ETV Bharat / state

ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದವರು ತಪಾಸಣೆ ಮಾಡಿಸ್ಕೊಳ್ಳಲೇಬೇಕು : ಕಾರಜೋಳ ಮನವಿ

ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಭಾಗವಹಿಸಿದವರು ಹಾಗೂ ಹೊರ ರಾಜ್ಯ ಮತ್ತು ಹೊರದೇಶಗಳಿಂದ ಬಂದಂತಹವರು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ವೈದ್ಯಕೀಯ ತಪಾಸಣೆಗೊಳಗಾಗುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಮನವಿ ಮಾಡಿದ್ದಾರೆ.

Those who attended Nizamuddin meeting must be checked: Karajola
ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದವರು ಕಡ್ಡಾಯವಾಗಿ ತಪಾಸಣೆಗೊಳಗಾಗಬೇಕು: ಕಾರಜೋಳ
author img

By

Published : Apr 4, 2020, 2:08 PM IST

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಭಾಗವಹಿಸಿದವರು ಹಾಗೂ ಹೊರ ರಾಜ್ಯ ಮತ್ತು ಹೊರದೇಶಗಳಿಂದ ಬಂದಂತಹವರು ಕಡ್ಡಾಯವಾಗಿ ಸ್ವಯಂ ಪ್ರೇರಣೆಯಿಂದ ವೈದ್ಯಕೀಯ ತಪಾಸಣೆಗೊಳಗಾಗುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಮನವಿ ಮಾಡಿದ್ದಾರೆ.

ನಿಜಾಮುದ್ದೀನ್ ಸಭೆಯಲ್ಲಿ ಭಾಗವಹಿಸಿದವರು ಕಡ್ಡಾಯವಾಗಿ ತಪಾಸಣೆಗೊಳಗಾಗಬೇಕು: ಕಾರಜೋಳ

ವೈದ್ಯಕೀಯ ತಪಾಸಣೆಗೊಳಗಾಗುವುದನ್ನು ನಿರ್ಲಕ್ಷಿಸಿದಲ್ಲಿ ತಮ್ಮ ಜೀವಕ್ಕೂ ಮತ್ತು ತಮ್ಮ ಬಂಧು ಬಳಗದವರ ಜೀವಕ್ಕೂ ತೊಂದರೆ ಮಾಡಿದಂತಾಗುತ್ತದೆ. ಅಲ್ಲದೆ, ಸಮುದಾಯದ ಸ್ವಾಸ್ಥ್ಯ ಹಾಳುಮಾಡಿದಂತಾಗುತ್ತದೆ. ಹಾಗಾಗಿ, ಎಲ್ಲಾ ಮಹನೀಯರು ಸಹಕರಿಸಲು ಮತ್ತೊಮ್ಮೆ ಮನವಿ ಮಾಡುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಪಾಸಣೆ ಮಾಡಿಸಿಕೊಳ್ಳದೇ ತಪ್ಪಿಸಿಕೊಂಡಿದ್ದಲ್ಲಿ ಅಂತಹವವರಿಗೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಈಗಾಗಲೇ ಜಿಲ್ಲಾಡಳಿತಗಳಿಗೆ ಮತ್ತು ತಾಲೂಕು ಆಡಳಿತಗಳಿಗೆ ಸೂಚಿಸಿದೆ.

ಸಾರ್ವಜನಿಕರು ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಸೂಚಿಸಿರುವ ಎಲ್ಲ ನಿಯಮಗಳನ್ನು ಪಾಲಿಸಿ ಮನೆಯಲ್ಲೇ ಇದ್ದು ಸಹಕರಿಸಬೇಕು ಎಂದು ಮನವಿ ಮಾಡಿರುವ ಡಿಸಿಎಂ, ಏ. 5 ರಂದು ರಾತ್ರಿ 9 ಗಂಟೆಗೆ ಪ್ರಧಾನ ಮಂತ್ರಿಗಳು ಹೇಳಿರುವ ಸೂಚನೆಯನ್ನು ತಪ್ಪದೇ ಪಾಲಿಸಿ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.