ಬೆಂಗಳೂರು: ನೀನಾಸಂ ಸತೀಶ್ ಅಭಿನಯದ ಬ್ರಹ್ಮಚಾರಿ ಸಿನಿಮಾ ಇದೇ ವಾರ ಪ್ರೇಕ್ಷಕರ ಮುಂದೆ ತೆರೆ ಕಾಣಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀನಾಸಂ ಸತೀಶ್, ನನ್ನ ಎಂಟ್ರಿ ಸೀನ್ ಭಾರತೀಯ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್ ಬಿಟ್ಟರೆ ನಾನೇ ಬ್ರಹ್ಮಚಾರಿ ಸಿನಿಮಾದಲ್ಲಿ ಮಾಡಿದ್ದೇನೆ ಎಂದರು. ಇನ್ನು ಈ ಚಿತ್ರವನ್ನು ಯಾಕೆ ನೋಡಬೇಕು ಅನ್ನುವುದರ ಬಗ್ಗೆ ಉತ್ತರ ನೀಡಿದ್ದು, ಬ್ರಹ್ಮಚಾರಿ ಸಿನಿಮಾ ನೋಡಿದ್ಮಲೇ ನಮ್ಮ ಕರ್ನಾಟಕದಲ್ಲಿ ವಿಚ್ಛೇದನ ಕೇಸ್ಗಳು ಕಡಿಮೆ ಆಗುತ್ತದೆ ಎಂದು ನೀನಾಸಂ ಸತೀಶ್ ಭವಿಷ್ಯ ನುಡಿದಿದ್ದಾರೆ.
ಅಷ್ಟೇ ಅಲ್ಲದೇ ನೀನಾಸಂ ಸತೀಶ್, ಸಿನಿಮಾ ನೋಡುವ ಪ್ರೇಕ್ಷಕರಿಗೆ ಒಂದು ಚಾಲೆಂಜ್ ಹಾಕಿದ್ದಾರೆ. ಬ್ರಹ್ಮಚಾರಿ ಸಿನಿಮಾವನ್ನು ನೋಡಿ ನಗಲಿಲ್ಲ, ಅಂದ್ರೆ ಅಂತಹ ಪ್ರೇಕ್ಷಕರಿಗೆ ಟಿಕೆಟ್ ಬೆಲೆಯ ಡಬ್ಬಲ್ ದುಡ್ಡನ್ನು ವಾಪಸ್ ಕೊಡ್ತೀನಿ ಎಂದು ಆಫರ್ ಕೊಟ್ಟಿದ್ದಾರೆ.