆಗೆ ಒಳಗಾಗುವ ಮೀನುಗಾರರ ರಕ್ಷಣೆಗೆ ಬೋಟ್ ಆ್ಯಂಬುಲೆನ್ಸ್ ಮಾಡಲೂ ಸಹ ಸರ್ಕಾರ ಚಿಂತನೆ ನಡೆಸಿದೆ ಎಂದರು.

ದೇವಾಲಯಗಳ ಆದಾಯ ಕಡಿತ : ಕೊರೊನಾ ಕಾರಣಕ್ಕೆ ರಾಜ್ಯದ ಮುಜರಾಯಿ ದೇವಸ್ಥಾನಗಳಿಗೆ ಶೇ.50ರಷ್ಟು ನಷ್ಟವಾಗಿದೆ. ಸದ್ಯ ಚೇತರಿಕೆಯ ಹಾದಿಯಲ್ಲಿ ದೇವಾಲಯಗಳ ಆದಾಯವಿದೆ ಎಂದರು.

ಸಪ್ತಪದಿ : ಸಪ್ತಪದಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸರಳ ವಿವಾಹ ಕಾರ್ಯಕ್ರಮವೆಂದು ಪುನರ್ ನಾಮಕರಣ ಮಾಡಿ ಪ್ರಾರಂಭಿಸಲಾಗಿದೆ. ಇಲಾಖೆಯ ಆಗಮ ಶಾಸ್ತ್ರ ಪಂಡಿತರು ನೀಡಿರುವ ಮುಹೂರ್ತದಲ್ಲಿ ಎರಡು ಮೂರು ಜೋಡಿ ರಿಜಿಸ್ಟರ್ ಆಗಿದ್ದರೂ ದೇವಾಲಯಗಳ ಆಡಳಿತ ಮಂಡಳಿಗಳು ವಿವಾಹ ಕಾರ್ಯಕ್ರಮ ನೆರವೇರಿಸಲು ಅನುಮತಿ ನೀಡಲಾಗಿದೆ ಎಂದರು.

ಕೊರೊನಾ ಕಾರಣದಿಂದ ಸಪ್ತಪದಿ ಕಾರ್ಯಕ್ರಮ ಮುಂದೂಡಲಾಗಿತ್ತು. ಜನವರಿಯಿಂದ ಮತ್ತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು. ದೇವಾಲಯಗಳ ಆಡಳಿತ ಮಂಡಳಿಯವರು ಸ್ಥಳೀಯವಾಗಿಯೇ ಮುಹೂರ್ತ ನಿಗದಿ ಪಡಿಸಿಕೊಂಡ್ರೂ ಅನುಮತಿ ನೀಡಲಾಗುತ್ತದೆ. ವಧು-ವರರಿಗೆ ಸರ್ಕಾರದಿಂದ ಕೊಡುವ ಉಡುಗೊರೆ ಮತ್ತು ಸೌಲಭ್ಯಗಳನ್ನು ಈ ಮೊದಲು ಪ್ರಕಟಿಸಿದಂತೆಯೇ ಕೊಡಲಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.